Advertisement
ಅಲಂಕೃತಗೊಂಡ ಶ್ರೀ ಕ್ಷೇತ್ರ: ದೀಪಾವಳಿ ಜಾತ್ರಾ ಮಹೋತ್ಸವ ಹಿನ್ನೆಲೆ ಶ್ರೀ ಕ್ಷೇತ್ರ ಮತ್ತು ದೇವಾಲಯವನ್ನು ವಿವಿಧ ವರ್ಣಗಳ ಪುಷ್ಪಾಲಂಕಾರ ಮತ್ತು ವಿದ್ಯುದ್ದೀಪಾಲಂಕಾರದಿಂದ ಕಂಗಳಿಸುವಂತೆ ಮಾಡಲಾಗಿದೆ. ಮಲೆ ಮಾದಪ್ಪನ ಸನ್ನಿಧಿಯ ಗರ್ಭಗುಡಿ, ಗರ್ಭಾಗಂಣ, ಪ್ರವೇಶ ದ್ವಾರವನ್ನು ಬಗೆಬಗೆಯ ವಿವಿಧ ವರ್ಣಗಳ ಪುಷ್ಪಗಳಿಂದ ಸಿಂಗರಿಸಲಾಗಿದೆ. ದೇವಾಲಯದ ಗರ್ಭಗುಡಿಯ ಗೋಪುರ, ರಾಜಗೋಪುರ, ದೇವಾಲಯದ ಮುಖ್ಯರಸ್ತೆಯನ್ನು ವಿದ್ಯುತ್ ದೀಪಗಳಿಂದ ಅಲಂಕಾರಗಳಿಸಲಾಗಿದೆ.
Related Articles
Advertisement
ಜಾತ್ರಾ ಮಹೋತ್ಸವಕ್ಕೆ ಭಕ್ತಾದಿಗಳಿಗೆ ನಿಷಿದ್ಧ
ಮಲೆ ಮಹದೇಶ್ವರ ಬೆಟ್ಟದಲ್ಲಿ ಕೋವಿಡ್ ನಿಯಮಾವಳಿ ಹಿನ್ನೆಲೆ ಈ ಬಾರಿ ಎಣ್ಣೆಮಜ್ಜನ ಸೇವೆಗೆ ಸ್ಥಳೀಯ ಭಕ್ತಾದಿಗಳನ್ನು ಹೊರತುಪಡಿಸಿ ಹೊರಗಿನ ಭಕ್ತಾದಿಗಳಿಗೆ ನಿರ್ಬಂಧ ಹೇರಲಾಗಿದೆ. ಜಿಲ್ಲಾಡಳಿತದ ನಿರ್ಬಂಧದ ಹಿನ್ನೆಲೆ ಎಣ್ಣೆಮಜ್ಜನ ಸೇವೆ ಹಾಗೂ ಹಾಲರವೆ ಉತ್ಸವದಲ್ಲಿ ಸ್ಥಳೀಯ ಭಕ್ತಾದಿಗಳ ಮಾತ್ರ ಅವಕಾಶ ನೀಡಿದ್ದು, ಶ್ರೀ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದ ಹೊರ ಊರಿನ ಭಕ್ತಾದಿಗಳನ್ನು ಹನೂರು ಮತ್ತು ತಾಳಬೆಟ್ಟ ಚೆಕ್ ಪೋಸ್ಟ್‌ಗಳ ಬಳಿಯೇ ತಡೆಯಲಾಗುತಿತ್ತು.
ಪ್ರಾಧಿಕಾರದಿಂದ ಸಕಲ ವ್ಯವಸ್ಥೆ
ದೀಪಾವಳಿ ಜಾತ್ರಾ ಮಹೋತ್ಸವದ ಹಿನ್ನೆಲೆ ಕ್ಷೇತ್ರಕ್ಕೆ ಪಾದಯಾತ್ರೆಯಲ್ಲಿ ಆಗಮಿಸುವ ಭಕ್ತಾದಿಗಳಿಗೆ ಕೌದಳ್ಳಿಯಿಂದ ಶ್ರೀಕ್ಷೇತ್ರದವರೆಗೆ 10 ಕಡೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ರಾಜಗೋಪುರದ ಮುಂಭಾಗ ಎಡ ಮತ್ತು ಬಲಭಾಗದ ಮೈದಾನದಲ್ಲಿ ಶಾಮಿಯಾನ ಹಾಕಿ ನೆರಳಿವ ವ್ಯವಸ್ಥೆ ಕಲ್ಪಿಸಲಾಗಿದೆ.
ಅಂತರಗಂಗೆ ಸಮೀಪ ಏಕಕಾಲದಲ್ಲಿ 400 ಭಕ್ತಾದಿಗಳು ಸ್ನಾನ ಮಾಡುವ ರೀತಿಯಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಷವರ್ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ ದ್ವಿಚಕ್ರ ವಾಹನಗಳಿಗೆ, ಕಾರು, ಜೀಪು, ಕರಾರಸಾಸಂ ಮತ್ತು ತಮಿಳುನಾಡು ಸಾರಿಗೆ ಬಸ್ಸುಗಳ ನಿಲುಗಡೆಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.