Advertisement
ಐಟಿ ದಾಳಿಯಿಂದ ಸ್ವಲ್ಪ ವಿಚಲಿತರಾದಂತೆ ಕಂಡರೂ, ಶಿವಕುಮಾರ್ ಗುಜರಾತ್‌ನ ಎಲ್ಲ ಶಾಸಕರಿಗೂ ತಾವೇ ಮುಂದೆ ನಿಂತು ವಿಧಾನಸೌಧ ತೋರಿಸಿದರು. ಅದೇ ಸಂದರ್ಭದಲ್ಲಿ ಆಗಮಿಸಿದ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರನ್ನೂ ಗುಜರಾತ್ ಶಾಸಕರಿಗೆ ಪರಿಚಯಿಸಿ, ಅವರೊಂದಿಗೆ ಹತ್ತು ನಿಮಿಷ ವಿಧಾನಸೌಧದ ಮೆಟ್ಟಿಲುಗಳ ಮೇಲೆಯೇ ಪ್ರತ್ಯೇಕವಾಗಿ ಚರ್ಚಿಸಿದರು. ಆ ನಂತರ ಎಲ್ಲ ಶಾಸಕರನ್ನೂ ಎರಡು ಬಸ್‌ಗಳಲ್ಲಿ ಕರೆದುಕೊಂಡು ಮತ್ತೆ ಈಗಲ್ಟನ್ ರೆಸಾರ್ಟ್‌ಗೆ ತೆರಳಿದರು.
ನಿರ್ಮಾಣವಾಯಿತು. ಈ ಮಧ್ಯ ಸಣ್ಣ ಕೈಗಾರಿಕೆ ಸಚಿವ ರಮೇಶ್ ಜಾರಕಿಹೊಳಿ ರೆಸಾರ್ಟ್‌ಗೆ ಭೇಟಿ ನೀಡಿ, ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಸಿಎಂ ಕ್ಷಮೆ ಕೇಳಿದ ಡಿಕೆಶಿ: ತಮ್ಮ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ತಮ್ಮ ತಾಯಿ ಮಾಧ್ಯಮಗಳಿಗೆ ಹೇಳಿಕೆ ನೀಡುವ ಸಂದರ್ಭದಲ್ಲಿ ಇದೆಲ್ಲಕ್ಕೂ ಸಿಎಂ ಸಿದ್ದರಾಮಯ್ಯ ಕಾರಣ ಎಂದು ನೀಡಿರುವ ಹೇಳಿಕೆಗೆ ಡಿ.ಕೆ. ಶಿವಕುಮಾರ ಬಹಿರಂಗ ಕ್ಷಮೆಯಾಚಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ
ಅವರು, ನನ್ನ ತಾಯಿ ಆದಾಯ ತೆರಿಗೆ ಇಲಾಖೆ ಯಾರ ವ್ಯಾಪ್ತಿಗೆ ಬರುತ್ತದೆ ಎಂದು ತಿಳಿಯದಿರುವ ಮುಗೆª, ಅವರು ಪುತ್ರ ವಾತ್ಸಲ್ಯದಿಂದ ಸಿದ್ದರಾಮಯ್ಯ ವಿರುದಟಛಿ ಹೇಳಿಕೆ ನೀಡಿದ್ದಾರೆ. ಅವರ ಮುಗªತೆಯನ್ನು ಕೆಲವು ಮಾಧ್ಯಮಗಳು ದುರುಪಯೋಗ ಪಡಿಸಿಕೊಂಡಿವೆ.
Related Articles
Advertisement
ಡಿಕೆಶಿ ಬದಟಛಿತೆಗೆ ಗುಜರಾತ್ ಶಾಸಕರು μದಾ:ಡಿ.ಕೆ. ಶಿವಕುಮಾರ್ ಅವರ ಬದ್ದತೆಗೆ ಗುಜರಾತ್ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಹೊರ ವಲಯದ ರೆಸಾರ್ಟ್‌ನಲ್ಲಿ ಗುಜರಾತ್ ಶಾಸಕರ ವಾಸ್ತವ್ಯದ ಜವಾಬ್ದಾರಿ ವಹಿಸಿಕೊಂಡಿದ್ದ ಶಿವಕುಮಾರ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದಾಗ ಗುಜರಾತ್ ಶಾಸಕರು ಆತಂಕಕ್ಕೊಳಗಾಗಿದ್ದರು.
ತಮ್ಮ ಮೇಲೂ ದಾಳಿಯಾಗುತ್ತದೆ ಎಂದು ಭಯಭೀತರಾಗಿದ್ದರು. ಅಲ್ಲದೇ ತಮ್ಮನ್ನು ವಾಪಸ್ ಗುಜರಾತ್‌ಗೆ ಕಳುಹಿಸಿ ಕೊಡುವಂತೆ ಆಗ್ರಹ ಕೂಡ ಮಾಡಿದ್ದರು. ಆದರೆ, ಡಿಕೆಶಿ ತಮ್ಮ ಮನೆ ಮೇಲೆ ಐಟಿ ದಾಳಿ ನಡೆದು ತಾವು ಹೊರಗೆ
ಹೋಗಲಾರದಂತ ಸ್ಥಿತಿ ನಿರ್ಮಾಣವಾದರೂ, ತಮ್ಮ ಸಹೋದರನ ಮೂಲಕ ಗುಜರಾತ್ ಶಾಸಕರನ್ನು ಕ್ಷೇಮವಾಗಿ ನೋಡಿಕೊಂಡಿರುವುದಕ್ಕೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಉದಯವಾಣಿಯೊಂದಿಗೆ ಮಾತನಾಡಿದ
ಅಹಮದಾಬಾದ್ ಶಾಸಕ ಜಿಯಾಸುದಿಟಛೀನ್ ಶೇಖ್, ಕರ್ನಾಟಕ ಕಾಂಗ್ರೆಸ್‌ನ ಆತಿಥ್ಯ ಉತ್ತಮವಾಗಿತ್ತು. ವಿಶೇಷವಾಗಿ ಡಿ.ಕೆ. ಶಿವಕುಮಾರ್ ಅವರ ಧೈರ್ಯ ಮತ್ತು ಪಕ್ಷದ ಬಗ್ಗೆ ಇರುವ ಬದಟಛಿತೆಗೆ ಆಭಾರಿಯಾಗಿದ್ದೇವೆ ಎಂದರು. ಗುಜರಾತ್ ಚುನಾವಣೆ ಉಸ್ತುವಾರಿಗೆ ಮನವಿ: ಇಂಧನ ಸಚಿವ ಡಿ.ಕೆ.ಶಿವಕುಮಾರ್ ಕಾರ್ಯವೈಖರಿ ಮತ್ತು ನಿಷ್ಠುರತನ ಮೆಚ್ಚಿಕೊಂಡಿರುವ ಗುಜರಾತ್ ಶಾಸಕರು ಈ ವರ್ಷಾಂತ್ಯದಲ್ಲಿ ಗುಜರಾತ್ ವಿಧಾನಸಭೆಗೆ ನಡೆಯುವ ಚುನಾವಣೆಯ
ಉಸ್ತುವಾರಿ ವಹಿಸಿಕೊಳ್ಳುವಂತೆ ಡಿ.ಕೆ.ಶಿವಕುಮಾರ್‌ಗೆ ಮನವಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಸಬ್ಕೋ ಸನ್ಮತಿ ದೇ ಗಾಂಧಿ: ಶಕ್ತಿಸಿಂಗ್ ಗೋಯಲ್: ಒಂದು ವಾರದಿಂದ ರಾಜ್ಯದ ರೆಸಾರ್ಟ್‌ನಲ್ಲಿ ಸಿಲುಕಿಕೊಂಡಿದ್ದ ಗುಜರಾತ್ ಕಾಂಗ್ರೆಸ್ ಶಾಸಕರು, ಶನಿವಾರ ರೆಸಾರ್ಟ್‌ನಿಂದ ಹೊರ ಬಂದು ಮುಕ್ತವಾಗಿ ರಾಜಭವನ, ವಿಧಾನಸೌಧ ತಿರುಗಾಡಿದರು. ಗುಜರಾತ್ ಮೂಲದವರಾದ ರಾಜ್ಯಪಾಲ ವಿ.ಆರ್.ವಾಲಾ ಅವರನ್ನು ಭೇಟಿ ಮಾಡಿ, ಉಭಯ ಕುಶಲೋಪರಿ ಚರ್ಚಿಸಿದರು. ವಿ.ಆರ್.ವಾಲಾ ಗುಜರಾತ್‌ನಲ್ಲಿ ಸಚಿವರಾಗಿ, ವಿಧಾನಸಭೆ ಸ್ಪೀಕರ್ ಆಗಿ ಕಾರ್ಯ
ನಿರ್ವಹಿಸಿದ್ದರಿಂದ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ನಂತರ ವಿಧಾನಸೌಧದ ಗಾಂಧಿ ಪ್ರತಿಮೆಗೆ ಭೇಟಿ ನೀಡಿ ಭಜನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಶಕ್ತಿ ಸಿಂಗ್ ಗೋಯಲ್, ಗುಜರಾತ್‌ನಲ್ಲಿ ನಾವೆಲ್ಲ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲದಂತಾಗಿದೆ. ಗಾಂಧೀಜಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ಅವರ ನಾಡಿನಲ್ಲಿ ಈಗ ಪ್ರಜಾಪ್ರಭುತ್ವದ
ಕಗ್ಗೊಲೆಯಾಗುತ್ತಿದೆ. ನಮ್ಮ ನಾಯಕ ರಾಹುಲ್ ಗಾಂಧಿ ಗುಜರಾತ್‌ಗೆ ಭೇಟಿ ನೀಡಿದರೆ, ಅವರ ಮೇಲೆ ದಾಳಿಯಾಗುತ್ತದೆ. ಅದಕ್ಕೆ ನಿನ್ನ ನಾಡಿನಲ್ಲಿ ಏನಾಗುತ್ತಿದೆ ನೋಡು ಗಾಂಧಿ ಸಬ್ ಕೋ ಸನ್ಮತಿ ದೇ ಅಂತ ಪ್ರಾಥನೆ ಮಾಡಿದ್ದೇವೆ ಎಂದು ಗೋಯಲ್ ಹೇಳಿದರು.