Advertisement
ಬೆಳಗ್ಗೆ 11ಕ್ಕೆ ಆಯ್ಕೆ ಪ್ರಕ್ರಿಯೆಗೆ ಸಿದ್ಧತೆ ಪ್ರಾರಂಭಗೊಂಡು, 11 ಗಂಟೆಗೆ ಸದಸ್ಯರು ನಾಮಪತ್ರ ಸಲ್ಲಿಕೆ ಆರಂಭಿಸಿದರು. ನಾಮಪತ್ರ ಸಲ್ಲಿಕೆಯ ಬಳಿಕ ಬಿಜೆಪಿ, ಕಾಂಗ್ರೆಸ್ ಸದಸ್ಯರು ಪರಸ್ಪರ ಮಾತುಕತೆ ನಡೆಸಿದರೂ ಸಂಧಾನ ಫಲ ನೀಡಲಿಲ್ಲ. ಅರ್ಧ ತಾಸು ಕಳೆದ ಬಳಿಕ ಯಾವುದೇ ನಾಮಪತ್ರ ಅಸಿಂಧುಗೊಳ್ಳಲಿಲ್ಲ ಹಾಗೂ ಯಾರೂ ನಾಮಪತ್ರ ಹಿಂಪಡೆಯಲಿಲ್ಲ. ಹೀಗಾಗಿ ಚುನಾವಣೆ ನಡೆಯುವುದು ಬಹುತೇಕ ಖಾತರಿಯಾಯಿತು. ಜತೆಗೆ ಪ್ರತಿ ಸದಸ್ಯರು ಎಷ್ಟು ಮತ ಹಾಕಬೇಕು ಎಂಬ ಕುರಿತ ವಿವರಗಳನ್ನು ಅಧಿಕಾರಿಗಳು ನೀಡಿದರು. ಇದಕ್ಕಾಗಿ ಐದು ಮತಪೆಟ್ಟಿಗೆಗಳನ್ನೂ ಪರಿಶೀಲಿಸಿ ಸಿದ್ಧಪಡಿಸಲಾಯಿತು.
ಈ ವೇಳೆ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಅಂಗಾರ, ವಿಧಾನ ಪರಿಷತ್ ಸದಸ್ಯ ಕ್ಯಾ|ಗಣೇಶ್ ಕಾರ್ಣಿಕ್ ಆಗಮಿಸಿ ಮಾತುಕತೆ ಆರಂಭಿಸಿದರು. ಸಚಿವ ರಮಾನಾಥ ರೈ, ಯು.ಟಿ. ಖಾದರ್, ಶಾಸಕರಾದ ಜೆ.ಆರ್. ಲೋಬೊ, ಮೊದಿನ್ ಬಾವಾ, ವಸಂತ ಬಂಗೇರ, ಅಭಯಚಂದ್ರ ಜೈನ್, ಶಕುಂತಳಾ ಶೆಟ್ಟಿ, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ ಜತೆಗೂಡಿ ಜಿ.ಪಂ. ಸಭಾಂಗಣದಲ್ಲೇ ಮಾತುಕತೆ ನಡೆಸಿದರು. ಕಳೆದ ಬಾರಿಯ ಮಾದರಿಯಲ್ಲೇ ಎರಡು ಸ್ಥಾಯೀ ಸಮಿತಿಗಳ ಅಧ್ಯಕ್ಷ ಸ್ಥಾನ ನೀಡುವಂತೆ ಕಾಂಗ್ರೆಸ್ ಒತ್ತಾಯಿಸಿದರೆ, ಬಿಜೆಪಿ ಒಂದೇ ಸ್ಥಾನ ನೀಡಲು ಮುಂದಾದಿದ್ದರಿಂದ ಪರಿಸ್ಥಿತಿ ಚುನಾವಣೆ ನಡೆಯುವವರೆಗೆ ಮುಂದುವರಿಯಿತು. ಕೊನೆಗೆ ಜಿ.ಪಂ.ನಲ್ಲಿ ಒಟ್ಟು 52 ಮತಗಳಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಸಮಾನ ಮತಗಳನ್ನು ಹೊಂದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬಿಗಿಪಟ್ಟು ಮುಂದುವರಿಸಿ 2 ಸ್ಥಾನ ಪಡೆದುಕೊಂಡಿತು. ಕಳೆದ ಬಾರಿಯಂತೆ ಶಿಕ್ಷಣ ಮತ್ತು ಆರೋಗ್ಯ ಹಾಗೂ ಕೃಷಿ ಮತ್ತು ಕೈಗಾರಿಕೆ ಸ್ಥಾಯೀ ಸಮಿತಿಗಳ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್‌ಗೆ ನೀಡಲು ಒಪ್ಪಿಕೊಳ್ಳಲಾಯಿತು. ಆಯ್ಕೆಯಾದ ಸದಸ್ಯರು
ಸಾಮಾನ್ಯ ಸ್ಥಾಯೀ ಸಮಿತಿ: ಕಸ್ತೂರಿ ಪಂಜ, ಮಮತಾ ಗಟ್ಟಿ, ಶಯನಾ ಜಯಾನಂದ, ಶಾಹುಲ್ ಹಮೀದ್, ಆಶಾ ತಿಮ್ಮಪ್ಪ ಗೌಡ, ವಿನೋದ್ ಕುಮಾರ್, ಪುಷ್ಪಾವತಿ.
Related Articles
Advertisement
ಸಾಮಾಜಿಕ ನ್ಯಾಯ ಸಮಿತಿ: ಚಂದ್ರಪ್ರಕಾಶ್ ಶೆಟ್ಟಿ, ಜನಾರ್ದನ ಗೌಡ, ಜಯಶ್ರೀ ಕೋಡಂದೂರು, ಧನಲಕ್ಷ್ಮೀ ಗಟ್ಟಿ, ನಮಿತಾ, ಮಮತಾ ಶೆಟ್ಟಿ, ತುಂಗಪ್ಪ ಬಂಗೇರ.
ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ: ಕೊರಗಪ್ಪ ನಾಯ್ಕ, ಪ್ರಮೀಳಾ ಜನಾರ್ದನ್, ಎಂ.ಎಸ್. ಮುಹಮ್ಮದ್, ಮಂಜುಳಾ ಮಾಧವ ಮಾವೆ, ರಶೀದಾ ಬಾನು, ಸುಚರಿತಾ ಶೆಟ್ಟಿ, ಅನಿತಾ ಹೇಮನಾಥ ಶೆಟ್ಟಿ.
ಕೃಷಿ ಮತ್ತು ಕೈಗಾರಿಕೆ ಸ್ಥಾಯೀ ಸಮಿತಿ: ಯು.ಪಿ. ಇಬ್ರಾಹಿಂ, ಕಮಲಾಕ್ಷಿ ಪೂಜಾರಿ, ಪದ್ಮಶೇಖರ ಜೈನ್, ಪಿ.ಪಿ. ವರ್ಗೀಸ್, ವಸಂತಿ, ಸರ್ವೋತ್ತಮ ಗೌಡ, ರವೀಂದ್ರ ಕಂಬಳಿ.