Advertisement
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸದನ ಸಮಿತಿ ವರದಿಗೆ ಸಹಿ ಹಾಕುವುದಿಲ್ಲ ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಈಗಾಗಲೇ ಸದನ ಸಮಿತಿಯ ಮುಂದೆ ತಮ್ಮ ಪಕ್ಷದ ಅಭಿಪ್ರಾಯ ಏನು ಎಂದು ಲಿಖೀತವಾಗಿ ಹೇಳಿಕೆ ನೀಡಿದ್ದಾರೆ. ರಾಜಕೀಯವಾಗಿ ಅವರು ಹೊರಗಡೆ ಏನು ಹೇಳುತ್ತಾರೋ ಅದಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ. ಸದನ ಸಮಿತಿ ನ. 7ರಂದು ಅಂತಿಮ ಸಭೆ ನಡೆಸಲಾಗುತ್ತಿದೆ. ಕುಮಾರಸ್ವಾಮಿ ಅವರು ಅಂದಿನ ಸಭೆಗೆ ಹಾಜರಾಗದಿದ್ದರೆ, ಸದನ ಸಮಿತಿ ಏನು ವರದಿ ನೀಡಿದೆ ಎಂದು ಅವರಿಗೆ ತಿಳಿಯುವುದಿಲ್ಲ. ಅವರು ಜವಾಬ್ದಾರಿ ಇರುವ ವ್ಯಕ್ತಿಯಾಗಿರುವುದರಿಂದ ಅಂತಿಮ ಸಭೆಗೆ ಹಾಜರಾಗಬೇಕು ಎಂದು ಹೇಳಿದ್ದಾರೆ. Advertisement
ಸದನ ಸಮಿತಿ ಸಭೆಗೆ ಹಾಜರಾಗಿ ಎಚ್‌ಡಿಕೆಗೆ ಡಿಕೆಶಿ ಮನವಿ
12:54 PM Nov 05, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.