Advertisement

ತಮಿಳುನಾಡು ಸಿಎಂ ಸ್ಟಾಲಿನ್‌ ಹುಟ್ಟುಹಬ್ಬಕ್ಕೆ ಗೋಲ್ಡ್‌ ಗಿಫ್ಟ್!

12:45 AM Feb 27, 2023 | Team Udayavani |

ಚೆನ್ನೈ: ಡಿಎಂಕೆ ನಾಯಕ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಡಿಎಂಕೆ ಭಾರೀ ಸಿದ್ಧತೆ ನಡೆಸಿದೆ.

Advertisement

ಮಾ.1ರಂದು ಸಿಎಂ ಬರ್ತ್‌ಡೇ ದಿನ ಹುಟ್ಟುವ ಶಿಶುಗಳಿಗೆ ಚಿನ್ನದ ಉಂಗುರ, ಸಾರ್ವಜನಿಕ ಸಭೆ, ಕ್ರೀಡಾ ಸಮಾರಂಭ, ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಈ ಕುರಿತು ಪಕ್ಷ ಪ್ರಕಟನೆ ಹೊರಡಿಸಿದ್ದು, ನಮ್ಮ ನಾಯಕ ಸ್ಟಾಲಿನ್‌ 70ನೇ ವರ್ಷಕ್ಕೆ ಕಾಲಿಡುತ್ತಿರುವ ಸಂಭ್ರಮಕ್ಕೆ ನೀವೆಲ್ಲರೂ ಸಾಕ್ಷಿಯಾಗಬೇಕು.

ರೈತರಿಗೆ ಸಸಿದಾನ, ಸಾಮೂಹಿಕ ಸೀಮಂತ ಕಾರ್ಯಕ್ರಮ, ರಕ್ತದಾನ ಶಿಬಿರ ಸಹಿತ ವಿವಿಧ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ.

ಸ್ಟಾಲಿನ್‌ ಬರ್ತ್‌ ಡೇಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಹಿತ ವಿವಿಧ ವಿಪಕ್ಷಗಳ ನಾಯಕರೂ ಭಾಗಿಯಾಗಲಿದ್ದಾರೆ ಎಂದಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next