Advertisement

ತಡರಾತ್ರಿ ಡಿಜೆ ಡ್ಯಾನ್ಸ್‌-ಮದುವೆ ಪಾರ್ಟಿ

04:24 PM May 09, 2021 | Team Udayavani |

ದಾಂಡೇಲಿ: ಸಮೀಪದ ಬಡಕಾನಶಿರಡಾ ಗ್ರಾಮದಲ್ಲಿ ನಡೆಯಲಿದ್ದ ಮದುವೆ ಹಿನ್ನೆಲೆಯಲ್ಲಿ ಶುಕ್ರವಾರ ತಡರಾತ್ರಿವರೆಗೆ ಪಾರ್ಟಿ ಮತ್ತು ಡಿಜೆ ಡ್ಯಾನ್ಸ್‌ ನಡೆಸಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತ್ತು.

Advertisement

ಸ್ಥಳೀಯರು ಈ ಬಗ್ಗೆ ಬುದ್ಧಿ ಮಾತು ಹೇಳಿದರೂ ಕೇಳದೆ ಡಿಜೆ ಡ್ಯಾನ್ಸ್‌ ಮತ್ತು ಪಾರ್ಟಿ ನಡೆಸಿದ್ದರು. ಸ್ಥಳೀಯ ಯುವಕರ ದಂಡು ಮೋಜು ಮಸ್ತಿಯಲ್ಲಿ ಮತ್ತು ಡಿಜೆ ಡ್ಯಾನ್ಸಿನಲ್ಲಿ ಭಾಗವಹಿಸಿರುವುದು ತಡರಾತ್ರಿಯೇ ಬಯಲಾಗಿತ್ತು.

ಬೆವರಿಳಿಸಿದ ಪೊಲೀಸರು-ಕೋವಿಡ್‌ ನಿಯಮದಂತೆ ಸರಳ ಮದುವೆ:

ಈ ಬಗ್ಗೆ ಎಚ್ಚೆತ್ತ ದಾಂಡೇಲಿ ಗ್ರಾಮೀಣ ಪೊಲೀಸರು ಬೆಳ್ಳಂ ಬೆಳಗ್ಗೆ ಬಡಕಾನಶಿರಡಾದಲ್ಲಿ ನಡೆಯುತ್ತಿರುವ ಮದುವೆ ಮನೆಗೆ ಭೇಟಿ ನೀಡಿ ತರಾಟೆಗೆ ತೆಗೆದುಕೊಂಡು, ಕೋವಿಡ್‌ ನಿಯಮದಂತೆ ಮದುವೆ ಮಾಡಬೇಕೆಂದು ಸೂಚನೆ ನೀಡಿ, ಮದುವೆ ಆಗುವವರೆಗೆ ಸ್ಥಳದಲ್ಲೆ ಇದ್ದು, ಕೋವಿಡ್‌ ನಿಯಾಮಗಳ ಉಲ್ಲಂಘನೆಯಾಗದಂತೆ ಅಗತ್ಯ ಕ್ರಮ ಕೈಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next