Advertisement

ಆಮಿಷಗಳಿಗೆ ಬಲಿಯಾಗಬೇಡಿ

12:08 PM May 04, 2018 | |

ಸಂಡೂರು: “ಓಟು ಹಾಕಿ ನೋಟು ಬೇಡ, ನೋಟಿಗಾಗಿ ಓಟಲ್ಲ, ಕರ್ತವ್ಯಕ್ಕಾಗಿ ಓಟು’ ಎಂಬ ಘೋಷಣೆಯನ್ನು ನಾವು
ಅಳವಡಿಸಿಕೊಳ್ಳಬೇಕೆಂದು ಎಂದು ಡಾನ್‌ ಬಾಸ್ಕೋ ಸಂಸ್ಥೆಯ ಹಗರಿಬೊಮ್ಮನಹಳ್ಳಿಯ ಸಂಯೋಜಕ ನಾಗರಾಜ್‌ ಕರೆ ನೀಡಿದರು.

Advertisement

ತಾಲೂಕಿನ ಜೈಸಿಂಗ್‌ಪುರ ಗ್ರಾಮದಲ್ಲಿ ಡಾನ್‌ಬಾಸ್ಕೋ ತಾಲೂಕು ವಿಭಾಗದ ವತಿಯಿಂದ ಆಯೋಜಿಸಿದ್ದ ಮತದಾನ
ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ನಾವೆಲ್ಲರೂ ಸಹ ಮತ ಹಾಕುವುದು ಹಣಕ್ಕಾಗಿಯೇ ಎನ್ನುವ
ಭಾವನೆ ಬರುವಂತೆ ರಾಜಕಾರಣಿಗಳು ತೋರಿಸುವ ಆಮಿಷಗಳಿಗೆ ಬಲಿಯಾಗಿ ನಮ್ಮ ಮನಸ್ಥಿತಿಯನ್ನು ಬದಲಿಸಿಕೊಂಡಿದ್ದೇವೆ.

ಆದರೆ ಸಂವಿಧಾನ ಬದ್ಧವಾಗಿ ನಮಗೆ ಮತದಾನದ ಹಕ್ಕು ಹೊಂದಿದ್ದೇವೆ. ಇದು ಬರೀ ಹಕ್ಕಲ್ಲ. ನಮ್ಮ ಕರ್ತವ್ಯವಾಗಿದೆ.

ಆದ್ದರಿಂದ ಪ್ರತಿಯೊಬ್ಬರೂ ಸಹ ನಮ್ಮ ಹಕ್ಕನ್ನು ನಿರ್ಭಿತಿಯಿಂದ ಚಲಾಯಿಸಬೇಕಾದರೆ “ಓಟು ಬೇಕು, ನೋಟು ಬೇಡ’ ಎನ್ನುವ ಅಂಶಗಳನ್ನು ಅಳವಡಿಸಿಕೊಂಡು ನಮ್ಮ ಸಂವಿಧಾನ ಬದ್ಧ ಕರ್ತವ್ಯವನ್ನು ನಿಭಾಯಿಸೋಣ ಎಂದರು. 

ತಾಲೂಕು ಡಾನ್‌ಬಾಸ್ಕೋ ಸಂಸ್ಥೆಯ ಸಂಯೋಜಕಿ ರೇಣುಕಮ್ಮ ಮಾತನಾಡಿ, ಮಹಿಳೆಯರಿಗೆ ಬಂಗಾರ, ಸೀರೆಗಳ ಆಮಿಷ ಒಡ್ಡಲಾಗುತ್ತದೆ. ಈ ಕ್ಷಣಿಕ ಆಮಿಷಗಳಿಗೆ ಬಲಿಯಾಗದೆ, ಶಾಶ್ವತವಾಗಿ ಸಂವಿಧಾನ ನೀಡಿರುವಂತಹ ಹಕ್ಕನ್ನು ಕಳೆದುಕೊಳ್ಳಬೇಡಿ, ಮಾರಬೇಡಿ ಎನ್ನುವ ಸೂತ್ರ ನಮ್ಮದಾಗಬೇಕು. ಆದ್ದರಿಂದ ಪ್ರತಿಯೊಬ್ಬರೂ ಸಹ ಸ್ವತಂತ್ರ್ಯವಾಗಿ ಮತದಾನ ಮಾಡಬೇಕೆಂದು ಕರೆ ನೀಡಿದರು.

Advertisement

ಈ ಸಂದರ್ಭದಲ್ಲಿ ಶಿಕ್ಷಕಿ ಪೂಜಾ, ಗ್ರಾಮದ ಗಣ್ಯರು, ಡಾನ್‌ಬಾಸ್ಕೋ ಸಂಸ್ಥೆಯ ಸಿಬ್ಬಂದಿಗಳು, ಮಕ್ಕಳು, ಸ್ವ ಸಹಾಯ ಸಂಘದ ಸದಸ್ಯರು ಮತದಾನ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next