Advertisement
ಅತ್ಯಾಧುನಿಕ ಕ್ಯಾಮೆರಾಗಳು, ಹೊಸ ತಂತ್ರಜ್ಞಾನ ಹೊತ್ತು ತಂದ ಪ್ರಿಂಟರ್‌ಗಳು, ಹಲವು ದಿನಗಳ ಕೆಲಸವನ್ನು ಕೆಲವೇ ಗಂಟೆಗಳಲ್ಲಿ ಮಾಡಿಕೊಡುವಸಾಫ್ಟ್‌ವೇರ್‌ಗಳಿಗೆ ವಾಸವಿ ಮಹಲ್ ವೇದಿಕೆಯಾಗಿದೆ. ಪೋಟೊ-ವಿಡಿಯೋಗ್ರಫಿ ವೃತ್ತಿಯಲ್ಲಿರುವವರು, ಛಾಯಾಚಿತ್ರ ಹವ್ಯಾಸವಿರುವವರು ಹತ್ತು ಹಲವು ಆಯ್ಕೆಯವಸ್ತು-ಉತ್ಪನ್ನಗಳನ್ನು ಕಣ್ತುಂಬಿಕೊಳ್ಳಲು,ಮಾಹಿತಿ ಪಡೆಯಲು ಮುಗಿಬೀಳುತ್ತಿದ್ದಾರೆ. ದೇಶ-ವಿದೇಶಗಳ ಖ್ಯಾತ ಕಂಪೆನಿಗಳು ತಮ್ಮ ಉತ್ಪನ್ನಗಳೊಂದಿಗೆ ಬಂದಿವೆ. ಕ್ಯಾಮೆರಾಗಳು, ಪ್ರಿಂಟರ್, ಥರ್ಮಲ್‌ಪ್ರಿಂಟರ್, ಕ್ಯಾಮೆರಾ ಸುರಕ್ಷೆಗೆ ಬ್ಯಾಗ್ ಗಳು ಸೇರಿದಂತೆ ವಿವಿಧ ಉತ್ಪನ್ನಗಳ ಪ್ರದರ್ಶನ-ಮಾರಾಟಕ್ಕೆ ಜೋರಾದ ಸ್ಪಂದನೆಯೂ ದೊರೆಯುತ್ತಿದೆ.
Related Articles
Advertisement
10 ಸೆಕೆಂಡ್‌ನಲಿ ಫ್ರಿಂಟ್ :
ಇಂಕ್ವೆಟ್ ಹಾಗೂ ಥರ್ಮಲ್ ಪ್ರಿಂಟರ್ ನೋಡುಗರ ಗಮನ ಸೆಳೆಯುತ್ತಿವೆ. ಈ ಪ್ರಿಂಟರ್ ಗಳಲ್ಲಿ ಒಂದು ಛಾಯಾಚಿತ್ರ ಸೆರೆ ಹಿಡಿದ ಕೇವಲ 10ರಿಂದ 12 ಸೆಕೆಂಡ್‌ಗಳಲ್ಲಿ ಪ್ರಿಂಟ್
ತೆಗೆದು ಗ್ರಾಹಕರಿಗೆ ನೀಡಬಹುದಾಗಿದೆ. ಇದರಿಂದ ಸಮಯದ ಉಳಿತಾಯ ಹಾಗೂಗ್ರಾಹಕನಿಗೆ ಬೇಗ ನೀಡಿದ ಸಂತಸ ಎರಡು ಆಗಲಿದೆ. ಫಿಜಿಫಿಲ್ಮಂ ಹಾಗೂ ಡಿಎನ್‌ಪಿ ಕಂಪೆನಿಗಳ ಯಂತ್ರಗಳು ಪ್ರದರ್ಶನದಲ್ಲಿವೆ.
ಪೋಟೋ-ವಿಡಿಯೋಗ್ರಾಫಿಗೆ ಅವಶ್ಯವಾಗಿ ಬೇಕಾಗುವ ಸಣ್ಣ ಸಣ್ಣ ವಸ್ತುಗಳು ಪ್ರದರ್ಶನದಲ್ಲಿ ಇಲ್ಲದಿರುವುದು ನಿರಾಶೆಮೂಡಿಸಿವೆ. ಕ್ಯಾಮರಾ ಸ್ಟ್ಯಾಂಡ್‌ಗಳಿಲ್ಲ, ಸ್ಥಳೀಯ ಕಂಪನಿಗಳ ಸ್ಟಾಲ್‌ಗಳು ಹೆಚ್ಚಾಗಿದ್ದು, ಹೊರಗಿನವರು ಬಂದಿಲ್ಲ. ಇದರಿಂದ ಈ ವರ್ಷದ ಪ್ರದರ್ಶನ ಬೇಸರ ಮೂಡಿಸಿದೆ. –ಮೈಲಾರ ಪಂಚಣ್ಣವರ, ಮುಗದ, ಪೋಟೋಗ್ರಾಫರ್
ಬೆಂಗಳೂರಿಗಿಂತ ಇಲ್ಲಿ ದುಬಾರಿಯಾಗಿದ್ದು, ಅಗತ್ಯ ಪರಿಕರಗಳು ಇಲ್ಲವಾಗಿವೆ. ಬೇಕಾದ ವಸ್ತುಗಳ ಸ್ಟಾಲ್‌ಗಳೇ ಇಲ್ಲಿ ಇಲ್ಲವಾಗಿವೆ. –ವೀರೇಶ ರೇವಣಕಿ, ಗಜೇಂದ್ರಗಡ, ಪೋಟೋಗ್ರಾಫರ್
ಥರ್ಮಲ್ ಪ್ರಿಂಟರ್‌ನಲ್ಲಿ ಕೇವಲ 10 ಸೆಕೆಂಡ್‌ಗಳಲ್ಲಿ ಪೋಟೋ ಪ್ರಿಂಟ್ ತೆಗೆಯಬಹುದು. ಇದರಿಂದ ಕಡಿಮೆ ಸಮಯ, ಕಡಿಮೆ ವೆಚ್ಚವಾಗಲಿದ್ದು, ಗ್ರಾಹಕರಿಗೆ ಹಾಗೂ ಪೋಟೋಗ್ರಾಫರ್‌ಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ನವೀನ ಶೆಟ್ಟಿ, ಕರ್ನಾಟಕ-ಗೋವಾ ಸೇಲ್ಸ್‌ಮನ್, ಡಿಎನ್‌ಪಿ ಕಂಪನಿ
ಬದಲಾಗುತ್ತಿರುವ ತಂತ್ರಜ್ಞಾನದಿಂದ ಜನರು ಹೊಸದನ್ನು ಕಾಣಲು ಬಯಸುತ್ತಿದ್ದಾರೆ. ಇದೀಗ ಎಲ್‌ಇಡಿ ಪೋಟೋಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿದ್ದು, ಪ್ರದರ್ಶನದಲ್ಲಿ ಇಡಲಾಗಿದೆ. ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದ್ದು, ನಾಳೆಯವರೆಗೆ ಪ್ರದರ್ಶನ ನಡೆಯಲಿದೆ. ಆನಂದ ಇರಕಲ್ಲ, ಸ್ಟುಡಿಯೋ-29
-ಬಸವರಾಜ ಹೂಗಾರ