Advertisement

ಅನ್ಯರ ಅನುಕರಣೆ ಬೇಡ

11:43 AM Oct 30, 2017 | |

ಬೆಂಗಳೂರು: ಆಟದಲ್ಲಿ ಧೋನಿ, ಕೊಹ್ಲಿ ಅವರನ್ನು ಅನುಕರಣೆ ಮಾಡುವುದು ಹೆಚ್ಚುಗಾರಿಕೆ ಅಲ್ಲ. ಹೊಸ ಆಟಗಾರರು ತಮ್ಮದೇ ಶೈಲಿಯ ಮೂಲಕ ಆಟದಲ್ಲಿ ಸ್ವಂತಿಕೆ ಕಂಡುಕೊಳ್ಳುವುದು ಮುಖ್ಯ ಎಂದು ಭಾರತೀಯ ಕ್ರಿಕೆಟ್‌ ತಂಡದ ಮಾಜಿ ನಾಯಕ ರಾಹುಲ್‌ ಡ್ರಾವಿಡ್‌ ಅಭಿಪ್ರಾಯಪಟ್ಟರು.

Advertisement

“ಬೆಂಗಳೂರು ಸಾಹಿತ್ಯ ಹಬ್ಬ’ದ ಸಂವಾದ ಗೋಷ್ಠಿಯಲ್ಲಿ ಹಿರಿಯ ಪತ್ರಕರ್ತ ರಾಜ್‌ದೀಪ್‌ ಸರ್‌ದೇಸಾಯಿ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಈಗ ಕ್ರಿಕೆಟ್‌ನ ಸ್ಥಿತಿ ತುಂಬಾ ಬದಲಾಗಿದೆ. ಮೊದಲೆಲ್ಲ ಬೆಂಗಳೂರು ಬಿಟ್ಟರೆ ಬೇರೆ ಕಡೆ ಮೂಲ ಸೌಕರ್ಯಗಳು ಮತ್ತು ಅವಕಾಶಗಳು ಇರಲಿಲ್ಲ.

ದೂರದರ್ಶನ ಮತ್ತು ಅಂತರ್ಜಾಲ ಕ್ರಿಕೆಟ್‌ಗೆ ವ್ಯಾಪಕತೆ ಮತ್ತು ಜನಪ್ರಿಯತೆ ಒದಗಿಸಿಕೊಟ್ಟಿದೆ. ಆಟಗಾರರು ಇದರಿಂದ ಸಾಕಷ್ಟು ಕಲಿತುಕೊಳ್ಳಲು ಸಾಧ್ಯವಾಯಿತು. ಕ್ರಿಕೆಟ್‌ನ್ನು ಒಂದು ವೃತ್ತಿಯನ್ನಾಗಿ ಸ್ವೀಕರಿಸುವ ಈ ಹಿಂದೆ ಇದ್ದ ಆತಂಕ ಈಗ ಇಲ್ಲ. ಹಣ, ಜನಪ್ರಿಯತೆ ಕಾರಣಕ್ಕೆ ಬೇಗ ನಿವೃತ್ತರಾಗಲೂ ಯಾರೂ ಬಯಸುವುದಿಲ್ಲ ಎಂದು ತಿಳಿಸಿದರು.

ಇ.ಎ.ಎಸ್‌ ಪ್ರಸನ್ನ ಮಾತನಾಡಿ, ದಿನಕ್ಕೆ 5 ರೂ. ಸಂಭಾವನೆಗೆ ರಣಜಿ ಟ್ರೋಫಿ ಆಡಲು ಆಯ್ಕೆಯಾಗಿದ್ದು ನಾನು ಎಂದಿಗೂ ಮರೆಯುವುದಿಲ್ಲ ಎಂದರು. 1983ರ ವಿಶ್ವಕಪ್‌ನಲ್ಲಿ ಅತ್ಯುತ್ತಮ ವಿಕೆಟ್‌ ಕೀಪರ್‌ ಪ್ರಶಸ್ತಿ ಲಭಿಸಿದ್ದು ನನ್ನ ಕ್ರಿಕೆಟ್‌ ಜೀವನದ ಅಭಿಮಾನದ ದಿನ ಎಂದು ಸೈಯದ್‌ ಕಿರ್ಮಾನಿ ಹೇಳಿದರು. ಬಿ.ಎಸ್‌. ಚಂದ್ರಶೇಖರ್‌ ಇದ್ದರು. ಈ ವೇಳೆ ರಾಜ್‌ದೀಪ್‌ ಸರ್‌ದೇಸಾಯಿ ಅವರ “ಇಂಡಿಯನ್‌ ಡೆಮಾಕ್ರಸಿ ಗಿಐ’ ಪುಸ್ತಕ ಬಿಡುಗಡೆಗೊಳಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next