Advertisement
ಕ್ರೀಡಾಕೂಟಕ್ಕೆ ಬೆಳಗ್ಗೆ ಚೆನ್ನಾವರ ಉಳ್ಳಾಕುಕುಲು ಸೇವಾ ಸಮಿತಿಯ ಅಧ್ಯಕ್ಷ ಪದ್ಮನಾಭ ಶೆಟ್ಟಿ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ ನಡೆಯುವ ಸಭಾ ಕಾರ್ಯಕ್ರಮವನ್ನು ಬೊಳ್ಳಿಬೊಲ್ಪು ತುಳುಕೂಟದ ಅಧ್ಯಕ್ಷ ಕುಂಜಾಡಿ ಪ್ರಕಾಶ್ಚಂದ್ರ ರೈ ಮುಗೇರು ಗುತ್ತು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ದ.ಕ. ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ವಹಿಸುವರು. ತುಳು ಸಾಹಿತಿ, ಬಾಳಿಲ ಪಿಡಿಒ ಚಂದ್ರಾವತಿ ರೈ ಪಾಲ್ತಾಡಿ ಆಟಿ ತಿಂಗಳ ವಿಶೇಷತೆ ಕುರಿತು ಉಪನ್ಯಾಸ ನೀಡುವರು.
ಸ್ಥಳೀಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ಕೆಸರುಗದ್ದೆ ಜನಪದ ಕ್ರೀಡಾಕೂಟದಲ್ಲಿ ಪುರುಷರಿಗೆ ಹಗ್ಗಜಗ್ಗಾಟ, ಮಹಿಳೆಯರಿಗೆ ತ್ರೋಬಾಲ್, ಕೆಸರುಗದ್ದೆ ಓಟ, ತುಳು ಜಾನಪದ ಸ್ಪರ್ದೆ, ತುಳು ಪಾಡ್ದನ ಸ್ಪರ್ಧೆ ಮತ್ತು ಶಾಲಾ ಮಕ್ಕಳಿಗೆ ಎರಡು ವಿಭಾಗಗಳಲ್ಲಿ ತುಳು ರಸಪ್ರಶ್ನೆ, ತುಳು ಭಾಷಣ, ಜಾನಪದ ಸ್ಪರ್ಧೆ, ನಿಧಿಶೋಧ ಸ್ಪರ್ಧೆಗಳು ನಡೆಯಲಿದೆ.
Related Articles
ಆಟಿತಿಂಗಳ ವಿಶೇಷ ಖಾದ್ಯಗಳನ್ನೊಳಗೊಂಡು ಮಧ್ಯಾಹ್ನ ‘ಆಟಿದ ತೆನಸ್, ವನಸ್’ ಸಹಭೋಜನ ನಡೆಯಲಿದೆ.
Advertisement
ಸಮಾರೋಪಸಂಜೆ ನಡೆಯುವ ಸಮಾರೋಪದ ಅಧ್ಯಕ್ಷತೆಯನ್ನು ಪಾಲ್ತಾಡಿ ಚೈತನ್ಯ ರೈತಶಕ್ತಿ ಗುಂಪಿನ ಅಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ ವಹಿಸಲಿದ್ದು, ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಇದರ ಸ್ಥಾಪಕಾಧ್ಯಕ್ಷ ಶ್ಯಾಮಸುಂದರ ರೈ ಕೆರೆಮೂಲೆ ಬಹುಮಾನ ವಿತರಿಸಲಿದ್ದಾರೆ. ಅತಿಥಿಗಳಾಗಿ ಸವಣೂರು ಗ್ರಾ.ಪಂ.ಸದಸ್ಯ ಸತೀಶ್ ಅಂಗಡಿಮೂಲೆ, ಪ್ರಗತಿಪರ ಕೃಷಿಕ ಕೃಷ್ಣಪ್ಪ ಪೂಜಾರಿ ಚೆನ್ನಾವರ, ಸವಣೂರು ಪ.ಪೂ. ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ದಯಾನಂದ ಮಾಲೆತ್ತಾರು ಮೊದಲಾದವರು ಉಪಸ್ಥಿತರಿರರಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.