Advertisement

2021ರ ಚುನಾವಣೆ: ಡಿಎಂಕೆಗೆ ಪ್ರಶಾಂತ್‌ ನೆರವು?

09:47 AM Nov 30, 2019 | Team Udayavani |

ಚೆನ್ನೈ: 2021ರ ತಮಿಳುನಾಡು ವಿಧಾನ ಸಭಾ ಚುನಾವಣೆಗೆ ಪಕ್ಷಗಳು ಈಗಲೇ ಸಿದ್ಧ ವಾಗುತ್ತಿವೆ. ಈ ಬಾರಿಯಾದರೂ ತಮಿಳುನಾಡಿನಲ್ಲಿ ಅಧಿಕಾರಕ್ಕೇರಬೇಕೆಂಬ ಹಂಬಲದಲ್ಲಿರುವ ಎಂ.ಕೆ. ಸ್ಟಾಲಿನ್‌ ನೇತೃತ್ವದ ಡಿಎಂಕೆ, ಈ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಿಟ್ಟಿದೆ. ಭಾರತದ ಚುನಾವಣಾ ರಾಜಕಾರಣದಲ್ಲಿ ಹಲವು ಪ್ರಮುಖ ಮೈಲುಗಲ್ಲುಗಳಿಗೆ ಕಾರಣವಾಗಿರುವ, ಪ್ರಶಾಂತ್‌ ಕಿಶೋರ್‌ ನೆರವು ಪಡೆಯಲು ಡಿಎಂಕೆ ಸಜ್ಜಾಗಿದೆ. ಐ-ಪ್ಯಾಕ್‌ (ಇಂಡಿಯನ್‌ ಪೊಲಿಟಿಕಲ್‌ ಆ್ಯಕ್ಷನ್‌ ಕಮಿಟಿ) ನೇತಾರ ಪ್ರಶಾಂತ್‌ ಕಿಶೋರ್‌ ಜತೆಗೆ ಮಾತುಕತೆ ಶುರುವಾದ ಹಿನ್ನೆಲೆಯಲ್ಲಿ, ಕೆ. ಸುನೀಲ್‌ ಅವರು ಡಿಎಂಕೆ ಪ್ರಚಾರ ವಿಭಾಗದಿಂದ ಹೊರಬಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next