Advertisement

ದೈವೀ ಪ್ರೇರಣೆಯೇ  ಸಮ್ಮಾನಕ್ಕೆ ಕಾರಣ: ಕೈವಲ್ಯ ಶ್ರೀ

03:39 PM May 05, 2018 | |

ಮುಂಬಯಿ: ಮುಂಬಯಿಯಂಥ ಅವಿಶ್ರಾಂತ ಶಹರದಲ್ಲಿ ಜನರ ನಿರಂತರ ಪರಿಶ್ರಮ ಜೀವನದ ಮಧ್ಯೆ  ಭಗವಂತನ ನಾಮಸ್ಮರಣೆ ಮಾಡಲು ಅವಕಾಶ ಕಲ್ಪಿಸಿ ಕೊಳ್ಳುವುದರಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ವೃಂದದವರು ನಿಪುಣರು. ಇಂತಹ ಸನ್ನಿವೇಶದ ಹಿನ್ನೆಲೆಯಲ್ಲಿ ಜಿಎಸ್‌ಬಿ ಸಭಾ, ಕೆಸಿಜಿ, ಬಾಲಾಜಿ ಮಂದಿರ ಕುರ್ಲಾ ತಮ್ಮ ಸುವರ್ಣ ಗಣೇಶೋತ್ಸವ ವರ್ಷವನ್ನು ಸಂಭ್ರಮದಿಂದ ಆಚರಿಸುತ್ತಿರುವುದು ಶ್ಲಾಘನೀಯ. ದೈವೀ ಪ್ರೇರಣೆಯೇ ಮನುಷ್ಯನ ಸಮ್ಮಾನಕ್ಕೆ ಕಾರಣ. ದೇವರು ಉತ್ತಮ ಆಚಾರ ವಿಚಾರ ನೀಡಿ ಸಕಲರನ್ನು ಹರಸಲಿ ಎಂದು ಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠಾಧಿಪತಿಗಳು ನೆರೆದ ಸಮಾಜ ಬಾಂಧವರನ್ನುದ್ದೇಶಿಸಿ ಆಶೀರ್ವಚಿಸಿದರು.

Advertisement

ಎ. 29ರಂದು ಸಂಜೆ ಗೋವಾದಿಂದ ಆಗಮಿಸಿದ ಪರಮಪೂಜ್ಯ ಗುರುವರ್ಯರನ್ನು ಕುರ್ಲಾ ಜಿಎಸ್‌ಬಿ ಸಭಾದ ಅಧ್ಯಕ್ಷ ಗಣೇಶ್‌ ಬಿ. ಕಾಮತ್‌, ಸುವರ್ಣ ಗಣೇಶೋತ್ಸವದ ಕಾರ್ಯಾಧ್ಯಕ್ಷ ವಿವೇಕ್‌ ಭಂಡಾರಿ, ಜನಾರ್ದನ್‌ ಭಟ್‌, ಕಾರ್ಯಕರ್ತರು, ಸಮಿತಿ ಸದಸ್ಯರು, ಸ್ವಯಂಸೇವಕರು, ಮಹಿಳಾ ಮಂಡಳಿ ಸದಸ್ಯರು ಪೂರ್ಣ ಕುಂಭ ಸ್ವಾಗತವನ್ನು ನೀಡಿ ಬರಮಾಡಿಕೊಂಡರು. ದೇವರ ದರ್ಶನದ ಬಳಿಕ ಮುಖ್ಯ ಪುರೋಹಿತ ಶ್ರೀ ತ್ರಿವಿಕ್ರಮ ಆಚಾರ್ಯ ಹಾಗೂ ಪ್ರಧಾನ ಅರ್ಚಕ ಗಜಾನನ ಶಾನ್‌ಭಾಗ್‌ ಅವರಿಂದ ವೇದಘೋಷ ಪಠಣ ನಡೆಯಿತು.  

ಅಧ್ಯಕ್ಷರು ಭಕ್ತಿಪೂರ್ವಕವಾಗಿ ಸ್ವಾಮೀಜಿ ಅವರನ್ನು ಸ್ವಾಗತಿಸಿ, ಸ್ವಾಮೀಜಿ ಅವರ 4 ದಿನಗಳ ಕಾರ್ಯಕ್ರಮಗಳ ಕುರಿತು ಮಾಹಿತಿಯನ್ನು ನೀಡಿ ಅನಂತರ ಅವರ ಪಾದಪೂಜೆ ಗೈದರು. ಪರಮಪೂಜ್ಯರ ಆಶೀರ್ವಚನ ಫಲಮಂತ್ರಾಕ್ಷತೆಯ ಬಳಿಕ ದೇವರ ಪೂಜೆ, ಆರತಿ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next