Advertisement
ಜಿಲ್ಲೆಯಲ್ಲಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಂ. 4 ಹಾದು ಹೋಗಿದ್ದು, ಶಿಗ್ಗಾವಿ ತಾಲೂಕು ಬಂಕಾಪುರ ಹಾಗೂ ರಾಣಿಬೆನ್ನೂರು ತಾಲೂಕು ಚಳಗೇರಿಗಳಲ್ಲಿ ಟೋಲ್ ಕೇಂದ್ರಗಳನ್ನು ಹೊಂದಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮೂರು ವರ್ಷಗಳ ಹಿಂದೆಯೇ ಮೊದಲ ಹಂತವಾಗಿ
Related Articles
Advertisement
ಹೊಸ ವ್ಯವಸ್ಥೆಗೆ ಸಿದ್ಧ : ಬಂಕಾಪುರ ಹಾಗೂ ಚಳಗೇರಿ ಟೋಲ್ ಕೇಂದ್ರದಲ್ಲಿ “ಫಾಸ್ಟಾಗ್’ ಇ-ಟೋಲ್‌ಗಾಗಿ ಮೂರು ವರ್ಷಗಳ ಹಿಂದೆಯೇ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಕ್ಯಾಮೆರಾ, ಸೆನ್ಸಾರ್‌ಗಳೆಲ್ಲ ಇದೆ. ಕೆಲವೇ ಕೆಲವು ವಾಹನ ಮಾಲೀಕರು ಈ ವ್ಯವಸ್ಥೆ ಅಳವಡಿಸಿಕೊಂಡಿದ್ದರು. ಈಗ ಕಡ್ಡಾಯ ಹಾಗೂ ರಿಯಾಯಿತಿ ಎರಡೂ ಇರುವುದರಿಂದ ಈ ಎಲ್ಲರೂ ಈ ವ್ಯವಸ್ಥೆ ಅಳವಡಿಸಿಕೊಳ್ಳುವ ನಿರೀಕ್ಷೆ ಇದೆ. –ಅನಿಲ ಜೆ., ಟೋಲ್ ಕೇಂದ್ರ ನಿರ್ವಹಣೆ ಅಧಿಕಾರಿ.
ಏನಿದು ಫಾಸ್ಟಾಗ್?: “ಫಾಸ್ಟಾಗ್’ ಎಂದರೆ ಇದು ಇ- ಟೋಲ್ ವ್ಯವಸ್ಥೆಗೆ ಇಟ್ಟ ಹೆಸರು. ರೇಡಿಯೋ ತರಂಗಾಂತರಗಳನ್ನು ಗುರುತಿಸಬಲ್ಲ ಪಟ್ಟಿಯೊಂದು ವಾಹನಗಳಿಗೆ ಅಳವಡಿಸಲಾಗುತ್ತದೆ. ಈ ಪಟ್ಟಿಯನ್ನೇ “ಫಾಸ್ಟಾಗ್’ ಕಾರ್ಡ್ ಎನ್ನಲಾಗುತ್ತದೆ. ನಾಲ್ಕು ಚಕ್ರ ಅಥವಾ ಅದಕ್ಕೂ ಮೀರಿದ ವಾಹನಗಳ ಮುಂಭಾಗದ ಗಾಜಿಗೆ ಅಂಟಿಸಲಾಗುತ್ತದೆ. ಮೊಬೈಲ್‌ನ ಪ್ರಿಪೇಯ್ಡ ಸಿಮ್‌ನಂತೆ ಇದೊಂದು ಪೂರ್ವ ಹಣ ಪಾವತಿಯ ವ್ಯವಸ್ಥೆಯಾಗಿದೆ. ವಾಹನ ಟೋಲ್ ಕೇಂದ್ರದಲ್ಲಿರುವ “ಫಾಸ್ಟಾಗ್’ ಮಾರ್ಗದಲ್ಲಿ ಸಂಚರಿಸಿದಾಗ ಅಲ್ಲಿ ಅಳವಡಿಸಿರುವ ಯಂತ್ರ “ಫಾಸ್ಟಾಗ್’ ಕಾರ್ಡ್‌ನಲ್ಲಿರುವ ಮಾಹಿತಿ ಗ್ರಹಿಸಿ, “ಫಾಸ್ಟಾಗ್’ಗೆ ಸಂಯೋಜಿತ ಖಾತೆಯಿಂದ ಶುಲ್ಕದ ಹಣ ಕಡಿತಗೊಂಡು ಮೊಬೈಲ್‌ಗೆ ಸಂದೇಶ ಬರುತ್ತದೆ. “ಫಾಸ್ಟಾಗ್’ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವುದರಿಂದ ಖಾತೆಯಿಂದಲೇ ಹಣ ಸಂದಾಯವಾಗುತ್ತದೆ. ಇಲ್ಲವೇ ಇತರ ಪೇಮೆಂಟ್ ವ್ಯವಸ್ಥೆ ಮೂಲಕ ರಿಚಾರ್ಜ್ ಮಾಡಬಹುದಾಗಿದೆ. ವಾಹನಗಳ ಸಂಖ್ಯೆಯ ಆಧಾರದಲ್ಲಿ ಹಣ ರಿಚಾರ್ಜ್ ಮಾಡಬಹುದಾಗಿದೆ. ಇ-ಟೋಲ್‌ಗೆ ಹಣ ಸಂದಾಯ ಮಾಡಲು ಖಾತೆಯಲ್ಲಿ ಹಣ ಕಡಿಮೆಯಾದರೆ ಬಳಕೆದಾರರಿಗೆ ಎಸ್‌ಎಂಎಸ್ ಸಂದೇಶ ಬರುತ್ತದೆ. ಈ ವ್ಯವಸ್ಥೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ರಿಯಾಯಿತಿಯನ್ನೂ ಕಲ್ಪಿಸಲಾಗಿದೆ. “ಫಾಸ್ಟ್‌ಟ್ಯಾಗ್’ ಮಾರ್ಗದಲ್ಲಿ ಈ ಫಾಸ್ಟ್‌ಟ್ಯಾಗ್ ಕಾರ್ಡ್ ಇಲ್ಲದ ಮಾರ್ಗ ಬಂದರೆ ಸ್ವಲ್ಪ ದೂರ ಬಂದ ತಕ್ಷಣ ಸೈರನ್, ರೆಡ್ ಸಿಗ್ನಲ್ ಬರುತ್ತದೆ. ಜತೆಗೆ ಅಲ್ಲಿರುವ ಒಬ್ಬ ನಿರ್ವಾಹಕ ಸಹ ಆಗ ಆ ವಾಹನ ಪಕ್ಕದ ಶುಲ್ಕ ಪಾವತಿ ಮಾರ್ಗಕ್ಕೆ ತಿರುಗಿಸಿಕೊಳ್ಳುವಂತೆ ಸೂಚನೆ ನೀಡುತ್ತಾನೆ.
-ಎಚ್.ಕೆ. ನಟರಾಜ