Advertisement

ಪರಿಸರ ಮಾಲಿನ್ಯ ರಹಿತ ಪಂಚಗವ್ಯ ಗೋದೀಪ

06:59 PM Nov 02, 2021 | Team Udayavani |

ಕೋಟೇಶ್ವರ: ದೀಪಾವಳಿಯ ಮಹತ್ವ ಹೆಚ್ಚಿಸುವ ನಿಟ್ಟಿನಲ್ಲಿ ಬೀಜಾಡಿಯ ಕಪಿಲೆ ಗೋ ಸಮೃದ್ಧಿ ಟ್ರಸ್ಟ್‌ ವತಿಯಿಂದ ಪಂಚಗವ್ಯ ಗೋದೀಪ ತಯಾರಿಸಿ ಗ್ರಾಹಕರಿಗೆ ಒದಗಿಸುವ ಮೂಲಕ ಸ್ವದೇಶಿ ಪರಿಸರ ಸ್ನೇಹಿ ಹಣತೆಯ ಸದ್ಭಳಕೆ, ಆತ್ಮನಿರ್ಭರ ಭಾರತ ಪರಿಕಲ್ಪನೆಗೊಂದು ಹೊಸ ಆಯಾಮ ಸೃಷ್ಟಿಸಿ ಅದಕ್ಕೊಂದು ಹೊಸ ಸ್ವರೂಪ ನೀಡಲು ಮುಂದಾಗಿದೆ.

Advertisement

ಕಳೆದ ಕೆಲವು ವರ್ಷಗಳಿಂದ ಬೀಜಾಡಿಯಲ್ಲಿ ಗೋಶಾಲೆ ಆರಂಭಿಸಿ, ಆ ಮೂಲಕ ಗೋವಿನ ಮಹತ್ವ ಎತ್ತಿಹಿಡಿದಿರುವ ತಯಾರಕರು ಗೋಮಯ, ತುಪ್ಪ, ಹಾಲು, ಮೊಸರು, ಅರಶಿನದೊಡನೆ ಜೇಡಿಮಣ್ಣು ಸೇರಿಸಿ ದೀಪಾವಳಿಗೆ ವಿಶೇಷ ದೀಪ ತಯಾರು ಮಾಡಿದ್ದಾರೆ. ದೀಪದ ಬಳಕೆಯ ಅನಂತರ ಬೂದಿಯನ್ನು ಗೊಬ್ಬರವಾಗಿ ಕೂಡ ಉಪಯೋಗಿಸಬಹುದಾಗಿದೆ. ಪಂಚಗವ್ಯ ಗೋಮಯ ದೀಪಗಳು ದೇಸಿ ತುಪ್ಪ ಬಳಕೆಯಿಂದ ತಯಾರಿಸಲಾದ ಹಣತೆಗಳು ಪರಿಸರ ಮಾಲಿನ್ಯವಾಗದಂತೆ ನೋಡಿಕೊಳ್ಳುತ್ತದೆ.

ಇದನ್ನೂ ಓದಿ:ಕೊಹ್ಲಿ ಮಗು ಮೇಲೆ ಅತ್ಯಾಚಾರ ಬೆದರಿಕೆ; ದೆಹಲಿ ಪೊಲೀಸರಿಗೆ ಡಿಸಿಡಬ್ಲ್ಯೂ

ಪ್ಯಾಕೆಟ್‌ನಲ್ಲಿ 12
ಪಂಚಗವ್ಯ ಗೋದೀಪ ವ್ಯಾವಹಾರಿಕ ದೃಷ್ಟಿಯಿಂದ ಮಾಡಲಾಗಿಲ್ಲ. ಬದಲಾಗಿ ಗೋಮಾತೆ, ಗೋಶಾಲೆಯ ಪ್ರಾಮುಖ್ಯತೆ ತಿಳಿಹೇಳಲು, ಸ್ವದೇಶಿ ಕಲ್ಪನೆಯ ಅಂಗವಾಗಿ ತಯಾರು ಮಾಡಲಾಗುತ್ತಿದೆ. ಒಂದು ಪ್ಯಾಕೇಟ್‌ನಲ್ಲಿ 12 ಹಣತೆಗಳನ್ನು ಜೋಡಿಸಲಾಗಿದೆ.
-ಕುಮಾರ್‌ ಕಾಂಚನ್‌ಸಂಚಾಲಕರು, ಕಪಿಲೆ ಗೋಸಮೃದ್ಧಿ ಟ್ರಸ್ಟ್‌ ಬೀಜಾಡಿ

Advertisement

Udayavani is now on Telegram. Click here to join our channel and stay updated with the latest news.

Next