Advertisement

ಮುಂದಿನ ವಿಧಾನಸಭೆಗೆ ಟಿಕೆಟ್ ಕೇಳುವವರು ಈಗಿನಿಂದಲೇ ಕ್ಷೇತ್ರದಲ್ಲಿ ಕೆಲಸ ಮಾಡಬೇಕು :ಡಿಕೆಶಿ

08:45 PM Jan 11, 2021 | Team Udayavani |

ಹುಬ್ಬಳ್ಳಿ: ಬಿಜೆಪಿಯವರು ಭಂಡಗೆಟ್ಟ ಜನ, ಇವರಿಗೆ ಯಾವುದೇ ನಾಚಿಕೆ, ಮಾನ ಮರ್ಯಾದೆ ಇಲ್ಲ. ಈ ಸರ್ಕಾರಕ್ಕೆ ಕಣ್ಣು, ಕಿವಿ ಇಲ್ಲಾ. ರೈತರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

Advertisement

ಸಂಕಲ್ಪ ಸಮಾವೇಶದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವ ಕ್ಷೇತ್ರದಲ್ಲಿ ಸೋತಿದ್ದೇವೆ ಆ ಕ್ಷೇತ್ರಕ್ಕೆ ಆದ್ಯತೆ ನೀಡಿ ನಾವು ಪ್ರವಾಸ ಮಾಡುತ್ತೇವೆ. ಜನರ ಮಧ್ಯೆ ಕಾರ್ಯಕ್ರಮ ಮಾಡುತ್ತೇವೆ. ಮುಂದಿನ ತಿಂಗಳಿನಿಂದ ನಮ್ಮ ಪ್ರವಾಸ ಆರಂಭವಾಗುತ್ತದೆ. ಮುಂದಿನ ತಾಪಂ, ಜಿಪಂ, ವಿಧಾನಸಭೆ ಟಿಕೆಟ್ ಕೇಳುವವರು ಈಗಿನಿಂದಲೇ ಕ್ಷೇತ್ರದಲ್ಲಿ ಕೆಲಸ ಮಾಡಬೇಕು. ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಸೂಚಿಸಿದರು.

ಚುನಾವಣೆ ಬಂದಾಗ ಟಿಕೆಟ್ ಕೇಳಿದರೆ ನಾವು ಟಿಕೆಟ್ ನೀಡುವುದಿಲ್ಲ. ಇದು ವಿಧಾನಸಭೆಗೆ ಅಷ್ಟೇ ಅಲ್ಲಾ ಎಲ್ಲಾ ಚುನಾವಣೆಗೆ ಅನ್ವಯಿಸುತ್ತದೆ. ಉತ್ತಮವಾಗಿ ಕ್ಷೇತ್ರದಲ್ಲಿ ಕೆಲಸ ಮಾಡಿದವರಿಗೆ, ಸಕ್ರಿಯವಾಗಿದ್ದವರಿಗೆ ಮಾತ್ರ ವಿಧಾನಸಭೆ ಟಿಕೆಟ್ ನೀಡಲಾಗುತ್ತದೆ. ಹೊಸದಾಗಿ ಚಾಲಕರ ಸಂಘ, ಕಲ್ಚರಲ್ ಸಂಘ, ಸಹಕಾರ ಸಂಘ ಮಾಡುತ್ತೇವೆ. ಪಕ್ಷ ಸಂಘಟನೆಗೆ ಇದು ಅನುಕೂಲವಾಗುತ್ತದೆ ಎಂದರು.

ಇದನ್ನೂ ಓದಿ : ಅಂಗಾರ, ಸುನೀಲ್ ಕುಮಾರ್ ಗೆ ಸಚಿವ ಸ್ಥಾನ : ವರಿಷ್ಠರ ತೀರ್ಮಾನವೇ ಅಂತಿಮ : ಈಶ್ವರಪ್ಪ

ಪಕ್ಷದ ಶಾಸಕರು ತಮ್ಮ ಮನೆಯಲ್ಲಿ‌ ಸಭೆ ನಡೆಸಬಾರದು, ಕಾಂಗ್ರೆಸ್ ಬ್ಲಾಕ್ ಕಚೇರಿಯಲ್ಲಿ ಮಾಡಬೇಕು. ಎಲ್ಲಿ ಪಕ್ಷದ ಬ್ಲಾಕ್ ಕಚೇರಿ ಇಲ್ಲವೋ ಅಲ್ಲಿ ಕಚೇರಿ ಆರಂಭಿಸಲು ತಿಳಿಸಿದ್ದೇನೆ ಎಂದರು.

Advertisement

ನಮ್ಮ ಪಕ್ಷದಲ್ಲಿ ಯಾವುದೇ ನಾಯಕರಿಲ್ಲಾ, ಇಲ್ಲಿ ಎಲ್ಲರೂ ಕಾರ್ಯಕರ್ತರು. ನಾನು ಕೂಡ ಒಬ್ಬ ಸಾಮಾನ್ಯ ಕಾರ್ಯಕರ್ತ. ಸರ್ಕಾರ ಇದ್ದಾಗ ಉಪ ಚುನಾವಣೆ ನಡೆಸುವುದೇ ಬೇರೆ, ಸರ್ಕಾರ ಇಲ್ಲದ ಸಮಯದಲ್ಲಿ ಚುನಾವಣೆ ನಡೆಸುವುದೇ ಬೇರೆ. ಮುಂದಿನ ಚುನಾವಣೆ ಫಲಿತಾಂಶ ಬರುವವರೆಗೂ ಕಾದು ನೋಡಿ. ನಮ್ಮ ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲಾ, ಇಲ್ಲಿ ಎಲ್ಲರೂ ಸೇರಿ ಜಮೀನು ಹುಳಬೇಕಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next