ಬೆಂಗಳೂರು: ಕೇಂದ್ರ ಸರ್ಕಾರವು ಲಸಿಕಾ ನೀತಿಗೆ ಸಂಬಂಧಿಸಿದಂತೆ ಹಲವು ಬಾರಿ ‘ಯೂ-ಟರ್ನ್’ ಹೊಡೆಯುತ್ತಿದ್ದು, ವೃತ್ತದಲ್ಲಿ ತಿರುಗುತ್ತಿರುವಂತೆ ಅನಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೇಂದ್ರ ಸರ್ಕಾರವು ಲಸಿಕಾ ನೀತಿಗೆ ಸಂಬಂಧಿಸಿದಂತೆ ಹಲವು ಬಾರಿ ‘ಯೂ-ಟರ್ನ್’ ಹೊಡೆಯುತ್ತಿದ್ದು, ವೃತ್ತದಲ್ಲಿ ತಿರುಗುತ್ತಿರುವಂತೆ ಅನಿಸುತ್ತಿದೆ ರಾಜ್ಯಗಳೋ ಅಥವಾ ಕೇಂದ್ರವೋ? ಉಚಿತವೋ ಅಥವಾ ಹಣ ನೀಡಬೇಕೋ? 45+ ಅಥವಾ ಎಲ್ಲರಿಗೂ? ನಮಗೆ ಸರಿಯಾದ ನಿರ್ಧಾರ ಕೈಗೊಳ್ಳುವ ಸರ್ಕಾರ ಬೇಕಿತ್ತು, ಆದರೆ ಇದೇಕೋ ಗೋಜಲಾಗುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ:ಕೋವಿಡ್ ಅವಧಿಯಲ್ಲಿ ಲಕ್ಷಾಂತರ ಬುಡಕಟ್ಟು ಮಕ್ಕಳ ಆರೋಗ್ಯ ಸಮಸ್ಯೆ
ಇನ್ಮುಂದೆ ಕೇಂದ್ರ ಸರ್ಕಾರವೇ ರಾಜ್ಯ ಸರ್ಕಾರಗಳಿಗೆ ಉಚಿತ ಲಸಿಕೆ ನೀಡಲಿದೆ. ರಾಜ್ಯ ಸರ್ಕಾರಗಳ ಲಸಿಕೆ ಬೇಡಿಕೆಗಳನ್ನು ಕೇಂದ್ರ ಈಡೇರಿಸಲಿದೆ. ಮುಂದಿನ ಎರಡು ವಾರಗಳ ನಂತರ ಲಸಿಕೆಯನ್ನು ನೀಡಲಿದೆ. ರಾಜ್ಯಗಳಿಗೆ ಹಸ್ತಾಂತರಿಸಿದ ಶೇಕಡಾ 25 ರಷ್ಟು ವ್ಯಾಕ್ಸಿನೇಷನ್ ಸಂಗ್ರಹವನ್ನು ಮುಂದೆ ಕೇಂದ್ರ ಸರ್ಕಾರ ವಹಿಸಿಕೊಳ್ಳಲಿದೆ ಎಂದು ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಸೋಮವಾರ ಹೇಳಿದ್ದರು.
18 ರಿಂದ 44 ವರ್ಷ ವಯಸ್ಸಿನ ಪ್ರತಿಯೊಬ್ಬರಿಗೂ ಕೋವಿಡ್ -19 ಲಸಿಕೆಗಳನ್ನು ಖರೀದಿಸಲು ಮತ್ತು ಅವುಗಳನ್ನು ರಾಜ್ಯಗಳಿಗೆ ಉಚಿತವಾಗಿ ಪೂರೈಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.