Advertisement
ಬೆಳ್ಳಾರೆ ಸ್ನೇಹಿತರ ಕಲಾ ಸಂಘ, ನೆಲ್ಯಾಡಿಯ ಗೆಳೆಯರ ಬಳಗ, ಬೆಳ್ತಂಗಡಿ ತಾಲೂಕಿನ ಕಾನರ್ಪ ಚಿರಂಜೀವಿ ಯುವಕ ಮಂಡಲ, ಬಂಟ್ವಾಳ ತಾಲೂಕಿನ ಕುಲಾಳು ಶ್ರೀ ವಾರಾಹಿ ಯುವಕ ಮಂಡಲ, ಮಂಗಳೂರು ತಾಲೂಕಿನ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ನ್ಪೋರ್ಟ್ಸ್ ಕ್ಲಬ್ ತಂಡಗಳಿಗೆ ಪುತ್ತೂರು ಎಪಿಎಂಸಿ ಅಧ್ಯಕ್ಷ ರಾಧಾಕೃಷ್ಣ ರೈ ಬೂಡಿಯಾರ್ ಪ್ರಶಸ್ತಿ ನೀಡಿ ಅಭಿನಂದಿಸಿದರು.
ಸಮಾಜದ ಮುಖ್ಯವಾಹಿನಿಯಲ್ಲಿ ಸ್ವಾರ್ಥರಹಿತ, ಸಮರ್ಪಣಭಾವದೊಂದಿಗೆ ತೊಡಗಿಸಿಕೊಂಡು, ಸಮಾಜದ
ಅಭಿವೃದ್ಧಿಗಾಗಿ ಶ್ರಮಿಸಬೇಕು. ಸ್ವಾಮಿ ವಿವೇಕಾನಂದರ ಆದರ್ಶವನ್ನು ಮೈಗೂಡಿಸಿಕೊಂಡು ಯುವಜನಾಂಗ ಮುಂದುವರಿಯಬೇಕೆಂದರು. ತಾ.ಪಂ. ಸದಸ್ಯೆ ಉಷಾ ಅಂಚನ್ ಮಾತನಾಡಿ, ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿ ಮುಳ್ಳು ಅವರ ನೇತೃತ್ವದಲ್ಲಿ ಒಕ್ಕೂಟದ ವತಿಯಿಂದ ಉತ್ತಮ ಕಾರ್ಯಗಳಾಗುತ್ತಿವೆ. ಮುಂದಿನ ದಿನಗಳಲ್ಲಿ ನಿಷ್ಕ್ರಿಯಗೊಂಡ ಯುವಕ-ಯುವತಿ ಮಂಡಲಗಳನ್ನು ಮತ್ತೆ ಸಕ್ರಿಯಗೊಳಿಸುವ ನಿಟ್ಟಿನಲ್ಲಿ ಒಕ್ಕೂಟ ಕಾರ್ಯೋನ್ಮುಖವಾಗಬೇಕೆಂದು ಅಭಿಪ್ರಾಯಪಟ್ಟರು.
Related Articles
Advertisement
ಪುತ್ತೂರು ಎಪಿಎಂಸಿ ಅಧ್ಯಕ್ಷ ರಾಧಾಕೃಷ್ಣ ರೈ ಬೂಡಿಯಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್ ಡಿ’ಸೋಜಾ, ಪುತ್ತೂರು ತಾಲೂಕು ಪಂಚಾಯತ್ ಉಪಾಧ್ಯಕ್ಷೆ ರಾಜೇಶ್ವರಿ ಕೆ., ಸದಸ್ಯೆ ಲಲಿತಾ ಈಶ್ವರ, ಉದ್ಯಮಿ ಮಾಧವ ಗೌಡ ಕಾಮಧೇನು, ಸುಳ್ಯ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಚಂದ್ರಶೇಖರ್ ಪನ್ನೆ, ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ, ತಾಲೂಕು ಯುವಸಬಲೀಕರಣ ಮತ್ತು ಕ್ರೀಡಾಧಿಕಾರಿಗಳಾದ ಮಾಮಚ್ಚನ್ ಎಂ.ಪುತ್ತೂರು,ದೇವರಾಜ್ ಮುತ್ಲಾಜೆ ಸುಳ್ಯ, ನವೀನ್ ಬಂಟ್ವಾಳ, ಲಿಲ್ಲಿ ಪಾಯಸ್ ಮಂಗಳೂರು, ಪ್ರಭಾಕರ ನಾರಾವಿ ಬೆಳ್ತಂಗಡಿ,
ಉಪಸ್ಥಿತರಿದ್ದರು. ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಸ್ವಾಗತಿಸಿದರು. ನರೇಶ್ ಸಸಿಹಿತ್ಲು ನಿರೂ ಪಿಸಿ, ಸವಣೂರು ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ ವಂದಿಸಿದರು. ಜಿಲ್ಲಾ ಯುವ ಪ್ರಶಸ್ತಿ
ಅಳಿಕೆ ನವಚೇತನ ಯುವತಿ ಮಂಡಲದ ಅಧ್ಯಕ್ಷೆ ಅಮಿತಾ ಸಂಜೀವ ಮಿತ್ತಳಿಕೆ, ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ನ್ಪೋರ್ಟ್ಸ್ ಕ್ಲಬ್‌ನ ಜತೆ ಕಾರ್ಯದರ್ಶಿ ಸಂಪತ್ ಕುಮಾರ್, ಸವಣೂರು ಯುವಕ ಮಂಡಲದ ಮಾಜಿ ಅಧ್ಯಕ್ಷ ದಿನೇಶ್ ಮೆದು, ಬೆಳ್ತಂಗಡಿ ಗುರುಮಿತ್ರ ಸಮೂಹ ಮಂಡಳಿಯ ಅಧ್ಯಕ್ಷ ಸ್ಮಿತೇಶ್ ಎಸ್. ಬಾರ್ಯ, ಗುತ್ತಿಗಾರು ಶಂಖಪಾಲ ಕ್ರೀಡಾ ಕ್ಲಬ್‌ನ ಸ್ಥಾಪಕಾಧ್ಯಕ್ಷ ಶಿವಪ್ರಕಾಶ್ ಕಡಪ್ಪಳ ಅಡ್ಡನಪಾರೆ ಅವರನ್ನು ಜಿಲ್ಲಾ ಯುವ ಪ್ರಶಸ್ತಿ ನೀಡಿ
ಗೌರವಿಸಲಾಯಿತು.