Advertisement
ರವಿವಾರದ ಫೈನಲ್‌ನಲ್ಲಿ ಅವರು ಆಸ್ಟ್ರೇಲಿಯದ ನಿಕ್ ಕಿರ್ಗಿಯೋಸ್ ವಿರುದ್ಧ ಮೊದಲ ಸೆಟ್ ಕಳೆದುಕೊಂಡು, 4ನೇ ಸೆಟ್ ಅನ್ನು ಟೈ ಬ್ರೇಕರ್‌ನಲ್ಲಿ ಗೆದ್ದು ಪರಾಕ್ರಮ ಮೆರೆದರು. ಅಂತರ 4-6, 6-3, 6-4, 7-6 (7-3). ಇದು ಜೊಕೋ ಗೆದ್ದ 21ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ.
ಇದು 8ನೇ ವಿಂಬಲ್ಡನ್ ಫೈನಲ್‌ನಲ್ಲಿ ಜೊಕೋವಿಕ್ ಜಯಿಸಿದ 7ನೇ ಪ್ರಶಸ್ತಿ. ಅವರು ಸೋತದ್ದು ಒಂದು ಫೈನಲ್‌ನಲ್ಲಿ ಮಾತ್ರ. ಅದು 2013ರಷ್ಟು ಹಿಂದೆ. ಅಂದು ಜೊಕೋಗೆ ಆಘಾತವಿಕ್ಕಿದವರು ಬ್ರಿಟನ್‌ನವರೇ ಆದ ಆ್ಯಂಡಿ ಮರ್ರೆ.
Related Articles
Advertisement
ರವಿವಾರದ ಪರಾಕ್ರಮದೊಂದಿಗೆ 7 ಸಲ ವಿಂಬಲ್ಡನ್ ಟ್ರೋಫಿಯನ್ನೆತ್ತಿ ಪೀಟ್ ಸಾಂಪ್ರಸ್ ಅವರೊಂದಿಗೆ ಜೊಕೋ ಜಂಟಿ 2ನೇ ಸ್ಥಾನ ಅಲಂಕರಿಸಿದರು. ರೋಜರ್ ಫೆಡರರ್ 8 ಸಲ ಚಾಂಪಿಯನ್ ಆದದ್ದು ವಿಂಬಲ್ಡನ್ ದಾಖಲೆ.ಇದು ಜೊಕೋವಿಕ್ ಆಡಿದ 32ನೇ ಗ್ರ್ಯಾನ್‌ಸ್ಲಾಮ್ ಫೈನಲ್. ಇದೊಂದು ದಾಖಲೆ. 31 ಫೈನಲ್‌ಗಳಲ್ಲಿ ಆಡಿದ ರೋಜರ್ ಫೆಡರರ್ ದಾಖಲೆ ಪತನಗೊಂಡಿತು.