Advertisement

ನಿಮ್ಮ ಪಾರ್ಟಿಗೆ ನಮ್ಮನ್ನು ಕರೀಬೇಡಿ!

12:20 PM Jan 01, 2018 | Team Udayavani |

ಬೆಂಗಳೂರು: “ಮದ್ಯ ಸೇವಿಸಿ ವಾಹನ ಚಲಾಯಿಸಬೇಡಿ. ಪಾರ್ಟಿಯ ಬಳಿಕವೂ ನಿಮಗಾಗಿ ಯಾರೋ ಕಾಯುತ್ತಿರುತ್ತಾರೆ’, “ನಿಮ್ಮ ಪಾರ್ಟಿಗೆ ನಮ್ನನ್ನು ಆಹ್ವಾನಿಸದಿರಿ. ನಿಮ್ಮಿಂದ ದೂರ ಉಳಿಯುವುದೇ ನಮಗೆ ಸಂತೋಷದ ವಿಚಾರ.’

Advertisement

ಇದು ಹೊಸ ವರ್ಷದ ಮುನ್ನಾ ದಿನ ಬೆಂಗಳೂರು ಸಿಟಿ ಪೊಲೀಸ್‌ ಟ್ವಿಟರ್‌ ಖಾತೆಯಲ್ಲಿ ಕಂಡುಬಂದ ಟ್ವೀಟ್‌ಗಳು. ನಗರದ ಪೊಲೀಸರು ಹೊಸ ವರ್ಷದ ಪಾರ್ಟಿ ಮಾಡುವವರಿಗೆ ತಮ್ಮ ಟ್ವಿಟರ್‌ ಖಾತೆ ಮೂಲಕ ಜನಜಾಗೃತಿ ಮೂಡಿಸಿದ್ದು ಹೀಗೆ.

ಸೇಫ್ ಆಚರಣೆಗೆ ಪ್ರೋತ್ಸಾಹ ನೀಡುವಂಥ ಟ್ವೀಟ್‌ಗಳ ಜೊತೆಗೇ, ವರ್ಷಾಂತ್ಯದ ಪಾರ್ಟಿಯಲ್ಲಿ ಕುಡಿದು ತೂರಾಡಿ, ಅವಘಡ, ಕಿರುಕುಳದಂಥ ಘಟನೆಗೆ ಕಾರಣರಾಗುವವರಿಗೆ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದ್ದಾರೆ. ಬೆಂಗಳೂರು ಸಿಟಿ ಪೊಲೀಸ್‌ ಹ್ಯಾಷ್‌ಟ್ಯಾಗ್‌ನಲ್ಲಿ ಭಾನುವಾರ ರಾತ್ರಿ ಕಂಡುಬಂದ ಕೆಲವು ಟ್ವೀಟ್‌ಗಳು ಇಲ್ಲಿವೆ.

ಟ್ವೀಟ್‌ ಝಲಕ್‌
-ಮದ್ಯಪಾನದ ನಶೆಯಲ್ಲಿ ಮಾಡದಿರಿ ಸಾರ್ವಜನಿಕವಾಗಿ ಅವಾಂತರ, ಎಸಗಿದರೆ ನಿಮ್ಮ ಅಸ್ತಿತ್ವ ಮರುಕ್ಷಣವೇ ನಮ್ಮೆಡೆಗೆ ಸ್ಥಳಾಂತರ.

-ಇದು ಹೊಸ ವರ್ಷ. ಸುರಕ್ಷತೆಯೇ ನಿಮ್ಮ ಆದ್ಯತೆಯಾಗಲಿ. ನಾಳೆ ವಿಳಂಬ ಆಗೋದು ಬೇಡ.

Advertisement

-ಸನ್ನಡತೆಯ ವರ್ತನೆಯಿರಲಿ ಮಕ್ಕಳು ಮತ್ತು ಮಹಿಳೆಯರೊಂದಿಗೆ, ದುರ್ನಡತೆ ಎಸಗಿದವರ ವಿರುದ್ಧ ಮೊಳಗುವುದು ಕಠಿಣ ಕ್ರಮದ ಕಹಳೆ.

-ಚೆನ್ನಾಗಿ ಪಾರ್ಟಿ ಮಾಡಿ. ಆದರೆ, ಕುಡಿದು ವಾಹನ ಚಲಾಯಿಸಬೇಡಿ. ನಾವು ನಿಮ್ಮನ್ನು ತಡೆಯುತ್ತೇವೆ ಎಂಬ ಭಯಕ್ಕೆ ಮಾತ್ರವಲ್ಲ, ನಾಳೆ ಏನೂ ಉಳಿಯದಿದ್ದರೆ?

-ಎಲ್ಲರಿಗೂ ಹೊಸ ವರ್ಷ ಆಚರಿಸುವ ಹಕ್ಕಿದೆ. ಮಹಿಳೆಯರಿಗೂ ಕೂಡ. ಅವರೊಂದಿಗೆ ಅಸಭ್ಯವಾಗಿ ವರ್ತಿಸಿದರೆ, ಜೋಕೆ!

-ವಿಪರೀತ ತಲೆನೋವು ಮತ್ತು ಹ್ಯಾಂಗೋವರ್‌ ಮೂಲಕ ಹೊಸ ವರುಷದ ಬೆಳಕನ್ನು ನೋಡುವುದರಲ್ಲಿ ಏನಿದೆ ಖುಷಿ? ಕಡಿಮೆ ಕುಡಿಯಿರಿ, ಜವಾಬ್ದಾರಿಯುತವಾಗಿ ವರ್ತಿಸಿರಿ.

-ಮದ್ಯ ಸೇವಿಸಿ ವಾಹನ ಚಲಾಯಿಸಬೇಡಿ. ಪಾರ್ಟಿಯ ಬಳಿಕವೂ ನಿಮಗಾಗಿ ಯಾರೋ ಕಾಯುತ್ತಿರುತ್ತಾರೆ.

-ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದ್ರೆ, ನಿಮಗೆ ಹೊಸ ಬಾರ್‌ (ಕಂಬಿ) ನಾವು ತೋರಿಸುತ್ತೇವೆ.

-ಬದುಕಲ್ಲಿ ಒಂದು ನಿಮಿಷವನ್ನು ಕಳೆದುಕೊಳ್ಳಬಹುದು, ಆದರೆ ಒಂದು ನಿಮಿಷದಲ್ಲಿ ಬದುಕನ್ನು ಕಳೆದುಕೊಳ್ಳಬೇಡಿ.

-ಒಂದು ಕಾರನ್ನು ಮಾಡಲು ನೂರಾರು ಬೋಲ್ಟ್‌ಗಳು ಬೇಕು. ಆದರೆ, ಅದೇ ಕಾರನ್ನು ರಸ್ತೆಯಿಡೀ ಚೆಲ್ಲಾಡುವಂತೆ ಮಾಡಲು ಒಂದು ನಟ್‌ ಸಾಕು.

-ವರ್ಷಾಂತ್ಯ, ಮಾಸಾಂತ್ಯ, ವಾರಾಂತ್ಯ… ಆದ್ರೆ, ಮದ್ಯ ಸೇವಿಸಿ ವಾಹನ ಚಲಾಯಿಸುವವರ ವಿರುದ್ಧದ ನಮ್ಮ ಕ್ರಮಕ್ಕಿಲ್ಲ ಅಂತ್ಯ. ಬೀ ಕೇರ್‌ಫ‌ುಲ್‌!

Advertisement

Udayavani is now on Telegram. Click here to join our channel and stay updated with the latest news.

Next