Advertisement

ರಾಜ್ಯದ ಅತ್ಯುತ್ತಮ ಆಸ್ಪತ್ರೆಗಳಲ್ಲಿ ಒಂದು​​​​​​​

12:30 AM Feb 02, 2019 | |

ಕಾಸರಗೋಡು: ಸರಕಾರಿ ಆಸ್ಪತ್ರೆ ಇಂದು ರಾಜ್ಯ ಮಟ್ಟದ ಅತ್ಯುತ್ತಮ ಆರೋಗ್ಯ ಸಂಸ್ಥೆಗಳಲ್ಲಿ ಒಂದು ಎನಿಸಿದೆ.ಅತ್ಯಂತ ಸುಧಾರಿತ ವ್ಯವಸ್ಥೆ, ರೋಗಿ ಸೌಹಾರ್ದ ವಾತಾವರಣ, ಇತರ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳ ದಾಖಲಾತಿ ಸಹಿತ ಸೌಲಭ್ಯಗಳು ಇತ್ಯಾದಿಗಳಿಂದ ಯಾವ ಖಾಸಗಿ ಆಸ್ಪತ್ರೆಗೂ ಸ್ಪರ್ಧೆ ನೀಡುವಷ್ಟು ಬಲಿಷ್ಟವಾಗಿದೆ.

Advertisement

ಹುಡುಕಿ ಬಂದ ಪುರಸ್ಕಾರಗಳು : ಗ್ರಾಮೀಣ ಆರೋಗ್ಯ ಮಿಷನ್‌ ರಾಜ್ಯದ ಅತ್ಯುತ್ತಮ ಆಸ್ಪತ್ರೆಗಳಿಗೆ ನೀಡುವ ಕಾಯಕಲ್ಪ ಪ್ರಶಸ್ತಿ, ಆರೋಗ್ಯ ಕೇರಳ ಪ್ರಶಸ್ತಿ ಸಹಿತ ಕಳೆದ 7 ವರ್ಷಗಳಿಂದ ಜಿಲ್ಲಾ ಆಸ್ಪತ್ರತೆಗೆ ಅನೇಕ ಪುರಸ್ಕಾರಗಳು ಸಂದಿವೆ. ರಾಜ್ಯದ 50 ಜಿಲ್ಲಾ ಜನರಲ್‌ ಆಸ್ಪತ್ರೆಗಳೊಂದಿಗೆ ಸ್ಪರ್ಧೆ ನಡೆಸಿ ಕಾಯಕಲ್ಪ ಪ್ರಶಸ್ತಿಯನ್ನು ಈ ಸಂಸ್ಥೆ ಬಗಲಿಗೆಹಾಕಿಕೊಂಡಿದೆ. 

ಜತೆಗೆ ಮಲಬಾರ್‌ ವಲಯದಲ್ಲಿ (ಕೇರಳದ ಉತ್ತರ ಭಾಗದ ಜಿಲ್ಲೆಗಳು) ಪ್ರಥಮ ಬಾರಿಗೆ ಈ ಪ್ರಶಸ್ತಿ ದೊರೆತಿದೆ. ಈ ಪ್ರಶಸ್ತಿ 50 ಲಕ್ಷ ರೂ. ನಗದು ಬಹುಮಾನವನ್ನೂ ಹೊಂದಿದೆ. ಡೆಂಗೆ ಜ್ವರ ನಿಯಂತ್ರಣದಲ್ಲಿ ರಾಜ್ಯದಲ್ಲಿ ಅತ್ಯುತ್ತಮ ನಿರ್ವಹಣೆಗಾಗಿ ವಿಶೇಷ ಅಭಿನಂದನೆಗೆ ಈ ಆಸ್ಪತ್ರೆ ಪಾತ್ರವಾಗಿದೆ.

ವಿಶ್ವಾಸಾರ್ಹ ಸಂಸ್ಥೆ : 2005ರಲ್ಲಿ ಹೆಂಚಿನ ಮಾಡು ಹೊಂದಿದ ಪುದಿಯಕೋಟೆಯ ಹಳೆಯ ಕಟ್ಟಡದಿಂದ ನೂತನ ಕಟ್ಟಡಕ್ಕೆ ಈ ಸಂಸ್ಥೆ ಸ್ಥಳಾಂತರಗೊಂಡಿತ್ತು. ಆರಂಭದ ಹಂತದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗಿ ಬಂದಿತ್ತು. ಇಂದು ಬಡಜನತೆಯ ವಿಶ್ವಾಸಾರ್ಹ ಆಸರೆ ತಾಣವಾಗಿರುವ ಆಸ್ಪತ್ರೆಗೆ ಕಳೆದ ವರ್ಷ ಚಿಕಿತ್ಸೆ ಬಯಸಿ ಬಂದವರ ಸಂಖ್ಯೆ ಮೂರೂವರೆ ಲಕ್ಷಮಂದಿ. 16 ಸಾವಿರಕ್ಕೂ ಅಧಿಕಮಂದಿ ಈ ಅವಧಿಯಲ್ಲಿ ದಾಖಲಾತಿ ಚಿಕಿತ್ಸೆ ಪಡೆದಿದ್ದಾರೆ. 

2500 ಮಂದಿ ಇಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಇ.ಎನ್‌.ಟಿ., ಎಲುಬು ರೋಗ, ನೇತ್ರ ಸಂಬಂಧಿ ಶಸ್ತ್ರ ಚಿಕಿತ್ಸೆಗಳು ಇಲ್ಲಿ ಅತ್ಯಧಿಕ ಪ್ರಮಾಣದಲ್ಲಿ ನಡೆಯುತ್ತಿದೆ. ಜೊತೆಗೆ ಹೆರಿಗೆ ವಿಭಾಗದಲ್ಲಿ ಅತಿ ಕಡಿಮೆ ಸಿಸೇರಿಯನ್‌ ಶಸ್ತ್ರ ಚಿಕಿತ್ಸೆ ನಡೆಸಿದ ಆಸ್ಪತ್ರೆ ಎಂಬ ಹೆಗ್ಗಳಿಕೆಯೂ ಇದೆ.

Advertisement

ವಿಶಾಲ ಕ್ಯಾಸ್ವಲ್ಟಿ ಕಂ ಟ್ರೊಮೋಕೇರ್‌ : 24 ತಾಸು ಚಟುವಟಿಕೆ ನಡೆಸುವ ರಕ್ತ ವರ್ಗೀಕರಣ ಘಟಕ ಸಹಿತ ರಕ್ತ ಬ್ಯಾಂಕ್‌, ಡಯಾಲಿಸಿಸ್‌ ಯೂನಿಟ್‌, ನ್ಯಾಷನಲ್‌ ಟಕ್ರಿಡಿಟೇಷನ್‌ಗಿರುವ 24 ತಾಸು ಚಟುವಟಿಕೆ ನಡೆಸುವ ಲ್ಯಾಬ್‌, ಕಿಮೋ ಥೆರಪಿ ಕ್ಯಾನ್ಸರ್‌ ವಾರ್ಡ್‌, ಸಿ.ಇಟ.ಸ್ಕಾನ್‌, ಮಾಮೋಗ್ರಾಂ, ಕಡಿಮೆ ವೆಚ್ಚದಲ್ಲಿ ತಪಾಸಣೆ ನಡೆಸುವ ಎ.ಸಿ.ಆರ್‌.ಲ್ಯಾಬ್‌ ಗಳು ಇತ್ಯಾದಿ ಇಲ್ಲಿನ ಆಕರ್ಷಣೆಗಳಾಗಿವೆ.

ಆದ್ರಂì ಬ್ಲಾಕ್‌ನ ಕಾಮಗಾರಿ ಪೂರ್ತೀಕರಣಗೊಳ್ಳುವುದರೊಂದಿಗೆ ಸೂಪರ್‌ ಸ್ಪೆಷಾಲಿಟಿ ವಿಭಾಗದ ಒ.ಪಿ.ಆರಂಭಿಸುವ ಯೋಜನೆಯಿದೆ. ಜೊತೆಗೆ ಹೃದ್ರೋಗಿಗಳಿಗಿರುವ ಕಾತ್‌ಲ್ಯಾಬ್‌, ಡಿ ಅಡಿಕ್ಷನ್‌ ಲ್ಯಾಬ್‌, ಅಲ್ಟಾÅ ಸೌಂಡ್‌ ಸ್ಕಾÂನಿಂಗ್‌ ಇತ್ಯಾದಿ ಶೀಘ್ರದಲ್ಲೇ ಆರಂಭಗೊಳ್ಳಲಿವೆ. ಮಲಿನಜಲ ಶುದ್ಧಿಕರಣ ಘಟಕವೂ ಶೀಘ್ರದಲ್ಲೇ ಆರಂಭಿಸುವ ಯೋಜನೆಗಳಿವೆ. ಸೌರಶಕ್ತಿ ಯೋಜನೆ ಈಗಾಗಲೇ ಆರಂಭಗೊಂಡಿದೆ.

ಜಿಲ್ಲಾ ಸರಕಾರಿ ಆಸ್ಪತ್ರೆಯ ಮಕ್ಕಳ ವಾರ್ಡ್‌ ಅನೇಕ ವಿಶೇಷತೆಗಳಿಂದ ಕೂಡಿದೆ. ಬಣ್ಣದ ಚಿತ್ರಗಳೊಂದಿಗೆ, ಆಟದ ಸಾಮಾಗ್ರಿಗಳನ್ನು ಹೊಂದಿರುವ, ವಿಲಕಚೇತನ ಮಕ್ಕಳ ಸಹಿತ ಮನೋಲ್ಲಾಸ ಉಂಟುಮಾಡುವ ರೀತಿಯ ವ್ಯವಸ್ಥೆಗಳುಇಲ್ಲಿವೆ.

ಅತ್ಯುತ್ತಮ ದಂತ ಚಿಕಿತ್ಸಾಲಯ
ವಾರಕ್ಕೆ 4 ದಿನ ಚಟುವಟಿಕೆ ನಡೆಸುವ ಸಂಚಾರಿ ನೇತ್ರ ಚಿಕಿತ್ಸಾ ವಿಭಾಗ, ಅತ್ಯುತ್ತಮ ದಂತ ಚಿಕಿತ್ಸಾಲಯ ಇಲ್ಲಿವೆ. ಸಂಸದ ಪಿ.ಕರುಣಾಕರನ್‌ ಮತ್ತು ಸ್ಥಳೀಯ ಶಾಸಕ ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್‌ ಅವರ ಅಭಿವೃದ್ಧಿ ನಿಧಿಯಿಂದ ಅನೇಕ ಯೋಜನೆಗಳು ಅಭಿವೃದ್ಧಿಗೆ  ಪೂರಕವಾಗಿವೆ. ಜಿಲ್ಲಾ ಪಂಚಾಯತ್‌ನ ಬೆಂಬಲ, ಆಸ್ಪತ್ರೆ ವರಿಷ್ಠಾಧಿಕಾರಿ ಡಾ.ಸ್ಟಾನ್ಲಿ, ಆರ್‌.ಎಂ.ಒ.ಡಾ.ರಜಿತ್‌ ಕೃಷ್ಣನ್‌ ಅವರ ಚಟುವಟಿಕೆಗಳು ಪ್ರಧಾನಪಾತ್ರ ವಹಿಸುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next