ಟೋಕಿಯೊ: ವಿಶ್ವದ ನಂಬರ್ ವನ್ ಆಟಗಾರ ನೊವಾಕ್ ಜೊಕೋವಿಕ್ ಜಪಾನ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಮೂಡಿಬಂದಿದ್ದಾರೆ. ರವಿವಾರ ನಡೆದ ಫೈನಲ್‌ನಲ್ಲಿ ಅವರು ಆಸ್ಟ್ರೇಲಿಯದ ಅರ್ಹತಾ ಆಟಗಾರ ಜಾನ್ ಮಿಲ್‌ಮಾÂನ್ ವಿರುದ್ಧ 6-3, 6-2 ಅಂತರದ ಸುಲಭ ಜಯ ಸಾಧಿಸಿದರು.
ಜೊಕೋವಿಕ್ ಜಪಾನ್ ಓಪನ್ ಪಂದ್ಯಾವಳಿಯಲ್ಲಿ ಆಡುತ್ತಿರುವುದು ಇದೇ ಮೊದಲು. ಇದರೊಂದಿಗೆ ಪದಾರ್ಪಣ ಟೂರ್ನಿಯಲ್ಲೇ 10ನೇ ಪ್ರಶಸ್ತಿ ಎತ್ತಿದ ಸಾಧನೆ ಸರ್ಬಿಯನ್ ಟೆನಿಸಿಗನ ದ್ದಾಯಿತು. ಯುಎಸ್ ಓಪನ್ ವೇಳೆ ಭುಜದ ನೋವಿನಿಂದ ಹಿಂದೆ ಸರಿದ ಬಳಿಕ ಜೊಕೋವಿಕ್ ಆಡಿದ ಮೊದಲ ಪಂದ್ಯಾವಳಿ ಇದಾಗಿತ್ತು.
16 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳ ಒಡೆಯನಾಗಿ ರುವ ಜೊಕೋವಿಕ್ ವಾರದುದ್ದಕ್ಕೂ ಸ್ಥಿರವಾದ ಪ್ರದರ್ಶನ ಕಾಯ್ದುಕೊಂಡು ಟ್ರೋಫಿಗೆ ಮುತ್ತಿಟ್ಟರು. ಈ ಕೂಟದಲ್ಲಿ ಅವರು ಒಂದೂ ಸೆಟ್ ಕಳೆದುಕೊಳ್ಳದೆ ಅಜೇಯರಾಗಿ ಮುನ್ನುಗ್ಗಿ ದರು. ಸೆಮಿಯಲ್ಲಿ ವಿಶ್ವದ ನಂ.15 ಆಟಗಾರ ಡೇವಿಡ್ ಗೊಫಿನ್ ಅವರಿಂದ ತೀವ್ರ ಪ್ರತಿರೋಧ ಎದುರಾಗಬಹುದೆಂಬ ನಿರೀಕ್ಷೆ ಕೂಡ ಹುಸಿಯಾಯಿತು.
ಫೈನಲ್‌ನಲ್ಲಿ ಜೊಕೋ ಅಮೋಘ ಸರ್ವ್ ಮೂಲಕ ಗಮನ ಸೆಳೆದರು. ಕಾಂಗರೂ ನಾಡಿನ ಟೆನಿಸಿಗನಿಗೆ ಯಾವ ರೀತಿಯಲ್ಲೂ ಪೈಪೋಟಿ ನೀಡಲು ಸಾಧ್ಯವಾಗಲಿಲ್ಲ.