ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ, ಡಿಎಂಕೆ ಶಾಸಕ ಎಂ.ಕರುಣಾನಿಧಿ ಅವರಿಗೆ ಮರಣೋತ್ತರವಾಗಿ ದೇಶದ ಅತ್ಯುನ್ನದ ನಾಗರಿಕ ಗೌರವವಾದ ಭಾರತ ರತ್ನ ಪ್ರಶಸ್ತಿ ನೀಡುವಂತೆ ಡಿಎಂಕೆ ಶಾಸಕರೊಬ್ಬರು ಮತ್ತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಮುಂಬಯಿ: ನೆರೆಹೊರೆಯವರ ಆರೋಪ: 12ನೇ ಮಹಡಿಯಿಂದ ಕೆಳಕ್ಕೆ ಜಿಗಿದು ತಾಯಿ, ಮಗು ಆತ್ಮಹತ್ಯೆ
ತಮಿಳುನಾಡಿನ ವಿಧಾನಸಭೆಯಲ್ಲಿ ತಮ್ಮ ಮೊದಲ ಭಾಷಣದಲ್ಲಿ ಡಿಎಂಕೆ ಶಾಸಕ ಇರುದ್ಯಾರಾಜ್ ಅವರು, ಕರುಣಾನಿಧಿಯವರಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ತಿಳಿಸಿದ್ದರು. ಅಲ್ಲದೇ ತಿರುಚಿರಪಲ್ಲಿಯನ್ನು ತಮಿಳುನಾಡಿನ ಎರಡನೇ ರಾಜಧಾಣಿಯನ್ನಾಗಿ ಘೋಷಿಸುವಂತೆ ಆಗ್ರಹಿಸಿದರು.
ಎಂ.ಕರುಣಾನಿಧಿಯವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಆಡಳಿತಾರೂಢ ಡಿಎಂಕೆ ಬೇಡಿಕೆ ಇಟ್ಟಿರುವುದು ಇದೇ ಮೊದಲ ಬಾರಿಯಲ್ಲ. ಕೆಲವು ವರ್ಷಗಳ ಹಿಂದೆಯೇ ತಮಿಳುನಾಡು ವಿಧಾನಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ, ಕರುಣಾನಿಧಿ ದ್ರಾವಿಡ ಚಳವಳಿಯ ಶ್ರೇಷ್ಠ ನಾಯಕರಾಗಿದ್ದು, ಅವರು ಈ ಅತ್ಯುನ್ನತ ಗೌರವಕ್ಕೆ ಅರ್ಹರು ಎಂದು ಪ್ರತಿಪಾದಿಸಿತ್ತು.
ಡಿಎಂಕೆ ಸ್ಥಾಪಕ ಎಂ.ಕರುಣಾನಿಧಿ ಅವರು ದೀರ್ಘಾವಧಿ ಅನಾರೋಗ್ಯದಿಂದ 2018ರ ಆಗಸ್ಟ್ 7ರಂದು ನಿಧನರಾಗಿದ್ದರು. ಕರುಣಾನಿಧಿ ಅವರು ಐದು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದರು. ಆದರೆ ಅವರು ಯಾವತ್ತೂ ಸಂಸತ್ ಸದಸ್ಯರಾಗಿರಲಿಲ್ಲ ಎಂದು ವರದಿ ತಿಳಿಸಿದೆ.