Advertisement

ಮಾಡು ಇಲ್ಲವೇ ಮಡಿ ಹೋರಾಟ; ಮೃತ್ಯುಂಜಯ ಸ್ವಾಮೀಜಿ

05:49 PM May 18, 2022 | Team Udayavani |

ಬೈಲಹೊಂಗಲ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಸರ್ಕಾರ ಅ ಧಿವೇಶನದಲ್ಲಿ ಕೊಟ್ಟ ಮಾತಿನಂತೆ ಮೀಸಲಾತಿ ನೀಡದಿದ್ದರೆ ಮೇ 23 ರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಶಿಗ್ಗಾಂವಿಯ ಮನೆಯಿಂದಲೇ ಹೋರಾಟ ಆರಂಭಿಸಿ ರಾಜ್ಯಾದ್ಯಂತ ಜಿಲ್ಲಾ ಧಿಕಾರಿಗಳ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು. ಇದು ಪಂಚಮಸಾಲಿ 2ಎ ಮೀಸಲಾತಿಗಾಗಿ ಮಾಡು ಇಲ್ಲವೇ ಮಡಿ ಹೋರಾಟವಾಗಲಿದೆ ಎಂದು ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

Advertisement

ಮಂಗಳವಾರ ಪಟ್ಟಣದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ತಾಲೂಕು ಘಟಕದಿಂದ 2ಎ ಮೀಸಲಾತಿಗೆ ಒತ್ತಾಯಿಸಿ ನಡೆದ ಬೃಹತ್‌ ಪ್ರತಿಭಟನಾ ಮೆರವಣಿಗೆ ನೇತೃತ್ವವಹಿಸಿ ಅವರು ಮಾತನಾಡಿ, ಸರ್ಕಾರ ಸಮಾಜದ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ನಿಷ್ಕಾಳಜಿ ಮಾಡಿದರೆ ಬರುವ ದಿನಮಾನಗಳಲ್ಲಿ ಸಮಾಜದ ಜನರು ತಕ್ಕ ಪಾಠ ಕಲಿಸಬೇಕಾಗುತ್ತದೆ. ಕಾಲಹರಣ ಮಾಡದೆ ಸಮಾಜದ ಬೇಡಿಕೆಯಾಗಿರುವ 2ಎ ಮೀಸಲಾತಿ ನೀಡಿ
ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.

ಕಾಡಾ ಅಧ್ಯಕ್ಷ ಡಾ| ವಿಶ್ವನಾಥ ಪಾಟೀಲ, ತಾಲೂಕು ಅಧ್ಯಕ್ಷ ಶ್ರೀಶೈಲ ಬೋಳನ್ನವರ, ಮಹಾಂತೇಶ ತುರಮರಿ, ಶಂಕರ ಮಾಡಲಗಿ, ಎಫ್‌. ಎಸ್‌.ಸಿದ್ದನಗೌಡರ, ಪಂಚನಗೌಡ ದ್ಯಾಮನಗೌಡರ, ರೋಹಿಣಿ ಬಾಬಾಸಾಹೇಬ ಪಾಟೀಲ, ಗೀತಾಂಜಲಿ ಮಾತನಾಡಿದರು. ಮಿನಿ ವಿಧಾನಸೌಧದಲ್ಲಿರುವ ಬಸವೇಶ್ವರ ಮೂರ್ತಿ, ಚೆನ್ನಮ್ಮ ವೃತ್ತದಲ್ಲಿರುವ ಚನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆ ಇಂಚಲ
ಕ್ರಾಸ್‌, ಎಪಿಎಂಸಿ ಗಣೇಶ ದೇವಸ್ಥಾನ, ಬಸ್‌ ನಿಲ್ಸಾಣ , ರಾಯಣ್ಣ ವೃತ್ತ, ಮೂಲಕ ಎಸಿ ಕಚೇರಿ ತಲುಪಿತು.

ಪುರಸಭೆ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಮಾಜಿ ಅಧ್ಯಕ್ಷ ಬಾಬು ಕುಡಸೋಮಣ್ಣವರ, ಸೋಮೇಶ್ವರ ಕಾರ್ಖಾನೆ ಉಪಾಧ್ಯಕ್ಷ ರಾಜು ಕುಡಸೋಮಣ್ಣವರ, ಮುಖಂಡರಾದ ಮಹೇಶ ಹರಕುಣಿ, ಮುರುಗೇಶ ಗುಂಡ್ಲೂರ, ಶ್ರೀಶೈಲ ಯಡಳ್ಳಿ, ಮಹಾಂತೇಶ ಮತ್ತಿಕೊಪ್ಪ, ಎಂ.ವಾಯ್‌,ಸೋಮನ್ನವರ, ರಾಜಶೇಖರ ಮೂಗಿ, ವಿರೇಶ ಹಲಕಿ, ಗಂಗಾಧರ ಹುಲಕುಂದ, ಶ್ರೀಶೈಲ ಶರಣಪ್ಪನವರ, ಸಂಜೀವಗೌಡರ ಫಾಟೀಲ, ಆರ್‌.ಕೆ.ಪಾಟೀಲ,ಪಿರಗೋಜಿ, ಈರಣ್ಣಾ ಬೇಟಗೇರಿ, ಮಹಾಂತೇಶ ಗುಂಡ್ಲೂರ, ಎಸ್‌.ಬಿ.ಸಂಗನಗೌಡರ ವಿವಿಧ ಗ್ರಾಮಗಳಿಂದ ಆಗಮಿಸಿದ ನೂರಾರು ಪಂಚಮಸಾಲಿ ಸಮಾಜದವರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next