Advertisement
ಮೊಣಕೈಯ ಗಾಯದಿಂದಾಗಿ ಆರು ತಿಂಗಳ ಬಳಿಕ ಟೆನಿಸ್ ಕಣಕ್ಕೆ ಮರಳಿದ 12 ಬಾರಿಯ ಗ್ರ್ಯಾನ್ ಸ್ಲಾಮ್ ವಿಜೇತ ಜೊಕೋವಿಕ್ ಅಮೆರಿಕದ ಡೋನಾಲ್ಡ್ ಯಂಗ್ ಅವರನ್ನು 6-1, 6-2, 6-4 ನೇರ ಸೆಟ್‌ಗಳಿಂದ ಕೆಡಹಿದರು. ಬಲ ಕೈಗೆ ಗಾಯವಾಗದಂತೆ ರಕ್ಷಾಕವಚ ಧರಿಸಿದ್ದ ಅವರು ಪಂದ್ಯ ಗೆದ್ದ ಬಳಿಕ ಪ್ರೇಕ್ಷಕರ ಕರತಾಡನಕ್ಕೆ ಅಭಿನಂದನೆ ಸಲ್ಲಿಸಿದರು.
ಕಳೆದ ವರ್ಷ ಇಲ್ಲಿ ತನ್ನ 18ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಜಯಿಸಿದ್ದ ಹಾಲಿ ಚಾಂಪಿಯನ್ ಫೆಡರರ್ ಇದೀಗ 20ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆಲ್ಲುವ ಗುರಿಯೊಂದಿಗೆ ಕಣಕ್ಕೆ ಇಳಿದಿದ್ದಾರೆ. 36ರ ಹರೆಯದ ಅವರು 41 ಗೆಲುವಿನ ಹೊಡೆತ ನೀಡಿ ಸ್ಲೋವಾನಿಯಾದ ಅಲ್ಜಾಝ್ ಬೆದೆನೆ ಅವರನ್ನು 6-3, 6-4, 6-3 ಸೆಟ್‌ಗಳಿಂದ ಸೋಲಿಸಿದರು. ಮುಂದಿನ ಸುತ್ತಿನಲ್ಲಿ ಅವರು ಜರ್ಮನಿಯ ಜಾನ್ ಲೆನಾರ್ಡ್ ಸ್ಟ್ರಫ್ ಅವರನ್ನು ಎದುರಿಸಲಿದ್ದಾರೆ. ಕಳೆದ ವರ್ಷದ ವಿಂಬಲ್ಡನ್ ಗೆಲ್ಲುವ ಮೂಲಕ ಅವರು 19ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಒಲಿಸಿಕೊಂಡಿದ್ದರು. ಶಸ್ತ್ರಚಿಕಿತ್ಸೆ ಬಳಿಕ ಮೊದಲ ಜಯ
ಕಳೆದ ಜುಲೈಯಲ್ಲಿ ಮಂಡಿ ಗಾಯಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಮಾಜಿ ಚಾಂಪಿಯನ್ ಸ್ಟಾನ್ ವಾವ್ರಿಂಕ ಇಲ್ಲಿ ತನ್ನ ಮೊದಲ ಗೆಲುವು ಕಂಡರು. ಆದರೆ ಅದಕ್ಕಾಗಿ ನಾಲ್ಕು ಸೆಟ್ ತೆಗೆದುಕೊಂಡಿದ್ದರು. ಮೂರು ಬಾರಿಯ ಗ್ರ್ಯಾನ್ ಸ್ಲಾಮ್ ವಿಜೇತ ವಾವ್ರಿಂಕ ಅವರು ರಿಕಾರ್ಡಸ್ ಬೆರಂಕಿಸ್ ಅವರನ್ನು 6-3, 6-4, 2-6, 7-6 (7-2) ಸೆಟ್‌ಗಳಿಂದ ಪರಾಭವಗೊಳಿಸಿ ಮುನ್ನಡೆದರು.
Related Articles
Advertisement