ಬೆಂಗಳೂರು: ಸರಕಾರದ ಮುಂದಿನ ಆದೇಶದವರೆಗೂ ವೈದ್ಯಕೀಯ ವಿದ್ಯಾರ್ಥಿಗಳಿಗೆ ನಿರಂತರ ಆನ್‌ಲೈನ್ ತರಗತಿ ನಡೆಸುತ್ತಿ ರಬೇಕು ಎಂದು ವೈದ್ಯಕೀಯ ಕಾಲೇಜಿನ ಮುಖ್ಯಸ್ಥರಿಗೆ, ಪ್ರಾಂಶುಪಾಲರಿಗೆ ಹಾಗೂ ವಿಭಾಗದ ಮುಖ್ಯಸ್ಥರಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ.ಸುಧಾಕರ್ ಸೂಚನೆ ನೀಡಿದ್ದಾರೆ.
ಬುಧವಾರ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ವಿವಿ ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರು, ಪ್ರಾಂಶುಪಾಲರು ಹಾಗೂ ವಿಭಾಗದ ಮುಖ್ಯಸ್ಥರೊಂದಿಗೆ ನಡೆದ ಆನ್‌ಲೈನ್ ಸಂವಾದದಲ್ಲಿ ಈ ಸೂಚನೆ ನೀಡಿದ್ದಾರೆ.
ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳಿಂದ ಶುಲ್ಕ ವಸೂಲಿಗೆ ಈಗ ಮುಂದಾಗಬಾರದು. ಖಾಸಗಿ ವೈದ್ಯಕೀಯ ಕಾಲೇಜು ಇರುವ ಆಸ್ಪತ್ರೆಗಳಲ್ಲಿವ ಟೆಸ್ಟಿಂಗ್ ಲ್ಯಾಬ್ ನೀಡಬೇಕು. ಒಂದು ವಾರ್ಡ್ ಕೋವಿಡ್-19ಗಾಗಿ ಮೀಸಲಿಡಬೇಕು ಎಂದು ಕೋರಿದರು.
ಕೋವಿಡ್-19 ವಿರುದ್ಧ ಕಳೆದ ಎರಡು ತಿಂಗಳಿಂದ ರಾಜ್ಯ ಸರಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಎಲ್ಲ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ವರ್ಷದ ಅಂತ್ಯದಲ್ಲಿವೆ. ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಎಂಬಿಬಿಎಸ್ ಹಾಗೂ ಬಿಡಿಎಸ್ ಕೋರ್ಸ್‌ಗಳನ್ನು ಅತೀ ಶೀಘ್ರದಲ್ಲಿ ಆರಂಭಿಸಲು ಎಲ್ಲ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದರು.
ವೈದ್ಯರು ಅಥವಾ ಸಿಬಂದಿಗೆ ವೇತನ ಕಡಿತ ಮಾಡಬಾರದು, ಉದ್ಯೋಗದಿಂದ ತೆಗೆಯ ಬಾರದು. ಎಂದು ಸೂಚನೆ ನೀಡಿದರು.