ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಮಾದಕ ದ್ರವ್ಯ ಸೇವನೆ ಮತ್ತು ಅಕ್ರಮ ಮಾದಕ ದ್ರವ್ಯ ಕಳ್ಳಸಾಗಣೆ ವಿರುದ್ಧ ಅಂತಾರಾಷ್ಟ್ರೀಯ ದಿನದ ಅಂಗವಾಗಿ ಭಾನುವಾರ 11 ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ 580 ಕೆಜಿ ಗೂ ಹೆಚ್ಚು ಗಾಂಜಾ ಮತ್ತು 120 ಗ್ರಾಂ ಹೆರಾಯಿನ್ ನಾಶ ಮಾಡಿದರು.
Advertisement
ಮಂಗಳೂರು ಕಮಿಷನರೇಟ್ ವ್ಯಾಪ್ತಿಯ 15 ಠಾಣೆಗಳಲ್ಲಿ ವಶ ಪಡಿಸಿಕೊಂಡ 580 ಕೆಜಿ ಗೂ ಹೆಚ್ಚು ಗಾಂಜಾ ಸೇರಿದಂತೆ 1.28 ಕೋಟಿ ರೂ. ಮಾರುಕಟ್ಟೆ ಮೌಲ್ಯ ಹೊಂದಿರುವ ಅಪಾರ ಪ್ರಮಾಣದ ಅಕ್ರಮ ಮಾದಕ ವಸ್ತುಗಳನ್ನು ನಾಶ ಮಾಡಲಾಗಿದೆ.
ಹಿರಿಯ ಪೊಲೀಸ್ ಅಧಿಕಾರಿಗಳ ಸಮಕ್ಷಮದಲ್ಲಿ ನಾಶ ಪ್ರಕ್ರಿಯೆ ನಡೆಸಲಾಗಿದೆ.