Advertisement

ದ.ಕ.: ಕಾಲೇಜುಗಳಲ್ಲಿ  57,018 ಮಂದಿಗೆ ಲಸಿಕೆ

09:13 PM Jul 15, 2021 | Team Udayavani |

ಮಹಾನಗರ: ಕಾಲೇಜು ಆರಂಭಕ್ಕೆ ಪೂರ್ವಭಾವಿಯಾಗಿ ಪದವಿ ವಿದ್ಯಾರ್ಥಿಗಳು, ಬೋಧಕ, ಬೋಧಕೇತರ ಸಿಬಂದಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದ್ದು, ಇಲ್ಲಿಯವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 57,018 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ.

Advertisement

ಜಿಲ್ಲೆಯಲ್ಲಿ ಪದವಿ ಕಾಲೇಜುಗಳು 61, ಡಿಪ್ಲೊಮಾ ಮತ್ತು ಎಂಜಿನಿಯರಿಂಗ್‌ ಕಾಲೇಜುಗಳು 43, ನರ್ಸಿಂಗ್‌, ಪ್ಯಾರಾ ಮೆಡಿಕಲ್‌ ಕಾಲೇಜುಗಳು 32, ಮೆಡಿಕಲ್‌ ಕಾಲೇಜುಗಳು 8 ಇದ್ದು, ಒಟ್ಟು ವಿದ್ಯಾರ್ಥಿಗಳು 1,52,310 ಇದ್ದಾರೆ. ಜತೆಗೆ ಬೋಧಕರು 12,687 ಹಾಗೂ ಬೋಧಕೇತರ ಸಿಬಂದಿ 15,153 ಮಂದಿ ಇದ್ದು ಅವರೆಲ್ಲರಿಗೂ ಲಸಿಕೆ ನೀಡುವ ಗುರಿ ಇದೆ. ಲಸಿಕೆ ಲಭ್ಯತೆಯ ಅನುಗುಣವಾಗಿ ಎಲ್ಲ ಪದವಿ/ಡಿಪ್ಲೊಮಾ, ಐಟಿಐ/ ಎಂಜಿನಿಯರಿಂಗ್‌/ಪ್ಯಾರಾ ಮೆಡಿಕಲ್‌ ಮುಂತಾದ ಶಿಕ್ಷಣ ಸಂಸ್ಥೆಗಳ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು, ಬೋಧಕರು, ಬೋಧಕೇತರ ಸಿಬಂದಿ ಲಸಿಕೆ ಪಡೆಯುತ್ತಿದ್ದಾರೆ.

ಜೂ. 27ರಂದು ಲಸಿಕೆ ವಿತರಣೆ ಆರಂಭವಾಗಿದ್ದು, ಜು. 13, 14ರಂದು ಲಸಿಕೆ ಕೊರತೆ ಕಾರಣದಿಂದ ಕಾಲೇಜುಗಳಲ್ಲಿ ಲಸಿಕೆ ನಡೆದಿರಲಿಲ್ಲ. ಇದೀಗ ಮತ್ತೆ ದಕ್ಷಿಣ ಕನ್ನಡ ಜಿಲ್ಲೆಗೆ 18 ಸಾವಿರ ಡೋಸ್‌ ಲಸಿಕೆ ಬುಧವಾರ ಬಂದಿರುವ ಹಿನ್ನೆಲೆಯಲ್ಲಿ ಗುರುವಾರ ಮತ್ತೆ ಲಸಿಕೆ ಆರಂಭಿಸಲಾಗಿದೆ.

ಎರಡನೇ ಡೋಸ್‌ ನೆಪ; ಕಾಲೇಜು ಲಸಿಕೆ ಲೇಟ್‌!:

ಈಗಾಗಲೇ ಮೊದಲ ಡೋಸ್‌ ಪಡೆದುಕೊಂಡವರು ಅದರಲ್ಲಿಯೂ ಮುಖ್ಯವಾಗಿ ಕೊವಿಶೀಲ್ಡ್‌ ಲಸಿಕೆ ಪಡೆದುಕೊಂಡವರು ಎರಡನೇ ಡೋಸ್‌ಗೆ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದಾರೆ. ಈ ಕಾರಣದಿಂದ ಜಿಲ್ಲೆಗೆ ಬರುವ ಲಸಿಕೆಯಲ್ಲಿ ಶೇ. 50ರಷ್ಟು ಅವರಿಗೆ ಮೀಸಲು ಇಡುವ ಕಾರ್ಯ ನಡೆಯುತ್ತಿದೆ. ಉಳಿದ ಶೇ.50ರಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

Advertisement

ಕಾಲೇಜು ಲಸಿಕೆ: ತಾಲೂಕುವಾರು

ವಿವರ (ಜು. 12ವರೆಗೆ)

ತಾಲೂಕು           ಕಾಲೇಜು ಸಂಖ್ಯೆ               ವಿದ್ಯಾರ್ಥಿಗಳು/

ಬೋಧಕರು/ಸಿಬಂದಿ ಸಂಖ್ಯೆ

ಬಂಟ್ವಾಳ           41           6,699

ಬೆಳ್ತಂಗಡಿ           17           4,732

ಮಂಗಳೂರು     91           36,714

ಪುತ್ತೂರು            33           5,370

ಸುಳ್ಯ    58           3,503

ಒಟ್ಟು   240         57,018

ದ.ಕ. ಜಿಲ್ಲೆಯ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಸಿಬಂದಿ ಸಹಿತ ಒಟ್ಟು 1.80 ಲಕ್ಷ ಮಂದಿಗೆ ಲಸಿಕೆ ವಿತರಿಸುವ ಗುರಿ ಇದೆ. ಈ ಪೈಕಿ ಮೊದಲ ಡೋಸ್‌ ಅನ್ನು 57 ಸಾವಿರ ಮಂದಿ ಈಗಾಗಲೇ ಪಡೆದುಕೊಂಡಿದ್ದಾರೆ. ಲಸಿಕೆ ಲಭ್ಯತೆಗೆ ಅನುಗುಣವಾಗಿ ಆಯಾ ಕಾಲೇಜುಗಳಲ್ಲಿ ಲಸಿಕೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಎಲ್ಲ ವಿದ್ಯಾರ್ಥಿಗಳು/ಶಿಕ್ಷಕರಿಗೆ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗುವುದು. ಡಾ| ರಾಜೇಶ್‌,  ದ.ಕ. ಆರ್‌ಸಿಎಚ್‌ ಅಧಿಕಾರಿ, ಆರೋಗ್ಯ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next