Advertisement

ಜೊಕೋವಿಕ್‌ ಯುಎಸ್‌ ಓಪನ್‌ ಆಡುವುದಿಲ್ಲ 

10:09 PM Aug 25, 2022 | Team Udayavani |

ನ್ಯೂಯಾರ್ಕ್‌: ಸ್ಟಾರ್‌ ಟೆನಿಸಿಗ ನೊವಾಕ್‌ ಜೊಕೋವಿಕ್‌ ವರ್ಷಾಂತ್ಯದ ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ನಿಂದ ಹಿಂದೆ ಸರಿದಿರುವುದಾಗಿ ಗುರುವಾರ ಅಧಿಕೃತವಾಗಿ ಪ್ರಕಟಿಸಿದರು. ಕಾರಣ, ಅವರಿನ್ನೂ ಕೊರೊನಾ ಚುಚ್ಚುಮದ್ದು ತೆಗೆದುಕೊಳ್ಳದಿರುವುದು. ಹೀಗಾಗಿ ಅವರಿಗೆ ನ್ಯೂಯಾರ್ಕ್‌ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ.

Advertisement

“ಯುಎಸ್‌ ಓಪನ್‌ಗಾಗಿ ನನಗೆ ನ್ಯೂಯಾರ್ಕ್‌ಗೆ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. ಬೇಸರವಾಗುತ್ತಿದೆ. ನಿಮ್ಮೆಲ್ಲರ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು. ಎಲ್ಲ ಟೆನಿಸಿಗರಿಗೆ ಗುಡ್‌ ಲಕ್‌’ ಎಂದು ಹಾರೈಸಿದ್ದಾರೆ ಜೊಕೋವಿಕ್‌.

Advertisement

Udayavani is now on Telegram. Click here to join our channel and stay updated with the latest news.

Next