Advertisement

ದ.ಕ. ಲೋಕಸಭಾ ಕ್ಷೇತ್ರ; 40 ಮತಗಟ್ಟೆಗಳ ಮತ ತಾಳೆ

08:36 PM May 27, 2019 | Sriram |

ಮಹಾನಗರ: ಪ್ರತೀ ಲೋಕಸಭಾ ಕ್ಷೇತ್ರದ ಪೈಕಿ ಪ್ರತೀ ವಿಧಾನ ಸಭಾ ಕ್ಷೇತ್ರದ 5 ಮತಗಟ್ಟೆಗಳ ವಿ.ವಿ. ಪ್ಯಾಟ್‌ಗಳ ಮತಗಳನ್ನು ತಾಳೆ ಹಾಕಲು ಸುಪ್ರೀಂ ಕೋರ್ಟ್‌ ನೀಡಿದ ಸೂಚನೆ ಹಿನ್ನೆಲೆಯಲ್ಲಿ ದ.ಕ.ಲೋಕಸಭಾ ಕ್ಷೇತ್ರದ ಒಟ್ಟು 40 ಮತಗಟ್ಟೆಗಳ ಎಲ್ಲವೂ ಮತಗಳನ್ನು ತಾಳೆ ಮಾಡಲಾಗಿದೆ.

Advertisement

ಮತ ಎಣಿಕೆ ಸಂದರ್ಭ ವಿದ್ಯುನ್ಮಾನ ಮತ ಯಂತ್ರದ ಮತಗಳ ಎಣಿಕೆ ಜತೆ ಒಟ್ಟು 40 ಮತಗಟ್ಟೆಗಳ ವಿ.ವಿ. ಪ್ಯಾಟ್‌ಗಳ ಎಣಿಕೆ ನಡೆಸಲಾಗಿತ್ತು.

ದ.ಕ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಲಾಟರಿ ಎತ್ತುವ ಮೂಲಕ ಆಯ್ಕೆಯಾಗಿ ವಿ.ವಿ.ಪ್ಯಾಟ್‌

ಮತಗಟ್ಟೆಗಳ ಸಂಖ್ಯೆ ಹಾಗೂ ವಿವರ:
ಮಂಗಳೂರು ದಕ್ಷಿಣ: 99-ದ.ಕ.ಜಿ.ಪಂ. ಹಿ.ಪ್ರಾ. ಶಾಲೆ ಕಸಬಾ ಬೆಂಗ್ರೆ, 109-ದ.ಕ.ಜಿ.ಪಂ. ಉರ್ದು ಹಿಪ್ರಾ ಶಾಲೆ ಕುದ್ರೋಳಿ, 195-ಆಂಗ್ಲ ಮಾಧ್ಯಮ ಶಾಲೆ ಕಣ್ಣೂರು, 235-ಸರಕಾರಿ ಹೈಸ್ಕೂಲ್‌ ಹೊಯ್ಗೆ ಬಜಾರ್‌, 160-ಇನ್‌ಫಾಂಟ್‌ ಮೇರಿಸ್‌ ಹಿ.ಪ್ರಾ. ಶಾಲೆ ಜೆಪ್ಪು.
ಮಂಗಳೂರು ಉತ್ತರ: 187- ವಿವೇಕಾ ನಂದ ಪಿ.ಯು. ಕಾಲೇಜ್‌ ಎಡಪದವು, 57-ವೆಂಕಟ್ರಮಣ ಹಿ.ಪ್ರಾ. ಶಾಲೆ ಕುಳಾಯಿಗುಡ್ಡೆ, 85-ಸರಕಾರಿ ಪಿ.ಯು. ಕಾಲೇಜ್‌ ಕಾವೂರು, 233-ಸೈಂಟ್‌ ಲಿಗೌರ್ ಅನುದಾನಿತ ಹಿ.ಪ್ರಾ.ಶಾಲೆ ಮೇರ‌್ಲಪದವು, 65-ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಬೈಕಂಪಾಡಿ.
ಮಂಗಳೂರು: 8-ದ.ಕ.ಜಿ.ಪಂ. ಉರ್ದು ಹಿಪ್ರಾ ಶಾಲೆ ಉಳ್ಳಾಲ, 96-ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಮೂಳೂರು, 102-ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಕೊಣಾಜೆ, 116-ಗ್ರೀನ್‌ ವ್ಯೂ ಶಾಲೆ ಕೊಣಾಜೆ, 171-ಶಾರದಾ ವಿದ್ಯಾನಿಕೇತನ ತಲಪಾಡಿ.
ಮೂಡುಬಿದಿರೆ: 45 -ದ.ಕ.ಜಿ.ಪಂ. ಹಿಪ್ರಾ ಶಾಲೆ ಪಣಪಿಲ, 94-ಪೊಂಪೈ ಕಾಲೇಜ್‌ ಐಕಳ, 101-ಸೈಂಟ್‌ ಮೇರಿಸ್‌ ಹಿಪ್ರಾ ಶಾಲೆ ಕಿನ್ನಿಗೋಳಿ, 163-ದ.ಕ.ಜಿ. ಪಂ.ಹಿ.ಪ್ರಾ. ಶಾಲೆ ಕುತ್ತೆತ್ತೂರು, 207-ದ.ಕ. ಜಿ.ಪಂ.ಹಿ.ಪ್ರಾ. ಶಾಲೆ ತೋಡಾರ್‌.
ಬಂಟ್ವಾಳ: 28-ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಕೊçಲ, 68-ಎಸ್‌ವಿಎಸ್‌ ಶಾಲೆ ಬಂಟ್ವಾಳ, 84-ಚಂದ್ರಮೌಳಿ ಅನುದಾನಿತ ಹಿ.ಪ್ರಾ. ಶಾಲೆ ಕಾವಳಮೂಡೂರು. 137-ಅಂಗನವಾಡಿ ಕೇಂದ್ರ ಜಾರಂದಗುಡ್ಡೆ ಕಳ್ಳಿಗೆ, 138-ದ.ಕ.ಜಿ.ಪಂ. ಹಿಪ್ರಾ ಶಾಲೆ ಕಳ್ಳಿಗೆ
ಬೆಳ್ತಂಗಡಿ: 14-ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ನಾವೂರು, 162 – ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹೈಸ್ಕೂಲ್‌ ಧರ್ಮಸ್ಥಳ, 164-ಧರ್ಮಸ್ಥಳ ಮಂಜು ನಾಥೇಶ್ವರ ಅನುದಾನಿತ ಹಿ.ಪ್ರಾ. ಶಾಲೆ ಧರ್ಮಸ್ಥಳ, 164-ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಮಿಯ್ನಾರುಮಠ ಪುದುವೆಟ್ಟು, 210-ದ.ಕ. ಜಿ.ಪಂ.ಹಿ.ಪ್ರಾ. ಶಾಲೆ ನಿಡ್ಲೆ.
ಪುತ್ತೂರು :15-ದ.ಕ.ಜಿ.ಪಂ. ಮಾದರಿ ಹಿ.ಪ್ರಾ. ಶಾಲೆ (ನಾರ್ತ್‌ ವಿಭಾಗ) ವಿಟ್ಲ, 16-ಸೈಂಟ್‌ ರೀಟಾ ಅನುದಾನಿತ ಹಿ.ಪ್ರಾ. ಶಾಲೆ ವಿಟ್ಲ, 156-ದ.ಕ.ಜಿ.ಪಂ.ಕಿ.ಪ್ರಾ. ಶಾಲೆ ಇದ್ಯೊಟ್ಟು ಕುರಿಯ, 158-ದ.ಕ.ಜಿ.ಪಂ. ಹಿಪ್ರಾ ಶಾಲೆ ಮಾವಿನಕಟ್ಟೆ ಕುರಿಯ, 193-ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಸರ್ವೆ.
ಸುಳ್ಯ: 145-ದ.ಕ.ಜಿ.ಪಂ. ಮಾದರಿ ಹಿ.ಪ್ರಾ. ಶಾಲೆ ಬೆಳ್ಳಾರೆ, 151-ಸರಕಾರಿ ಪಿ.ಯು. ಕಾಲೇಜ್‌ ಐವರ್ನಾಡು, 172-ದ.ಕ.ಜಿ.ಪಂ. ಹಿ.ಪ್ರಾ. ಶಾಲೆ ಜಟ್ಟಿ ಪಳ್ಳ, 191-ದ.ಕ.ಜಿ.ಪಂ. ಮಾದರಿ ಹಿ.ಪ್ರಾ. ಶಾಲೆ ಮಂಡೆಕೋಲು, 216-ಗ್ರಾ.ಪಂ. ಸಭಾ ಭವನ ಅರಂತೋಡು .

ಎಲ್ಲ ಮತಗಳು
ತಾಳೆಯಾಗಿವೆ
ವಿ.ವಿ.ಪ್ಯಾಟ್‌ಗಳ ಮತ ಎಣಿಕೆ ಮಾಡಲು ಮತಗಟ್ಟೆಗಳನ್ನು ಲಾಟರಿ ಎತ್ತುವ ಮೂಲಕ ಆಯ್ಕೆ ಮಾಡಲಾಗಿತ್ತು. ಈ ಮತಗಟ್ಟೆಗಳಲ್ಲಿ ವಿದ್ಯುನ್ಮಾನ ಮತ ಯಂತ್ರದಲ್ಲಿ ಚಲಾವಣೆಯಾದ ಮತಗಳನ್ನು ವಿ.ವಿ.ಪ್ಯಾಟ್‌ನಲ್ಲಿದ್ದ ಮತಗಳಿಗೆ ತಾಳೆ ಹಾಕಿ ಫ‌ಲಿತಾಂಶವನ್ನು ಖಚಿತ ಪಡಿಸಲಾಗಿದ್ದು ಎಲ್ಲ ಮತಗಳು ತಾಳೆಯಾಗಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next