Advertisement

ಅಧಿಕಾರ ಕಳೆದುಕೊಂಡು ಪೇಚಾಡುತ್ತಿದ್ದಾರೆ: ಜಾರಕಿಹೊಳಿ-ಈಶ್ವರಪ್ಪಗೆ ಡಿಕೆಶಿ ಟಾಂಗ್

01:09 PM Feb 09, 2023 | keerthan |

ಶಿವಮೊಗ್ಗ: ರಮೇಶ್ ಜಾರಕಿಹೊಳಿ ಅವರ ವಿಚಾರ ನಾನು ಮಾತಾಡಲು ಹೋಗುವುದಿಲ್ಲ. ಅವರು ಹೈಕಮಾಂಡ್ ಬಳಿ ಕೇಳಿರುವ ಬೇಡಿಕೆ ಈಡೇರಿಸಲಿ ನಮ್ಮದೇನು ಅಭ್ಯಂತರವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂತ್ರಿಸ್ಥಾನ ಸಿಕ್ಕಿಲ್ಲ ಎಂದು ಅವರು, ಈಶ್ವರಪ್ಪ ಹತಾಶರಾಗಿದ್ದಾರೆ. ಅಧಿಕಾರ ಕಳೆದುಕೊಂಡು ಇಬ್ಬರೂ ಪೇಚಾಡುತ್ತಿದ್ದಾರೆ. ಮೆಂಟಲ್ ಬ್ಯಾಲೆನ್ಸ್ ಕಡಿಮೆಯಾಗಿ ಏನೆನೋ ಮಾತನಾಡುತ್ತಿದ್ದಾರೆ. ಅವರಿಗೆ ಸ್ವಲ್ಪ ಒಳ್ಳೆಯದಾಗಲಿ. ಸಿಎಂ, ಆರೋಗ್ಯ ಸಚಿವರಿಗೆ ಹೇಳಿ ಒಳ್ಳೆಯ ಆರೋಗ್ಯ ಕೊಡಿಸಿ. ನನ್ನ ಹೆಸರು ಮಾತನಾಡಿದರೆ ಅವರಿಗೆ ಮಾರ್ಕೆಟ್. ನನ್ನ ಹೆಸರು ಹೇಳದೇ ಅವರ ಪಕ್ಷದಲ್ಲಿ ಯಾರೂ ಮಾತನಾಡುವುದಿಲ್ಲ ಎಂದರು.

ಡಿಕೆಶಿಗೆ ಜೆಡಿಎಸ್ ಪಕ್ಷ ವಿಸರ್ಜನೆ ಬಯಕೆ ಎಂಬ ಎಚ್ ಡಿಕೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿರಿಗೆ ನಾನು ಪಕ್ಷ ವಿಸರ್ಜನೆ ಮಾಡಲು ಹೇಳಿಲ್ಲ. ನಾನು ಗೆಲ್ಲಲಿಲ್ಲವೆಂದರೆ ವಿಸರ್ಜನೆ ಮಾಡುತ್ತೇನೆಂದು ಅವರೇ ಹೇಳಿಕೊಂಡಿದ್ದು. ವಿಸರ್ಜನೆಗೆ ನಾನು ಬೇಡ ಅಂತಾ ಹೇಳುತ್ತಿದ್ದೇನೆ. ಪಾಪ, ಇರಲಿ ಒಂದು ಪಾರ್ಟಿ ಎಂದರು.

ಇದನ್ನೂ ಓದಿ:ಅಕ್ರಮ ಹಣ ವರ್ಗಾವಣೆ ಪ್ರಕರಣ: ಎನ್‌ಎಸ್‌ಇ ಮಾಜಿ ಸಿಇಒ ಚಿತ್ರಾ ರಾಮಕೃಷ್ಣಗೆ ಜಾಮೀನು ಮಂಜೂರು

ಸಾಮೂಹಿಕ ನಾಯಕತ್ವದಲ್ಲಿ ನಾವು ಚುನಾವಣೆಗೆ ಹೋಗುತ್ತೇವೆ. ಅವರು ಆರಂಭದಲ್ಲಿ ಬೊಮ್ಮಾಯಿ ನಾಯಕತ್ವದಲ್ಲಿ ಹೋಗುತ್ತೇವೆ ಅಂದರು. ಈಗ ಮತ್ತೇ ಮೋದಿ ಮುಖ ಇಟ್ಕೊಂಡು ಚುನಾವಣೆಗೆ ಹೋಗುತ್ತೇವೆ ಎನ್ನುತ್ತಿದ್ದಾರೆ. ಯಡಿಯೂರಪ್ಪ ಕಣ್ಣೀರು ಹಾಕಿದ್ದು ಯಾಕೆಂದು ಇಂದಿಗೂ ಹೇಳಿಲ್ಲ. ಅವರನ್ನು ಯಾಕೆ ಕೆಳಗಿಳಿಸಿದರು? ಆಡಳಿತ ಸರಿ ಇರಲಿಲ್ವಾ? ಅಳು ಹಾಗೆ ಯಾಕೆ ಮಾಡಿದಿರಿ? ವೈಯಕ್ತಿಕ ಕಾರಣವೇ? ಭ್ರಷ್ಟಾಚಾರವೇ?  ಚುನಾವಣೆಗೂ ಮುನ್ನವೇ ಜನರಿಗೆ ಕಾರಣ ಹೇಳಬೇಕಲ್ವಾ ಎಂದರು.

Advertisement

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರವಾಗಿ ಮಾತನಾಡಿ, ಇನ್ನೂ 10 ದಿನದಲ್ಲಿ ತೀರ್ಮಾನವಾಗುತ್ತದೆ. ಎರಡನೇ ವಾರದಲ್ಲಿ ಸ್ಕ್ರೀನಿಂಗ್ ಕಮಿಟಿಯ ಹಲವು ಸಭೆಗಳಿವೆ. ಅದಾದ ನಂತರ ತೀರ್ಮಾನ ಮಾಡುತ್ತೇವೆ ಎಂದ ಡಿಕೆಶಿ, ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್, ಮಂಜುನಾಥ್ ಗೌಡ ಒಟ್ಟಿಗೆ ಇದ್ದಾರೆ. ಇಬ್ಬರೂ ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿರ್ತಾರೆ. ವಿಧಾನಸೌಧದಲ್ಲಿ ಸಾಕಷ್ಟು ಅವಕಾಶಗಳಿದ್ದು, ಕೊಡುವ ಕೆಲಸವಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next