Advertisement
ಮೃತ ವ್ಯಕ್ತಿಯ ಸಂಪರ್ಕದಲ್ಲಿದ್ದ ಕಾರು ಚಾಲಕ, ಮೃತ ವ್ಯಕ್ತಿಯ ಮನೆ ಮಂದಿ, ಸಂಬಂಧಿಕರ ಸಹಿತ ಒಟ್ಟು 10 ಮಂದಿಯನ್ನು ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಇತರರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ರವಿವಾರ ಒಟ್ಟು 94 ಮಂದಿಯ ಗಂಟಲ ದ್ರವ ಮಾದರಿಯ ವರದಿ ಬಂದಿದ್ದು, 5 ಪಾಸಿಟಿವ್ ಪ್ರಕರಣ ಕಂಡುಬಂದಿದೆ. 230 ಮಂದಿಯ ಗಂಟಲ ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಒಟ್ಟು 365 ಮಂದಿಯ ವರದಿ ಬರಬೇಕಿದೆ.
ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾದ 50 ವರ್ಷದ ವ್ಯಕ್ತಿ ಮಧುಮೇಹ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದು, ಈವರೆಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆಗೆ ಸ್ಪಂಧಿಸಿದ ಕಾರಣ ಅವರನ್ನು ವಾರ್ಡಿಗೆ ಸ್ಥಳಾಂತರಿಸಲಾಗಿದೆ. ಕೋವಿಡ್ ದೃಢಪಟ್ಟು ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿರುವ 70 ವರ್ಷ ವ್ಯಕ್ತಿ ಮಧುಮೇಹ ಮತ್ತು ನ್ಯೂಮೋನಿಯದಿಂದ ಬಳಲುತ್ತಿದ್ದು, 52 ವರ್ಷದ ವ್ಯಕ್ತಿ ಮಧುಮೇಹ ಮತ್ತು ಅಬುìದ ರೋಗದಿಂದ ಬಳಲುತ್ತಿದ್ದಾರೆ. ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟಾರೆ 8 ಮಂದಿ ಸಾವು
ಕೊರೊನಾ ಸೋಂಕಿನಿಂದಾಗಿ ದ.ಕ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 8 ಮಂದಿ ಸಾವನ್ನಪ್ಪಿದ್ದಾರೆ. ಈ ಹಿಂದೆ ಬಂಟ್ವಾಳ ಮೂಲದ ಒಂದೇ ಮನೆಯ ಅತ್ತೆ, ಸೊಸೆ ಸಹಿತ ಮೂವರು, ಶಕ್ತಿನಗರದ ಮಹಿಳೆ, ಬೋಳೂರಿನ ಮಹಿಳೆ, ವೇಣೂರಿನ ವ್ಯಕ್ತಿ ಮೃತಪಟ್ಟಿದ್ದರು. ಕಡಂದಲೆಯ ಕ್ವಾರಂಟೈನ್ ಕೇಂದ್ರದಲ್ಲಿದ್ದ 55ರ ಹರೆಯದ ವ್ಯಕ್ತಿ ಕಳೆದ ತಿಂಗಳು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಬಳಿಕ ಅವರಲ್ಲಿ ಕೋವಿಡ್ ದೃಢಪಟ್ಟಿತ್ತು. ಇನ್ನು, ಮಹಾರಾಷ್ಟ್ರದಿಂದ ಬಂದಿದ್ದ 24 ವರ್ಷದ ಯುವಕ ಜೂ 11ರಂದು ಮೃತಪಟ್ಟಿದ್ದಾರೆ.
Related Articles
ಜಿಲ್ಲೆಯಲ್ಲಿ ರವಿವಾರ ಸ್ವೀಕೃತವಾದ ವರದಿಯಲ್ಲಿ 5 ಮಂದಿಗೆ ಕೊರೊನಾ ದೃಢಪಟ್ಟಿದೆ. ಈ ಪೈಕಿ 3 ಮಂದಿ ಸೌದಿ ಅರೇಬಿಯಾದಿಂದ ಆಗಮಿಸಿದವರು. ಇವರಲ್ಲಿ ಇಬ್ಬರು ಗರ್ಭಿಣಿಯರಿಗೆ ಕೋವಿಡ್ ಸೋಂಕು ತಗಲಿದೆ. ಮತ್ತೂಬ್ಬರು ಈ ಹಿಂದೆ ಮುಂಬಯಿಯಿಂದ ಆಗಮಿಸಿ ಕೋವಿಡ್ ದೃಢಪಟ್ಟ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದರು.
Advertisement