Advertisement
7ನೇ ಪ್ರಶಸ್ತಿ ಮೇಲೆ ಗುರಿಯಿಟ್ಟಿರುವ ಜೊಕೋವಿಕ್ ಸೋಮವಾರದ ಪಂದ್ಯದಲ್ಲಿ ಆರ್ಜೆಂಟೀನಾದ ಫೆಡ್ರಿಕೊ ಡೆಲ್ಬೋನಿಸ್ ವಿರುದ್ಧ 7-5, 4-6, 6-1 ಸೆಟ್‌ಗಳಿಂದ ಸೋಲಿಸಿದರು.
Related Articles
Advertisement
ಹಾಲೆಪ್-ವೀನಸ್ ಮುಖಾಮುಖೀನಂ.1 ಪಟ್ಟವನ್ನು ಮತ್ತೆ ಪಡೆಯುವ ಕನಸನ್ನು ಜೀವಂತವಾಗಿರಿಸಿರುವ ರೊಮೇನಿಯಾದ ಸಿಮೋನಾ ಹಾಲೆಪ್ ಸ್ಲೋವೆನಿಯಾದ ಪೊಲೊನಾ ಹರ್ಕಾಂಗ್ ವಿರುದ್ಧ 5-7, 7-6 (7-1), 6-2 ಜಯಿಸಿ 16ನೇ ಸುತ್ತು ಪ್ರವೇಶಿಸಿದ್ದಾರೆ. ಇಲ್ಲಿ ಅವರು ವೀನಸ್ ವಿಲಿಯಮ್ಸ್ ವಿರುದ್ಧ ಆಡಲಿದ್ದಾರೆ. ಸದ್ಯ 3ನೇ ರ್‍ಯಾಂಕಿನಲ್ಲಿರುವ ಹಾಲೆಪ್ ಚೊಚ್ಚಲ “ಮಯಾಮಿ ಓಪನ್’ ಜಯಿಸಿದರೆ ಮತ್ತೆ ಅಗ್ರಸ್ಥಾನಕ್ಕೇರುವ ಅವಕಾಶವಿದೆ. ಇನ್ನೊಂದು ಪಂದ್ಯದಲ್ಲಿ 7 ಬಾರಿಯ ಗ್ರ್ಯಾನ್ ಸ್ಲಾಮ್ ಚಾಂಪಿಯನ್ ವೀನಸ್ ವಿಲಿಯಮ್ಸ್ ರಶ್ಯದ ದರಿಯಾ ಕಸತ್ಕಿನಾ ಅವರನ್ನು 6-3, 6-1 ನೇರ ಗೇಮ್‌ಗಳಿಂದ ಸೋಲಿಸಿದರು. ಚಾಂಪಿಯನ್ ಸ್ಟೀಪನ್ಸ್ ಔಟ್
ಇನ್ನೊಂದೆಡೆ ಅಮೆರಿಕದ ಸ್ಲೋನ್ ಸ್ಟೀಫನ್ಸ್ ಅವರ ಪ್ರಶಸ್ತಿ ಉಳಿಸಿಕೊಳ್ಳುವ ಆಟ ಕೊನೆಗೊಂಡಿದೆ. ಅವರು ಜರ್ಮನಿಯ ತಜಾನಾ ಮರಿಯಾ ವಿರುದ್ಧ 6-3, 6-2 ಸೆಟ್‌ಗಳಿಂದ ಪರಾಭವಗೊಂಡರು. ಸ್ಪೀಫನ್ಸ್ ಅವರಿಗಿದು ಎರಡನೇ ಅನಿರೀಕ್ಷಿತ ಸೋಲು. ಕಳೆದ ಇಂಡಿಯನ್ ವೆಲ್ಸ್ ಕೂಟದಲ್ಲಿ ಅವರು 3ನೇ ಸುತ್ತಿನಲ್ಲೇ ಎಡವಿದ್ದರು.