Advertisement

ದ.ಕ. ಜಿಲ್ಲೆಯಲ್ಲಿ  3,000 ಭದ್ರತಾ ಸಿಬಂದಿ

06:00 AM May 10, 2018 | |

ಮಂಗಳೂರು: ಚುನಾವಣೆಗೆ ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 981 ಮತಗಟ್ಟೆಗಳಲ್ಲಿ ಶಾಂತಿಯುತ ಹಾಗೂ ನಿರ್ಭೀತ ಮತದಾನದ ಉದ್ದೇಶದಿಂದ ಅರೆ ಸೇನಾ ಪಡೆ, ಕ್ಷಿಪ್ರ ಕಾರ್ಯ ಪಡೆ, ಕೆಎಸ್‌ಆರ್‌ಪಿ ತುಕಡಿ ಸೇರಿದಂತೆ ಒಟ್ಟು 3,000 ಭದ್ರತಾ ಸಿಬಂದಿ ನಿಯೋ ಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಬಿ.ಆರ್‌. ರವಿಕಾಂತೇ ಗೌಡ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

Advertisement

ಚುನಾವಣೆ ಘೋಷಣೆಯಾಗುವ ಮೊದಲೇ ಕಂದಾಯ ಅಧಿಕಾರಿಗಳ ಸಹಕಾರದಲ್ಲಿ ಕ್ಲಿಷ್ಟ ಮತಗಟ್ಟೆಗಳನ್ನು ಗುರುತಿಸಿ, ವಿಶೇಷ ಭದ್ರತಾ ಕ್ರಮ ಕೈಗೊಳ್ಳಲಾಗಿದೆ. ಕಾಸರಗೋಡು ಎಸ್ಪಿ, ಡಿಸಿ ಜತೆ ಸಭೆ ನಡೆಸಿ ಗಡಿ ಭಾಗದಲ್ಲಿ ಚೆಕ್‌ಪೋಸ್ಟ್‌ ಅಳವಡಿಸಿ ಭದ್ರತೆ ಕೈಗೊಳ್ಳಲಾಗಿದೆ ಎಂದರು.

ಬೆಳ್ತಂಗಡಿ ತಾಲೂಕಿನ ನಕ್ಸಲ್‌ ಪೀಡಿತ ಪ್ರದೇಶಕ್ಕೆ ಜಿಲ್ಲಾಧಿಕಾರಿ ಜತೆ ಭೇಟಿ ನೀಡಿ ಅಲ್ಲಿನ ಮತದಾರರ ಜತೆ ಮಾತುಕತೆ ನಡೆಸಲಾಗಿದೆ. ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ 64 ಮತಗಟ್ಟೆಗಳಿದ್ದು, ಅರೆಸೇನಾ ಪಡೆ ನಿಯೋಜಿಸಲಾಗಿದೆ. ನಕ್ಸಲ್‌ ನಿಗ್ರಹ ದಳ ನಿರಂತರ ಶೋಧ ನಡೆಸುತ್ತಿದೆ ಎಂದು ಅವರು ತಿಳಿಸಿದರು.

3,000 ಭದ್ರತಾ ಸಿಬಂದಿ
ಮತಗಟ್ಟೆ ಭದ್ರತೆಗೆ 6 ಡಿವೈಎಸ್ಪಿ, 14 ಇನ್‌ಸ್ಪೆಕ್ಟರ್, 40 ಪಿಎಸ್‌ಐ, 136 ಎಎಸ್‌ಐ, 210 ಹೆಡ್‌ ಕಾನ್‌ಸ್ಟೆಬಲ್‌, 660 ಕಾನ್‌ಸ್ಟೆಬಲ್‌, 330 ಗೃಹ ರಕ್ಷಕ ದಳ, 20 ಫಾರೆಸ್ಟ್‌ ಗಾರ್ಡ್‌, 1,400 ಅರೆಸೇನಾ ಪಡೆ, 1 ಕ್ಷಿಪ್ರ ಕಾರ್ಯ ಪಡೆ, 3 ಕೆಎಸ್‌ಆರ್‌ಪಿ ತುಕಡಿ ಸೇರಿದಂತೆ 3,000 ಭದ್ರತಾ ಸಿಬಂದಿ ನಿಯೋಜಿಸಲಾಗಿದೆ. 72 ಸೆಕ್ಟರ್‌ ಮೊಬೈಲ್‌, 12 ಇನ್‌ಸ್ಪೆಕ್ಟರ್‌ ಮೊಬೈಲ್‌ ಕಾರ್ಯಾಚರಣೆಯಲ್ಲಿರುತ್ತವೆ. ಸೆಕ್ಟರ್‌ ಮೊಬೈಲ್‌ನ್ನು 14 ಪಿಎಸ್‌ಐ ಮೇಲ್ವಿಚಾರಣೆ ನಡೆಸಲಿದ್ದಾರೆ ಎಂದು ಎಸ್ಪಿ ಹೇಳಿದರು.

24 ಚೆಕ್‌ಪೋಸ್ಟ್‌ 
8 ಅಂತಾರಾಜ್ಯ ಸಹಿತ ಒಟ್ಟು 24 ಚೆಕ್‌ ಪೋಸ್ಟ್‌ ತೆರೆಯಲಾಗಿದೆ. 14 ಪ್ಲೆ„ಯಿಂಗ್‌ ಸ್ಕ್ವಾಡ್‌ ಕಾರ್ಯಾಚರಿಸುತ್ತಿವೆ. ಶೇ. 40 ರಷ್ಟು ವಾಹನಗಳನ್ನು ತಪಾ ಸಣೆ ನಡೆಸಲಾಗುತ್ತಿದೆ. ಅಂ.ರಾ. ಚೆಕ್‌ಪೋಸ್ಟ್‌ಗಳಲ್ಲಿ ಸಿಸಿ ಕೆಮರಾ ಅಳವಡಿಸಲಾಗಿದೆ. ಉಳಿದ ಕಡೆ ಕೆಮರಾ ನೀಡಲಾಗಿದೆ. ಅನುಮಾನಾಸ್ಪದ ವಾಹನಗಳನ್ನು ತಪಾಸಣೆ ನಡೆಸಲಾಗುತ್ತದೆ ಎಂದು ಎಸ್ಪಿ ತಿಳಿಸಿದರು. 

Advertisement

ಇಬ್ಬರು ಗಡೀಪಾರು
ಸಮಾಜದಲ್ಲಿ ಅಶಾಂತಿಗೆ ಮಾರಕ ವಾದ ಇಬ್ಬರನ್ನು ಗಡೀಪಾರು ಮಾಡಲು ವರದಿ ಸಲ್ಲಿಸಿದ್ದು, ಆ ಪೈಕಿ ಕಲ್ಲಡ್ಕದ ರತ್ನಾಕರ ಶೆಟ್ಟಿ ಮತ್ತು ಖಲೀಲ್‌ ಅವರನ್ನು ಗಡೀಪಾರು ಮಾಡಿ ಡಿಸಿ ಆದೇಶಿಸಿದ್ದಾರೆ. ಸಾರ್ವ ಜನಿಕ ಶಾಂತಿ ಕದಡುವ ಸಾಧ್ಯತೆ ಇರುವ 916 ಮಂದಿಯ ವಿರುದ್ಧ ಮುಂಜಾಗ್ರತಾ ಭದ್ರತಾ ಕ್ರಮಗಳನ್ನು ದಾಖಲಿಸಲಾಗಿದೆ ಎಂದು ಎಸ್ಪಿ 
ಡಾ| ರವಿಕಾಂತೇ ಗೌಡ ತಿಳಿಸಿದರು. 

9,880 ಕೋವಿ ಠಾಣೆಗಳಿಗೆ
ಜಿಲ್ಲೆಯಲ್ಲಿರುವ 9,937 ಕೋವಿಗಳ ಪೈಕಿ 9,880ನ್ನು ಠಾಣೆಗಳಿಗೆ ಒಪ್ಪಿಸ ಲಾಗಿದೆ. ಕಾಡಂಚಿನಲ್ಲಿರುವ ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗಿರುವ ಸ್ಥಳಗಳಲ್ಲಿ ವಾಸವಿರುವ 57 ಮಂದಿಯ ಕೋವಿಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಎಸ್ಪಿ  ಹೇಳಿದರು.

10 ಪ್ರಕರಣ ದಾಖಲು
ನೀತಿ ಸಂಹಿತೆ ಉಲ್ಲಂ ಸಿದ 10 ಪ್ರಕರಣಗಳು ದಾಖಲಾಗಿವೆ. ಚುನಾವಣ ವಿಚಾರದಲ್ಲಿ ಗಲಾಟೆ ಮಾಡಿ ಕೊಂಡ ಸಂಬಂಧ 4 ಪ್ರಕರಣ ಸೇರಿವೆ. 1 ಪ್ರಕರಣ ವಿಟ್ಲ ದಲ್ಲಿ ಜಗದೀಶ್‌ ಎಂಬವರು ಮನೆಗೆ ಸ್ಟಿಕ್ಕರ್‌ ಅಂಟಿಸಿದ ಪ್ರಕರಣ ದಾಖಲಾಗಿದೆ. ಒಟ್ಟು 21 ಅಬಕಾರಿ ಕಾಯ್ದೆ ಪ್ರಕರಣಗಳಲ್ಲಿ 54.30 ಲೀ. ಅಕ್ರಮ ಮದ್ಯ, 2 ಲಕ್ಷ ರೂ., 1,222 ಸೀರೆ ವಶ ಪಡಿಸಿ ಕೊಳ್ಳಲಾಗಿದೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next