ಗುರುಗ್ರಾಮ: ಮುಂಬೈನಲ್ಲಿ ನಡೆದ ನಕಲಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ದರೋಡೆಕೋರರ ಹತ್ಯೆಯ ಆರೋಪಿಗಳಲ್ಲಿ ಒಬ್ಬಳಾಗಿದ್ದ ಮಾಜಿ ಮಾಡೆಲ್ ಜಾಮೀನು ಪಡೆದ ತಿಂಗಳ ನಂತರ ಇಲ್ಲಿನ ಹೋಟೆಲ್‌ನಲ್ಲಿ ಗುಂಡಿಕ್ಕಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಐವರು ಮಂಗಳವಾರ ರಾತ್ರಿ ದಿವ್ಯಾ ಪಹುಜಾಳನ್ನು ಹೋಟೆಲ್‌ಗೆ ಕರೆದೊಯ್ದು ಆಕೆಯ ತಲೆಗೆ ಗುಂಡು ಹಾರಿಸಿದ್ದಾರೆ. ಆಕೆಯ ಶವವನ್ನು ಹೋಟೆಲ್‌ನಿಂದ ಕಾರಿನಲ್ಲಿ ಎಸೆಯಲು ತೆಗೆದುಕೊಂಡು ಹೋಗುತ್ತಿದ್ದಾಗ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
2016 ಫೆಬ್ರವರಿ 7 ರಂದು ಮುಂಬೈನ ಹೋಟೆಲ್‌ನಲ್ಲಿ ಗ್ಯಾಂಗ್‌ಸ್ಟರ್ ಸಂದೀಪ್ ಗಡೋಲಿ ಹತ್ಯೆಗೆ ಸಂಬಂಧಿಸಿದಂತೆ ಸುಮಾರು ಏಳು ವರ್ಷಗಳ ನಂತರ ಕಳೆದ ವರ್ಷ ಜೂನ್‌ನಲ್ಲಿ ಬಾಂಬೆ ಹೈಕೋರ್ಟ್ ಪಹುಜಾಗೆ ಜಾಮೀನು ನೀಡಿತ್ತು.
ಮುಂಬೈ ಪೊಲೀಸರು ಪಹುಜಾ, ಆಕೆಯ ತಾಯಿ ಮತ್ತು ದರೋಡೆಕೋರನನ್ನು ಹತ್ಯೆಗೈದಿದ್ದ ಐವರು ಪೊಲೀಸರನ್ನು ಬಂಧಿಸಿದ್ದರು. ಗಡೋಲಿಯನ್ನು ಗೆಳತಿಯಾಗಿದ್ದ ಪಹುಜಾ ಸಹಾಯದಿಂದ ಬಲೆಗೆ ಬೀಳಿಸಿ ನಕಲಿ ಎನ್‌ಕೌಂಟರ್‌ನಲ್ಲಿ ಹತ್ಯೆಗೈಯಲಾಗಿತ್ತು. ಪ್ರತಿಸ್ಪರ್ಧಿ ಗ್ಯಾಂಗ್ ಅನ್ನು ನಡೆಸುತ್ತಿದ್ದ ವೀರೇಂದ್ರ ಕುಮಾರ್ ಅಲಿಯಾಸ್ ಬಿಂದರ್ ಗುಜ್ಜರ್, ಗಡೋಲಿಯನ್ನು ಮುಗಿಸಲು ಹರಿಯಾಣ ಪೊಲೀಸ್ ಅಧಿಕಾರಿಗಳೊಂದಿಗೆ ಸಂಚು ರೂಪಿಸಿದ್ದ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಎನ್‌ಕೌಂಟರ್‌ನ ಸಮಯದಲ್ಲಿ ಗುಜ್ಜರ್ ಜೈಲಿನಲ್ಲಿದ್ದ, ಆದರೆ ಅವನು ತನ್ನ ಸಹೋದರ ಮನೋಜ್‌ನ ಸಹಾಯದಿಂದ ಸಂಚು ರೂಪಿಸಿದ್ದ ಮತ್ತು ಪಹುಜಾವನ್ನು ಹನಿ ಟ್ರ್ಯಾಪ್ ರೂಪದಲ್ಲಿ ಬಲೆ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
” ಪಹುಜಾ ಹತ್ಯೆಯಲ್ಲಿ ಭಾಗಿಯಾಗಿರುವ ಮೂವರು ಆರೋಪಿಗಳನ್ನು ಬಂಧಿಸಿದ್ದೇವೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಭೂಪೇಂದರ್ ಸಿಂಗ್ ಸಾಂಗ್ವಾನ್ ಹೇಳಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ಬಂಧಿತ ಆರೋಪಿಗಳ ವಿಚಾರಣೆ ಮುಂದುವರೆಸಿದ್ದಾರೆ.