Advertisement
ಪಂದ್ಯಾಟವನ್ನು ದ.ಕ. ಜಿಲ್ಲಾ ಪದವಿಪೂರ್ವ ಕಾಲೇಜುಗಳ ಉಪನಿರ್ದೇಶಕ ನಾಗರಾಜಪ್ಪ ಎಂ. ಅವರು ಉದ್ಘಾಟಿಸಲಿದ್ದಾರೆ. ಎಸ್‌ಎಸ್ ಪಿಯು ಕಾಲೇಜಿನ ಸಂಚಾಲಕ ಮತ್ತು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ದ.ಕ. ಜಿಲ್ಲಾ ಕ್ರೀಡಾ ಸಂಯೋಜಕ ಪ್ರೇಮನಾಥ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದಾರೆ ಎಂದು ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ರಾಧಾಕೃಷ್ಣ ಚಿದ್ಗಲ್ ತಿಳಿಸಿದ್ದಾರೆ.
ಸಂಜೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಕೆ. ಸಾವಿತ್ರಿ ವಹಿಸಲಿದ್ದಾರೆ. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಎನ್.ಎಸ್., ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಲೋಕೇಶ್ವರ ಡಿ.ಆರ್. ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ. ಎರಡು ವಿಭಾಗದಲ್ಲಿ ಜಿಲ್ಲೆಯಿಂದ ಒಟ್ಟು 16 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿದೆ. ಸಿದ್ಧತೆಯಲ್ಲಿ ಎನ್ನೆಸೆಸ್ ಸೇವೆ
ವಿದ್ಯಾಲಯದಲ್ಲಿ ನಡೆಯುವ ಖೊಖೋ ಪಂದ್ಯಾಟಕ್ಕೆ ಸಿದ್ಧತೆಗಳು ಪೂರ್ಣಗೊಂಡಿದೆ. ಎರಡು ದಿನಗಳಿಂದ ಅವಳಿ ಅಂಕಣಗಳನ್ನು ಸಿದ್ಧಪಡಿಸುವ ಕಾರ್ಯದಲ್ಲಿ ಕಾಲೇಜಿನ ಎನ್ನೆಸೆಸ್ ವಿದ್ಯಾರ್ಥಿಗಳು ಶ್ರಮ ನಿರತರಾಗಿದ್ದರು. ಕ್ರೀಡಾಂಗಣದ ಸುತ್ತ ಸ್ವಚ್ಛತೆ, ಅಂಕಣ ಸಿದ್ಧಪಡಿಸುವುದು ಮೊದಲಾದ ಸುಸಜ್ಜಿತ ವ್ಯವಸ್ಥೆ ಸಿದ್ಧಗೊಂಡಿದೆ. ಯೋಜನಾಧಿಕಾರಿ ಸೋಮಶೇಖರ ನಾಯಕ್ ಮಾರ್ಗದರ್ಶನದಲ್ಲಿ ಎನ್ನೆಸೆಸ್ ವಿದ್ಯಾರ್ಥಿಗಳು ಶ್ರಮದಾನ ನೆರವೇರಿಸಿದ್ದರು.