ಚೆನ್ನೈ: ತಮಿಳುನಾಡಿನ ಆಡಳಿತ ಪಕ್ಷವಾಗಿರುವ ಡಿಎಂಕೆಯ ರಾಜ್ಯಸಭಾ ಸಂಸದ ತಿರುಚಿ ಶಿವ ಅವರ ಮಗ ಸೂರ್ಯ ಶಿವ ರವಿವಾರ ಬಿಜೆಪಿ ಸೇರಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಮತ್ತು ಪಕ್ಷದ ಹಲವು ನಾಯಕರ ಸಮ್ಮುಖದಲ್ಲಿ ಅವರು ಬಿಜೆಪಿ ಸೇರಿಕೊಂಡಿದ್ದಾರೆ.
ಬಿಜೆಪಿ ಸೇರಿದೊಡನೆಯೇ ಡಿಎಂಕೆಯನ್ನು ದೂರಿರುವ ಅವರು, “ಡಿಎಂಕೆಯಲ್ಲಿ ಕಷ್ಟಪಟ್ಟು ದುಡಿಯುವ ಕಾರ್ಯಕರ್ತರನ್ನು ಗುರುತಿಸುವುದಿಲ್ಲ. ಕುಟುಂಬ ರಾಜಕಾರಣ ಮಾಡುತ್ತಾರೆ. ನನಗೆ ನನ್ನ ಕುಟುಂಬದೊಂದಿಗೂ ವೈಮನಸ್ಸು ಇದೆ. ಬಿಜೆಪಿ ನಾನು ಮಾಡುವ ಕೆಲಸವನ್ನು ಗುರುತಿಸುತ್ತದೆ ಎನ್ನುವ ನಂಬಿಕೆಯೊಂದಿಗೆ ಪಕ್ಷಕ್ಕೆ ಸೇರಿಕೊಂಡಿದ್ದೇನೆ.
2024ರ ಚುನಾವಣೆಯಲ್ಲಿ ಬಹುಮತದೊಂದಿಗೆ ರಾಜ್ಯದಲ್ಲಿ ಸರಕಾರ ರಚಿಸುವ ಸಾಮರ್ಥ್ಯ ಬಿಜೆಪಿಗಿದೆ’ ಎಂದಿದ್ದಾರೆ.