Advertisement

Lok Sabha Election: ತಮಿಳುನಾಡಿನ ದಿಂಡಿಗಲ್‌, ಮಧುರೈನಲ್ಲಿ ಸಿಪಿಎಂ ಸ್ಪರ್ಧೆ

09:56 PM Mar 12, 2024 | Team Udayavani |

ಚೆನ್ನೈ: ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷವು ಇಂಡಿಯಾ ಒಕ್ಕೂಟದ ಮೈತ್ರಿ ಪಕ್ಷಗಳಾದ ಸಿಪಿಎಂ ಮತ್ತು ಸಿಪಿಐಗೆ ಲೋಕಸಭೆ ಸೀಟು ಹಂಚಿಕೆ ಅಂತಿಮಗೊಳಿಸಿದೆ. ಮದುರೈ ಮತ್ತು ದಿಂಡಿಗಲ್‌ ಲೋಕಸಭಾ ಕ್ಷೇತ್ರದಿಂದ ಸಿಪಿಎಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.ನಾಗಪತ್ತಿನಂ, ತಿರುಪ್ಪುರ್‌ ಕ್ಷೇತ್ರದಿಂದ ಸಿಪಿಐ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಡಿಎಂಕೆ ತಿಳಿಸಿದೆ.

Advertisement

ಡಿಎಂಕೆ ಕೇಂದ್ರ ಕಚೇರಿ ಅಣ್ಣಾ ಅರಿವಾಲಯಂನಲ್ಲಿ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್‌ ಅವರ ನೇತೃತ್ವದಲ್ಲಿ ಸಿಪಿಎಂ ರಾಜ್ಯ ಕಾರ್ಯದರ್ಶಿ ಬಾಲಕೃಷ್ಣನ್‌ ಹಾಗೂ ಸಿಪಿಐ ರಾಜ್ಯ ಕಾರ್ಯದರ್ಶಿ ಆರ್‌. ಮುತ್ತರಸನ್‌ ಅವರ ಉಪಸ್ಥಿತಿಯಲ್ಲಿ ಸೀಟು ಹಂಚಿಕೆ ಸಂಬಂಧಿಸಿದ ಒಪ್ಪಂದ ನಡೆದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next