ಮೈಸೂರು: ವೃದ್ಧೆಯೊಬ್ಬರ ಹೆಬ್ಬೆಟ್ಟಿನ ಗುರುತುಪಡೆದು, ಅವರ ಬ್ಯಾಂಕ್ ಖಾತೆಯಿಂದ ಹಣಎಗರಿಸಿದ್ದ ಆರೋಪಿಯನ್ನು ಮೈಸೂರು ಜಿಲ್ಲಾಸಿಇಎನ್ ಕ್ರೈಂ ಠಾಣೆಯ ಪೊಲೀಸರು ಬಂಧಿಸಿದ್ದಾರೆಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್ ತಿಳಿಸಿದರು.
ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆರೋಪಿಯಿಂದ 1 ಸ್ಮಾರ್ಟ್ ಫೋನ್,1 ಕೀ ಪ್ಯಾಡ್ ಮೊಬೈಲ್, 1 ಮಿನಿ ಎಟಿಎಂ ಯಂತ್ರ, 1ಬೆರಳಚ್ಚು ಯಂತ್ರ, 1 ದ್ವಿಚಕ್ರವಾಹನವನ್ನು ವಶಪಡಿಸಿಕೊಳ್ಳ ಲಾಗಿದೆ ಎಂದರು.
ಬಂಧಿತ ಆರೋಪಿ ಫೆ.1ರಂದು ಮೈಸೂರು ತಾಲೂಕು ಕಡಕೊಳದ ಪುಟ್ಟನಂಜಮ್ಮಎಂಬುವರ ತೋಟದ ಮನೆಗೆ ಹೋಗಿದ್ದು, “ತಾನು ಬ್ಯಾಂಕಿನಿಂದ ಬಂದಿದ್ದು, ಕಾರ್ಡ್ ಮಾಡಿಕೊಡುತ್ತೇನೆ. ತಿಂಗಳಿಗೆ 3 ಸಾವಿರ ರೂ. ಮೋದಿ ದುಡ್ಡು ಬರುತ್ತೆ’ ಎಂದು ಹೇಳಿ ಆಧಾರ್ ಕಾರ್ಡ್ ಪಡೆದು 1 ಯಂತ್ರದಮೇಲೆ ಎಡಗೈ ಹೆಬ್ಬರಳನ್ನು ಸ್ಕ್ಯಾನ್ ಮಾಡಿಕೊಂಡಿದ್ದಾನೆ. ಫೆ.2 ರಂದು ಪುಟ್ಟ ನಂಜಮ್ಮ ಬ್ಯಾಂಕಿಗೆ ಹೋದಾಗ,4100 ರೂ.ಡ್ರಾ ಆಗಿತ್ತು.ಈ ಸಂಬಂಧ ಕ್ರಮ ವಹಿಸುವಂತೆ ಜಿಲ್ಲಾ ಸಿಇಎನ್ ಕ್ರೈಂ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ಆರೋಪಿ ಉಪಯೋಗಿಸಿದ್ದ ಎಇಪಿಎಸ್ (ಆಧಾರ್‌ಎನೆಬಲ್ ಪೇಮೆಂಟ್ ಸಿಸ್ಟಂ) ಯಂತ್ರ ಹಾಗೂಮೊಬೈಲ್ ನಂಬರ್‌ಗಳ ಆಧಾರದ ಮೇಲೆ ಆರೋಪಿ ಯನ್ನು ಗುರುವಾರ ಬಂಧಿಸಲಾಗಿದೆ ಎಂದರು.
ಆರೋಪಿಯು ಈ ಹಿಂದೆ ಬ್ಯಾಂಕ್‌ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಮಿನಿ ಎಟಿಎಂ ಯಂತ್ರ, ಬೆರಳಚ್ಚುಯಂತ್ರ ಬಳಸಿಕೊಂಡು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿಸಾಕಷ್ಟು ಜನಕ್ಕೆ ಮೋಸ ಮಾಡಿರುವುದು ತನಿಖೆಯಿಂದಕಂಡು ಬಂದಿದೆ. ಅಲ್ಲದೆ, ಕಳೆದ ವರ್ಷ ಬೆಟ್ಟದಪುರ ಠಾಣೆಯಲ್ಲಿ ದಾಖಲಾಗಿದ್ದ ಹರದೂರು ಗ್ರಾಮದಲ್ಲಿ ಮೋಸ ಮಾಡಿರುವ ಪ್ರಕರಣ ಸಹ ಪತ್ತೆಯಾಗಿದೆ ಎಂದರು.
ಜಿಲ್ಲಾ ಸಿಇಎನ್ ಕ್ರೈಂ ಠಾಣೆಯ ಇನ್ಸ್‌ಪೆಕ್ಟರ್‌ಶಬ್ಬೀರ್ ಹುಸೇನ್, ಎಸ್‌ಐಗಳಾದ ಯಶ್ವಂತ್‌ಕುಮಾರ್,ಕೃಷ್ಣಕಾಂತ್ ಕೋಳಿ, ಸಿಬ್ಬಂದಿ ಎಂ.ಎಸ್. ಮಂಜುನಾಥ,ಎಚ್.ವಿ.ರಂಗಸ್ವಾಮಿ, ಅಭಿ ಷೇಕ್, ಮಹದೇವಸ್ವಾಮಿ,ಬಿ.ವಿ. ಮಂಜುನಾಥ, ವೆಂಕ ಟೇಶ್, ನಾಗರಾಜ್‌ಕಾರ್ಯಾಚರಣೆ ನಡೆಸಿದ್ದಾರೆ. ಸುದ್ದಿ ಗೋಷ್ಠಿಯಲ್ಲಿ ಹೆಚ್ಚುವರಿ ಎಸ್ಪಿ ಆರ್.ಶಿವಕುಮಾರ್ ದಂಡಿನ ಇದ್ದರು.