ಬೆಳಗಾವಿ: ಉರಿಗೌಡ, ನಂಜೇಗೌಡ ಸಿನಿಮಾ ಮಾಡಲು ಹೊರಟಿರುವವರ ಜೊತೆಗೆ ನಿರ್ಮಲಾನಂದ ಶ್ರೀಗಳು ಯಾವುದೇ ಕಾರಣಕ್ಕೂ ಮಾತುಕತೆ ನಡೆಸಬಾರದು. ಇದರ ವಿರುದ್ಧ ಶ್ರೀಗಳೇ ಮುಂದಾಳತ್ವ ವಹಿಸಿ ಹೋರಾಟ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಕೈಮುಗಿದು ಮನವಿಠಫ ಮಾಡಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಶೋಭಾ ಕರಂದ್ಲಾಜೆ, ಸಿ.ಟಿ. ರವಿ ಹಾಗೂ ಅಶ್ವಥನಾರಾಯಣ ಅವರು ಮಹನೀಯರ ಜೀವನ ಚರಿತ್ರೆ ಬಗ್ಗೆ ಸುಳ್ಳನ್ನು ಹೇಳಲು ಹೋಗ್ತಿದ್ದಾರೆ. ಈಗ ಉರಿಗೌಡ, ನಂಜೆಗೌಡ ಬಗ್ಗೆ ಚಿತ್ರ ಮಾಡ್ತಿದ್ದಾರೆ, ಒಕ್ಕಲಿಗರ ಮತ ಸೆಳೆಯಲು ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ನಿರ್ಮಲಾನಂದ ಸ್ವಾಮೀಜಿ ಇದರ ಬಗ್ಗೆ ಹೋರಾಟ ಮಾಡಬೇಕು ಎಂದರು.
ಇದನ್ನೂ ಓದಿ: ರಜಿನಿ ಪುತ್ರಿ ಐಶ್ವರ್ಯಾ ಲಾಕರ್‌ನಿಂದ ಚಿನ್ನಾಭರಣ ಕಳವು: ಕೆಲಸದಾಳು, ಚಾಲಕನ ಮೇಲೆ ಸಂಶಯ
ಟಿಪ್ಪು ಬಗ್ಗೆ ತಪ್ಪು ಮಾಹಿತಿ ನೀಡಲು ಹೊರಟಿದ್ದಾರೆ. ಅಶ್ವಥನಾರಾಯಣ, ಶೋಭಾ ಕರಂದ್ಲಾಜೆ ಟಿಪ್ಪು ಬಗ್ಗೆ ತಪ್ಪುಮಾಹಿತಿ ನೀಡಲು ಹೊರಟಿದ್ದಾರೆ. ಟಿಪ್ಪು ಸಾಧನೆ ಬಗ್ಗೆ ಇತಿಹಾಸವೇ ಇದೆ, ಸಾಕಷ್ಟು ಗ್ರಂಥಗಳಿವೆ ಎಂದರು.
Related Articles
ಎಲ್ಲ ಸಮಾಜದ ಸ್ವಾಮಿಗಳು, ಸಾಹಿತಿಗಳು, ಎಲ್ಲಸಂಘಟನೆಯವರು, ಹೋರಾಟಗಾರರು ಇದಕ್ಕೆ ಕೈ ಜೋಡಿಸಬೇಕು, ಎಲ್ಲ ಸಮಾಜಗಳ ಮಠಾಧೀಶರು ಕೈಜೋಡಿಬೇಕು ಎಂದರು.
ಟಿಪ್ಪು ಸುಲ್ತಾನ್ ನಿಧನರಾಗಿ ಎರಡು ಶತಮಾನ ಆಗಿದೆ. ನಮಗೆ ಗೊತ್ತಿಲ್ಲದ ಇತಿಹಾಸ ಮಾಡಲು ಹೊರಟಿದ್ದಾರೆ. 50 ಗ್ರಂಥಗಳು ರಚನೆ ಆಗಿವೆ. ಉರಿಗೌಡ ಹಾಗೂ ನಂಜೇಗೌಡ ಹೆಸರಿನಲ್ಲಿ ಜಾತಿ ಬಣ್ಣ ಕಟ್ಟಿಚಿತ್ರ ನಿರ್ಮಿಸಿ ಕಾಲ್ಪನಿಕ ಕಥೆ ಕಟ್ಟುತ್ತಿದ್ದಾರೆ. ಇದರ ವಿರುದ್ಧ ದೊಡ್ಡ ಹೋರಾಟ ಮಾಡಲಾಗುವುದು ಎಂದರು.