Advertisement

ಡಿಕೆಶಿ ಮನೆಗೆ ಆಗಮಿಸಿ ಹುಡುಗಿ ನೋಡುವ ಶಾಸ್ತ್ರ ಪೂರೈಸಿದ ಎಸ್‌.ಎಂ ಕೃಷ್ಣ ಕುಟುಂಬ

05:53 PM Jun 15, 2020 | keerthan |

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಮೊಮ್ಮಗ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಮಗಳ ವಿವಾಹ ಸಿದ್ಧತೆ ಭರ್ಜರಿಯಾಗಿಯೇ ನಡೆಯುತ್ತಿದೆ. ಇಂದು ಎಸ್ ಎಂ ಕೃಷ್ಣ ಅವರ ಕುಟುಂಬ ಡಿ ಕೆ ಶಿವಕುಮಾರ್ ಅವರ ಮನೆಗೆ ಆಗಮಿಸಿ ಹುಡುಗಿ ನೋಡುವ ಶಾಸ್ತ್ರ ಪೂರೈಸಿದರು.

Advertisement

ಸದಾಶಿವನಗರದ ಡಿ.ಕೆ ಶಿವಕುಮಾರ್ ನಿವಾಸಕ್ಕೆ ಎಸ್ ಎಂ ಕೃಷ್ಣ ಕುಟುಂಬ ಆಗಮಿಸಿ ಶಾಸ್ತ್ರ ಪೂರೈಸಿದರು. ಡಿಕೆ ಶಿ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಹಾಗೂ ಎಸ್‌ಎಂಕೆ ಮೊಮ್ಮಗ ಅಮರ್ತ್ಯ ಪರಸ್ಪರ ಹಾರ ಬದಲಾಯಿಸಿಕೊಂಡರು.

ರವಿವಾರ ಡಿ ಕೆ ಶಿವಕುಮಾರ್ ಕುಟುಂಬ ಎಸ್ ಎಂ ಕೃಷ್ಣ ಅವರ ಮನೆಗೆ ಭೇಟಿ ನೀಡಿತ್ತು. ಈ ಮೂಲಕ ಹುಡುಗ ನೋಡುವ ಶಾಸ್ತ್ರವನ್ನುನಡೆಸಿದ್ದರು. ಇಂದು  ಡಿಕೆಶಿ ಮನೆಗೆ  ಎಸ್‌ಎಂಕೆ ಕುಟುಂಬಿಕರು ಆಗಮಿಸಿದರು.  ಆಷಾಢ ಮಾಸ ಮುಗಿದ ಬಳಿಕ ಅದ್ಧೂರಿಯಾಗಿ ವಿವಾಹ ನಿಶ್ಚಿತಾರ್ಥ ನಡೆಯಲಿದೆ ಎನ್ನಲಾಗಿದೆ.

ಈ ಹಿಂದೆ ಎಸ್ ಎಂ ಕೃಷ್ಣ  ಅವರ ವಲಯದಲ್ಲೇ ಡಿಕೆಶಿ ಗುರುತಿಸಿಕೊಂಡಿದ್ದರು. ಆದರೆ ಸದ್ಯ ಎಸ್‌ಎಂಕೆ ಅವರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ. ಆದರೆ ಉಭಯರ ಬಾಂಧವ್ಯ ಮುಂದುವರಿದಿತ್ತು. ಡಿಕೆಶಿ ಅಳಿಯ ಉದ್ಯಮಿ ಸಿದ್ದಾರ್ಥ್ ಜೊತೆಗೆ ಡಿಕೆಶಿ ಉತ್ತಮ ಬಾಂಧವ್ಯ ಹೊಂದಿದ್ದರು. ಹಾಗಾಗಿ ಈ ಸ್ನೇಹ ಇಂದು ದಿ. ಸಿದ್ದಾರ್ಥ್ ಪುತ್ರ ಮತ್ತು ಡಿಕೆಶಿ ಪುತ್ರಿಯ ವಿವಾಹಕ್ಕೆ ಕಾರಣವಾಗಿದೆ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next