Advertisement
ಬೆಂಗಳೂರು ಸಹಿತ ದ.ಕ. ಜಿಲ್ಲೆಯಿಂದ ಹೊರ ಭಾಗದಲ್ಲಿದ್ದುಕೊಂಡು ಉದ್ಯೋಗ ನಿರ್ವಹಿಸುವ, ಊರಿನಿಂದ ಹೊರಗೆ ವಾಸವಾಗಿರುವ ಜನರು ವರ್ಷಕ್ಕೊಮ್ಮೆ ಹಬ್ಬಕ್ಕಾಗಿ ಊರಿಗೆ ಮರಳುವುದು ವಾಡಿಕೆ. ಆದರೆ ಹಬ್ಬದ ಖುಷಿಯಲ್ಲಿ ಊರಿಗೆ ಮರಳುತ್ತಿರುವ ಜನರಿಗೆ ದರ ಏರಿಕೆ ಮೂಲಕ ವಿಮಾನಯಾನ ಸಂಸ್ಥೆಗಳು ಮತ್ತು ಖಾಸಗಿ ಬಸ್ ಸಂಸ್ಥೆಗಳು ಶಾಕ್ ನೀಡಿವೆ. ಶನಿವಾರ ನಾಲ್ಕನೇ ಶನಿವಾರ ವಾದ್ದರಿಂದ ಬಹುತೇಕ ಕಂಪೆನಿಗಳಿಗೆ ರಜಾ ದಿನ ವಾಗಿರುತ್ತದೆ. ರವಿವಾರ, ಸೋಮವಾರ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ರಜೆ ಇರುತ್ತದೆ. ಹಾಗಾಗಿ ಬಹುತೇಕ ಪರವೂರಿ ನಲ್ಲಿರು ವವರು ಶನಿವಾರವೇ ತಂತಮ್ಮ ಊರುಗಳಿಗೆ ಹೊರಡುತ್ತಾರೆ. ಮಂಗಳವಾರ ಮತ್ತೆ ಎಂದಿನ ಕೆಲಸ ಕಾರ್ಯಗಳು ಆರಂಭವಾಗುವುದರಿಂದ ಸೋಮವಾರ ಜನರು ತಾವು ಉಳಿದುಕೊಂಡಿರುವ ಊರುಗಳತ್ತ ಪ್ರಯಾಣಿಸುತ್ತಾರೆ. ಈ ಸಮಯವನ್ನು ನೋಡಿಕೊಂಡು ಖಾಸಗಿ ವಿಮಾನಯಾನ ಸಂಸ್ಥೆಗಳು ಮತ್ತು ಬಸ್ ಸಂಸ್ಥೆಗಳು ಪ್ರಯಾಣದರವನ್ನು ಹೆಚ್ಚಳ ಮಾಡಿ ಪ್ರಯಾಣಿಕರ ಹಬ್ಬದ ಖುಷಿಗೆ ಟಿಕೆಟ್ ದರ ಏರಿಕೆಯ ಬಿಸಿ ನೀಡಿದ್ದಾರೆ.
ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿರುವುದರಿಂದ ದೀಪಾವಳಿ ಸಮಯದಲ್ಲಿ ಕೆಎಸ್ಸಾರ್ಟಿಸಿ ವತಿಯಿಂದ ಹೆಚ್ಚುವರಿ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
Related Articles
ಮಂಗಳೂರಿನಿಂದ ಬೆಂಗಳೂರಿಗೆ 45 ಹೆಚ್ಚುವರಿ ಬಸ್ ವ್ಯವಸ್ಥೆಯನ್ನು ದೀಪಾವಳಿ ಹಿನ್ನೆಲೆಯಲ್ಲಿ ಕಲ್ಪಿಸಲಾಗುವುದು. ಪ್ರಯಾಣಿಕರ ಬೇಡಿಕೆ ನೋಡಿಕೊಂಡು ಮೈಸೂರಿಗೂ ಹೆಚ್ಚುವರಿ ಬಸ್ ಒದಗಿಸಲಾಗುವುದು. ಬೆಂಗಳೂರಿನಿಂದ ಮಂಗಳೂರಿಗೆ ಹೆಚ್ಚುವರಿ ಬಸ್ ಓಡಾಟ ಈಗಾಗಲೇ ಪ್ರಾರಂಭವಾಗಿದೆ. ಶೇ. 10-20ರಷ್ಟು ಟಿಕೆಟ್ ದರ ಏರಿಕೆ ಮಾಡಲಾಗಿದೆ.
- ಜಯಶಾಂತ್, ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ
Advertisement
ಕೆಎಸ್ಸಾರ್ಟಿಸಿ: ಶೇ. 20 ದರ ಹೆಚ್ಚಳಖಾಸಗಿ ಬಸ್‌ಗಳಲ್ಲಿ ದುಪ್ಪಟ್ಟು ದರ ಏರಿಕೆ ಯಾಗಿದ್ದರೆ, ಇತ್ತ ಕೆಎಸ್ಸಾರ್ಟಿಸಿಯಲ್ಲಿಯೂ ಸ್ವಲ್ಪ ದರ ಏರಿಕೆ ಬಿಸಿ ಗ್ರಾಹಕರಿಗೆ ತಟ್ಟಿದೆ. ವೋಲ್ವೋ ಬಸ್‌ಗಳಲ್ಲಿ ಶೇ. 20 ಮತ್ತು ಇತರ ಬಸ್‌ಗಳಲ್ಲಿ ಶೇ. 10ರಷ್ಟು ದರ ಏರಿಕೆ ಮಾಡಲಾಗಿದೆ. ಇದರಿಂದ ಸಾಮಾನ್ಯ ದಿನಗಳಲ್ಲಿ 600 ರೂ.ಗಳಿದ್ದರೆ, ದೀಪಾವಳಿಗೆ ಊರಿಗೆ ಬರಬೇಕಾದರೆ 720 ರೂ.ಗಳನ್ನು ಪಾವತಿಸುವ ಅನಿವಾರ್ಯ ಗ್ರಾಹಕರಿಗಿದೆ. – ಧನ್ಯಾ ಬಾಳೆಕಜೆ