ಬೆಳಗಾವಿ : ಸತೀಶ್ ಜಾರಕಿಹೊಳಿಗೆ ಬೆಳಗಾವಿಯ ಜನ ಬೆಂಬಲವಾಗಿ ನಿಂತಿದ್ದಾರೆ. 25 ಜನ ಬಿಜೆಪಿಯವರು ಸಂಸದರಾದ್ರೂ ರಾಜ್ಯದ ಪರವಾಗಿ ಧ್ವನಿ ಎತ್ತಿಲ್ಲ. ಬಿಜೆಪಿ ನುಡಿದಂತೆ ನಡೆಯಲು ಆಗಲಿಲ್ಲ. ಕೊರೊನಾ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ನಡೆಯಲಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿರುವ ಡಿಕೆಶಿ, ಬೆಳಗಾವಿ ಉಪಚುನಾವಣೆ ಆಕಸ್ಮಿಕವಾಗಿ ಬರಬಾರದಿತ್ತು. ಸುರೇಶ್ ಅಂಗಡಿ ಅಕಾಲಿಕ ಮರಣದಿಂದ ಚುನಾವಣೆ ಬಂದಿದೆ. ಕಾಂಗ್ರೆಸ್ ಪಕ್ಷ ಇಡೀ ಕ್ಷೇತ್ರದಲ್ಲಿ ಒಗ್ಗಟ್ಟು ಪ್ರದರ್ಶನ ಮಾಡುತ್ತಿದೆ. ನಾವೆಲ್ಲರೂ ಸೇರಿ ಒಬ್ಬರೇ ಅಭ್ಯರ್ಥಿಯನ್ನು ಸೂಚಿಸಿದ್ದೇವೆ ಎಂದರು.
ನಾಳೆ ಹನ್ನೊಂದು ಗಂಟೆಗೆ ಸತೀಶ್ ಜಾರಕಿಹೊಳಿ ನಾಮ ಪತ್ರ ಸಲ್ಲಿಸುತ್ತಾರೆ ಅದಕ್ಕೆ ನಾವು ಬಂದಿದ್ದೇವೆ. ಎಲ್ಲದಕ್ಕೂ ಹೊಂದಿಕೊಂಡು ಬಾಳುವ ಸೌಮ್ಯ, ಸಜ್ಜನ ಅಭ್ಯರ್ಥಿಯನ್ನ ಕೊಟ್ಟಿದ್ದೇವೆ. ಎಂದರು.
ಇತ್ತ ಬಿಜೆಪಿ ಬಗ್ಗೆ ಕಿಡಿ ಕಾರಿದ ಡಿಕೆ ಶಿವಕುಮಾರ್, ಗ್ಯಾಸ್ ಬೆಲೆ ಏರಿಕೆಗೆ ಹೆಣ್ಣು ಮಕ್ಕಳು ಕುದಿಯುತ್ತಿದ್ದಾರೆ. ಜನರೇ ಈ ಸಂದರ್ಭದಲ್ಲಿ ರೊಚ್ಚಿಗೆದ್ದಿದ್ದಾರೆ. ಹದಿನೈದು ಲಕ್ಷ ಕೊಡುತ್ತೇವೆ ಅಂದ್ರು, ಹದಿನೈದು ಪೈಸೆನೂ ಕೊಡಲಿಲ್ಲ ಎಂದಿದ್ದಾರೆ.
ಇದೇ ವೇಳೆ ರಮೇಶ್ ಬೆಂಬಲಿಗರ ಆಕ್ರೋಶ ವಿಚಾರವಾಗಿ ಮಾತನಾಡಿದ ಅವರು, ನನ್ನ ಸ್ವಾಗತ ಮಾಡ್ತಿದ್ದಾರೆ ಅವರಿಗೆ ಅಭಿನಂದನೆ ಸಲ್ಲಿಸುತೇನೆ ಎಂದರು.