Advertisement

ನೊವಾಕ್‌ ಜೊಕೋವಿಕ್‌ಗೆ ಅಡಿಲೇಡ್‌ ಕಿರೀಟ

10:57 PM Jan 08, 2023 | Team Udayavani |

ಅಡಿಲೇಡ್‌: ಗಾಯದ ಸಮಸ್ಯೆಯಿಂದ ಬಳಲಿದರೂ ನೊವಾಕ್‌ ಜೊಕೋವಿಕ್‌ “ಅಡಿಲೇಡ್‌ ಇಂಟರ್‌ನ್ಯಾಶನಲ್‌ ಟೆನಿಸ್‌’ ಪ್ರಶಸ್ತಿಯನ್ನು ಎತ್ತುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ರವಿವಾರ ಫೈನಲ್‌ನಲ್ಲಿ ಅವರು ಅಮೆರಿಕದ ಸೆಬಾಸ್ಟಿಯನ್‌ ಕೋರ್ಡ ವಿರುದ್ಧ 6-7 (8-10), 7-6 (7-3), 6-4 ಅಂತರದ ಗೆಲುವು ಸಾಧಿಸಿದರು.

ಡ್ಯಾನಿಲ್‌ ಮೆಡ್ವೆಡೇವ್‌ ಎದುರಿನ ಸೆಮಿಫೈನಲ್‌ ಬಳಿಕ ಜೊಕೋವಿಕ್‌ ತೀವ್ರ ಸ್ನಾಯು ಸೆಳೆತಕ್ಕೆ ಸಿಲುಕಿದ್ದರು. ರವಿವಾರ ಫೈನಲ್‌ ವೇಳೆಯೂ ಇದು ಸಣ್ಣ ಮಟ್ಟದಲ್ಲಿ ಕಾಡಿತು. ಆದರೆ 3 ಗಂಟೆಗೂ ಹೆಚ್ಚು ಕಾಲ ನಡೆದ ಫೈನಲ್‌ನಲ್ಲಿ ಜೊಕೋ ದಿಟ್ಟ ಹೋರಾಟ ನಡೆಸಿದರು. ತಮ್ಮ ಟೆನಿಸ್‌ ಬಾಳ್ವೆಯ 92ನೇ ಸಿಂಗಲ್ಸ್‌ ಪ್ರಶಸ್ತಿಯನ್ನೆತ್ತಿದರು.

ಇದು 16 ವರ್ಷಗಳ ಬಳಿಕ ಜೊಕೋವಿಕ್‌ಗೆ ಒಲಿದ ಅಡಿಲೇಡ್‌ ಪ್ರಶಸ್ತಿಯಾಗಿದೆ. 2007ರಲ್ಲಿ, 19ರ ಹರೆಯದ ಜೊಕೋ ಮೊದಲ ಸಲ ಇಲ್ಲಿ ಚಾಂಪಿಯನ್‌ ಆಗಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next