Advertisement

ನಾನು ಕಾಂಗ್ರೆಸ್ ಕಾರ್ಯಕರ್ತನಾಗಿದ್ದೇನೆ. ಹಾಗೇ ಇರ್ತೇನೆ : ಡಿಕೆಶಿವಕುಮಾರ್  

05:44 PM Jan 02, 2020 | Suhan S |

ಬೆಂಗಳೂರು : ನಮ್ಮ ಪಾರ್ಟಿ ಎಂಎಲ್ಎಗಳು, ಜನತಾದಳ ಎಂಎಲ್ಲೆಗಳು ಬಿಜೆಪಿಯವರಿಗೆ ಗಿಫ್ಟ್ ಕೊಟ್ಟಿದ್ದಾರೆ ಸರ್ಕಾರ ಮಾಡಿ ಅಂತ ಗಿಫ್ಟ್ ಕೊಟ್ಟಿದ್ದಾರೆ ಇಡೀ ಪ್ರಪಂಚದಲ್ಲಿ ನಮ್ಮ ರಾಜ್ಯ ಗಮನ ಸೆಳೆಯುತ್ತಿದೆ ಇಲ್ಲಿ ಆಡಳಿತ ಮಾಡೋದು ಬಿಟ್ಟುಬಿಟ್ಟು ಪಾಪ ಬಸವಣ್ಣನ ತತ್ವ ಸಾರಬೇಕು ಅಂತ ಪ್ರಚಾರ ಮಾಡ್ತಿದ್ದಿವಿ ಇದನ್ನು ಬಿಟ್ಟು ಬಿಟ್ಟು ಪಾಪ ನಮ್ಮ ಅಶೋಕ ಚಕ್ರವರ್ತಿ ಸಾಹೇಬ್ರು ಏನೋನೋ ಪಾಪ ಮಾತಾಡ್ತಿದ್ದಾರೆ ಸಿಎಂ ರಾಜಕೀಯ ಕಾರ್ಯದರ್ಶಿ ಯಾರವರು? ರೇಣುಕಾಚಾರ್ಯನಾ…ಅವರೂ ಪಾಪ ಏನೇನೋ ಮಾತಾಡ್ತಿದ್ದಾರೆ ಎಂದು ಮಾಜಿ ಸಚಿವ ಡಿಕೆಶಿವಕುಮಾರ್

Advertisement

ಸದಾಶಿವನಗರದಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾತಾನಾಡಿದ ಅವರು, ಅಧಿಕಾರವನ್ನು ಯಾವ ರೀತಿ ಬೇಕಾದ್ರೂ ಬಳಕೆ ಮಾಡಿಕೊಳ್ಳಲಿ ಅವರಿಗೆ ಏನೇನು ಬೇಕೋ ಮಾಡಿಕೊಳ್ಳಲಿ.ಎಲ್ಲವೂ ಭಕ್ತನಿಗೂ ಭಗವಂತನಿಗೂ ಬಿಟ್ಟ ವಿಚಾರ. ಸರ್ಕಾರದಿಂದ ಯಾವ್ಯಾವ ಬೆಟ್ಟದಲ್ಲಿ ಯಾರು ಯಾರು ಏನೇನು ಮಾಡಿದ್ದಾರೆ ಲಿಸ್ಟ್ ತರಿಸಿಕೊಳ್ಳಲಿ. ಅವರಿಗಿರುವ ಪರಮಾಧಿಕಾರ ಯಾರಾದ್ರೂ ಕಿತ್ತುಕೊಳ್ಳಲು ಸಾಧ್ಯವಾ..? ಜನರು ಕೇಳಿಕೊಂಡ ಕೆಲಸವನ್ನು ಮಾಡಿಕೊಂಡು ನಾವು ನಮ್ಮ ಹಳ್ಳಿಯಲ್ಲಿ ಜೀವನ ಮಾಡ್ತಿದ್ದೀವಿ ನಾನು ಸ್ಟ್ರಾಂಗೇ ಅಲ್ವಲ್ಲಪ್ಪ.ಇಂಥ ಐಟಿ ಸರ್ಕಾರದ ಮೇಲೆ ಕುಸ್ತಿ ಮಾಡೋದಕ್ಕಾಗತ್ತಾ..? ನಾನುಂಟು ನನ್ನ ಜನ ಉಂಟು ಎಂದರು .

ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರದ ಕುರಿತಾಗಿ ಮಾತಾನಾಡಿದ ಅವರು ನನಗೆ ಯಾರ ಸಪೋರ್ಟ್ ಯಾಕೆ ಬೇಕು…? ನನ್ನ ಪರವಾಗಿ ಯಾರು ಯಾಕೆ ಧ್ವನಿ ಎತ್ತಬೇಕು…? ಹೈಕಮಾಂಡ್ ನಿಂದ ನಂಗೆ ಯಾವ ಗಿಫ್ಟೂ ಬೇಡ… ನಾನು ಯಾವ ಗಿಫ್ಟೂ ಕೇಳೋಕೆ ಹೋಗಿಲ್ಲ ನಾನು ಕಾಂಗ್ರೆಸ್ ಕಾರ್ಯಕರ್ತನಾಗಿದ್ದೇನೆ.ಹಾಗೇ ಇರ್ತೇನೆ, ನನ್ನ ಹಾಗೆ ಇರಲು ಬಿಡಿ. ನೀವೂ ನನ್ನ ಬಗ್ಗೆ ಮಾತಾಡಬೇಡಿ, ನಾನೂ ಏನೂ ಕೇಳಿಲ್ಲ ಯಾರ ಬಳಿಯೂ, ಐಟಿ ನೊಟೀಸ್ ಗಳಿಗೆ ಉತ್ತರ ಕೊಡೋದ್ರಲ್ಲಿಯೇ ಸಾಕಾಗಿ ಹೋಗಿದೆ, ಏಸುಪ್ರತಿಮೆ ವಿಚಾರದಲ್ಲೂ ಯಾರು ನಂಗೆ ಬೇಕು..? ಏನಾದ್ರೂ ತಪ್ಪು ಮಾಡಿದ್ರೆ ಬೇರೆಯವರ ಸಪೋರ್ಟ್ ಬೇಕು… ಇಲ್ಲದಿದ್ರೆ ಯಾಕೆ ಧ್ವನಿ ಬೇಕಾಗುತ್ತದೆ…? ಎಂದರು.

Advertisement

Udayavani is now on Telegram. Click here to join our channel and stay updated with the latest news.

Next