Advertisement
ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭದಲ್ಲಿ “ಉದಯವಾಣಿ’ಗೆ ಸಂದರ್ಶನ ನೀಡಿದ ಅವರು, ಐಟಿಬಿಟಿ, ಪದವಿ ಕಾಲೇಜು ಮತ್ತು ಗಾರ್ಮೆಂಟ್ಸ್‌ಗಳಿಗೆ ತೆರಳಿ ಕನ್ನಡ ಭಾಷೆ ಬಗ್ಗೆ ಆಸಕ್ತಿ ಹೊಂದಿರುವವರನ್ನು ಪರಿಷತ್ತಿನ ಸದಸ್ಯರನ್ನಾಗಿ ಮಾಡಿಕೊಳ್ಳುವ ಯೋಜನೆ ರೂಪಿಸಿವುದಾಗಿಯೂ ಹೇಳಿದರು.
Related Articles
Advertisement
ಇನ್ನೊಂದು ತಿಂಗಳಲ್ಲಿ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳಲ್ಲಿ ಪರಿಷತ್ತಿನ ಘಟಕ ಸ್ಥಾಪನೆ ಮಾಡುತ್ತೇನೆ.ಆ ಘಟಕಗಳಲ್ಲಿ ಅಧ್ಯಕ್ಷರನ್ನು ನೇಮಕ ಮಾಡುವ ಸಂದರ್ಭದಲ್ಲಿ ಅಪ್ಪಟ ಕನ್ನಡಪರ ಚಿಂತನೆ ಇರುವವರಿಗೆ ಮಣೆಹಾಕುತ್ತೇನೆ.
ಸಂಪನ್ಮೂಲ ಕ್ರೋಢೀಕರಣದ ಬಗ್ಗೆ ಹೇಳುವುದಾದರೆ?
“ಕನ್ನಡ ಸಂವರ್ಧನ ನಿಧಿ’ ಮೂಲಕ ಕನ್ನಡ ಕಾಯಕಕ್ಕಾಗಿ ದೇಣಿಗೆ ಸಂಗ್ರಹ ಮಾಡುತ್ತೇನೆ. ಕಾರ್ಪೋರೇಟ್ ವಲಯದವರ ಮನವೊಲಿಸಿ ಸಾಮಾಜಿಕ ಹೊಣೆಗಾರಿಕೆ ನಿಧಿ ಪಡೆದು ಆ ಮೂಲಕ ಕನ್ನಡ ಪುಸ್ತಕಗಳನ್ನು ಪ್ರಕಟ ಮಾಡುತ್ತೇನೆ. ನಾನು ತಂಡವನ್ನು ಕಟ್ಟಿಕೊಂಡು ಪ್ರತಿ ವಿಧಾನ ಸಭಾ ಕ್ಷೇತ್ರಗಳಲ್ಲಿ ತಿಂಗಳಿಗೊಮ್ಮೆ ಮನೆಬಾಗಿಲಿಗೆ ಹೋಗಿ ಪುಸ್ತಕಗಳನ್ನು ರಿಯಾಯ್ತಿ ದರದಲ್ಲಿ ಮಾರಾಟ ಮಾಡುವ ಉದ್ದೇಶ ಹೊಂದಿದ್ದೇನೆ.
ಬೆಂಗಳೂರಿನಲ್ಲಿ ಕನ್ನಡ ಭಾಷೆ ಮಾಯವಾಗುತ್ತಿದೆ ಎಂಬ ಮಾತಿದೆ.ಬೆಂ.ನಗರ.ಜಿಲ್ಲಾ ಕಸಾಪ ಅಧ್ಯಕ್ಷರಾಗಿ ನಿಮ್ಮ ಕನ್ನಡ ಕಟ್ಟುವಿಕೆ ಕೆಲಸ ಹೇಗಿರಲಿದೆ?
ಕನ್ನಡ ಭಾಷೆ “ಸೂರ್ಯ-ಚಂದ್ರ’ ಇವರುವ ವರೆಗೂ ಮಾಯವಾಗುವುದಿಲ್ಲ.ನಾವು ನಿರಾಭಿಮಾನಿಗಳಾಗಿದ್ದೇನೆ, ನಾವು ಎಚ್ಚೆತ್ತುಕೊಳ್ಳಬೇಕಾಗಿದೆ. ಆದಗ್ಯೂ, ಐಟಿಬಿಟಿ, ಪದವಿ ಕಾಲೇಜು ಮತ್ತು ಗಾರ್ಮೆಂಟ್ಸ್‌ಗಳಿಗೆ ಹೋಗಿ ಕನ್ನಡದ ಬಗ್ಗೆ ಆಸಕ್ತಿ ಹೊಂದಿರುವವರನ್ನು ಪರಿಷತ್ತಿನ ಸದಸ್ಯರನ್ನಾಗಿ ಮಾಡಿಕೊಳ್ಳುವ ಯೋಜನೆ ರೂಪಿಸುತ್ತೇನೆ. ಜತೆಗೆ ಅಲ್ಲೇ ಒಂದು ಪರಿಷತ್ತಿನ ಕನ್ನಡ ವಿಭಾಗ ತೆರೆಯುತ್ತೇನೆ.
ಹೊಸ ಸವಾಲುಗಳೊಂದಿಗೆ ಕನ್ನಡ ಕಟ್ಟುವಿಕೆ ಕಾರ್ಯ ಹೇಗಿರಲಿದೆ?
ಯುವ ಸಮೂಹದ ಜತೆಗೆ ವಿದ್ಯುನ್ಮಾನ ಬಳಕೆ ಮಾಡಿಕೊಂಡು ಕನ್ನಡವನ್ನು ಬೆಳಗಿಸಬೇಕಿದೆ ಆ ನಿಟ್ಟಿನಲ್ಲಿ ಕೆಲಸ ನಡೆಯಲಿದೆ. ಹೊಸ ತಲೆಮಾರಿನ ವರನ್ನು ಹೆಚ್ಚು ಹೆಚ್ಚು ಸದಸ್ಯರನ್ನಾಗಿ ಮಾಡಿ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳನ್ನು ತಲುಪಿಸು ತ್ತೇನೆ.”ನಮ್ಮ ನಡೆ ಕಾಲೇಜು ಕಡೆ’ ಕಾರ್ಯಕ್ರಮ ರೂಪಿಸಿ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಪರಿಷತ್ತಿನ ಅಜೀವ ಸದಸ್ಯತ್ವ ನೀಡುವ ಉದ್ದೇಶವಿದೆ.
- ದೇವೇಶ ಸೂರಗುಪ್ಪ