Advertisement

ನಾಯಿಗಳಿಗೆ ಟೆಲಿಪಥಿ ಗೊತ್ತೇ?

04:26 PM May 17, 2018 | Harsha Rao |

ಇನ್ನೊಬ್ಬರ ಮನಸ್ಸನ್ನು ಓದುವ ಟೆಲಿಪಥಿ ವಿದ್ಯೆ ಮನಷ್ಯರಲ್ಲಿ ಕೆಲವೇ ಮಹನೀಯರಿಗೆ ಸಿದ್ಧಿಸಿರುವುದು. ಅಂಥವರು ಒಂದೋ ಶಿಷ್ಯವೃಂದ ಕಟ್ಟಿಕೊಂಡು ಪ್ರವಚನ ಕೊಟ್ಟು ಸ್ವಯಂಘೋಷಿತ ಮಹಾ ಪುರುಷರಾಗುತ್ತಾರೆ, ಇಲ್ಲವೇ ಶ್ರೀಮಂತರ ಮನೆಗಳಿಗೆ ಕನ್ನ ಹಾಕುವ ನಿಷ್ಣಾತ ಖದೀಮರಾಗುತ್ತಾರೆ. ಇವೆರಡು ವೃತ್ತಿಗಳಲ್ಲೂ ಹೆಚ್ಚು ವ್ಯತ್ಯಾಸವೇನಿಲ್ಲವಲ್ಲ! ಟೆಲಿಪಥಿ ವಿದ್ಯೆ ಗೊತ್ತಿರುವ ಮನುಷ್ಯ ಒಬ್ಬನೇ ಅಲ್ಲ, ನಾಯಿಗೂ ಈ ವಿದ್ಯೆಯ ಪರಿಚಯವಿದೆ ಎಂಬುದು ಸಂಶೋಧನೆಯೊಂದರಿಂದ ತಿಳಿದುಬಂದಿದೆ. ಮನೆಯ ಯಜಮಾನ ತಿಂಡಿ ಸರಬರಾಜು ಮಾಡುವುದು, ವಾಕಿಂಗ್‌ಗೆ ಕರೆದೊಯ್ಯುವುದು ಹೀಗೆ ಅನೇಕ ಚಟುವಟಿಕೆಗಳನ್ನು ಸೂಕ್ಷ್ಮಗ್ರಾಹಿ ನಾಯಿಗಳು ಮುಂಚಿತವಾಗಿಯೇ ಗ್ರಹಿಸಬಲ್ಲವು. ನಿಜ ಹೇಳಬೇಕೆಂದರೆ, ಅದಕ್ಕೆ ಕಾರಣ ಅವು ಟೆಲಿಪಥಿ ವಿದ್ಯೆಯನ್ನು ಅರೆದು ಕುಡಿದಿರುವುದಿಲ್ಲ.  ಅದಕ್ಕೆ ಕಾರಣ, ಮನುಷ್ಯ ಮತ್ತು ನಾಯಿಯ ಹದಿನೈದು ಸಾವಿರ ವರ್ಷಗಳ ಸಾಂಗತ್ಯ! ಅಷ್ಟು ದೀರ್ಘ‌ ಕಾಲದಿಂದ ಮನುಷ್ಯ ಮತ್ತು ನಾಯಿಯ ನಡುವೆ ಸಾಮರಸ್ಯ ಏರ್ಪಟ್ಟಿರುವುದು ಆಶ್ಚರ್ಯವೇ ಸರಿ.

Advertisement

ಹದಿನೈದು ಸಾವಿರ ವರ್ಷವಿರಲಿ, ಮನುಷ್ಯನೊಬ್ಬ ತನ್ನ ಜೀವಿತಾವಧಿಯಲ್ಲಿ ನೂರಾರು ಪರಿಚಯಸ್ಥರೊಂದಿಗೆ ರಾಜಕೀಯ, ಜಾತಿ, ವೈಯಕ್ತಿಕ..ಹೀಗೆ ನಾನಾ ವಿಷಯಗಳಿಗೆ ಜಗಳಕ್ಕಿಳಿದು, ಕಿತ್ತಾಡಿಕೊಂಡು ಸಾಯುತ್ತಾನೆ. ಹೀಗಿರುವಾಗ ಮಾನವ ಜನಾಂಗ, ಕಾಲಘಟ್ಟದ ಒಂದು ದೊಡ್ಡ ತುಣುಕಿನಷ್ಟು ಭಾಗ ನಾಯಿಯ ಜೊತೆ ಉತ್ತಮ ಸಂಬಂಧವಿಟ್ಟುಕೊಂಡಿರುವುದು ನಿಜಕ್ಕೂ ಆಶ್ಚರ್ಯವಲ್ಲವೆ?

Advertisement

Udayavani is now on Telegram. Click here to join our channel and stay updated with the latest news.

Next