Advertisement

ಬಿಜೆಪಿ ಜನಪರ ಕೆಲಸಕ್ಕೆ ಕಾಂಗ್ರೆಸ್‌ನಲ್ಲಿ ನಡುಕ

07:52 PM Mar 19, 2021 | Team Udayavani |

ಹೂವಿನಹಡಗಲಿ : ಕೇಂದ್ರ ಸರ್ಕಾರದ ಜನಪರ ಕೆಲಸಕ್ಕೆ ಕಾಂಗ್ರೆಸ್‌ ಪಕ್ಷದಲ್ಲಿ ನಡುಕ ಶುರುವಾಗಿದೆ. ಪ್ರಸ್ತುತ ರಾಜ್ಯದಲ್ಲಿ ಜಾರಿ ಮಾಡುತ್ತಿರುವ ನೂತನ ಎಪಿಎಂಸಿ ಕಾಯ್ದೆಯ ವಿರುದ್ಧ ಕಾಂಗ್ರೆಸ್‌ ಪಕ್ಷ ವ್ಯವಸ್ಥಿತವಾದ ಅಪಪ್ರಚಾರ ಮಾಡುತ್ತಿದೆ. ರೈತರು ಮತ್ತು ಸಾರ್ವಜನಿಕರು ಇದಕ್ಕೆ ಕಿವಿಗೊಡಬೇಡಿ ಎಂದು ಬಳ್ಳಾರಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಐನಾತ್‌ ರೆಡ್ಡಿ ಹೇಳಿದರು.

Advertisement

ತಾಲೂಕಿನ ಸೋವೇನಹಳ್ಳಿ ಗ್ರಾಮದ ಹೊರವಲಯ ಶಿವನಕಟ್ಟೇಶ್ವರ ದೇವಸ್ಥಾನದ ಬಳಿ ರೈತ ಮೋರ್ಚಾ ತಾಲೂಕು ಘಟಕ ಆಯೋಜಿಸದ್ದ ಕಿಸಾನ್‌ ಸಮ್ಮಾನ್‌ ಫಲಾನುಭವಿಗಳ ಸಭೆಯ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನಪರ ಆಡಳಿತಕ್ಕೆ ಭಯಗೊಂಡಿರುವ ಕಾಂಗ್ರೆಸ್‌ ಮತ್ತು ಎಡಪಕ್ಷಗಳು ತಮ್ಮ ಅಸ್ತಿತ್ವಕ್ಕಾಗಿ ಬಿಜೆಪಿ ವಿರುದ್ಧ ಅಪಪ್ರಚಾರದಲ್ಲಿ ತೊಡಗಿವೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಮಾತನಾಡಿ, ರೈತ ಪರವಾಗಿ ಜಾರಿಗೊಂಡಿರುವ ಎಪಿಎಂಸಿ ನೂತನ ಕಾಯ್ದೆಯ ಹಾಗೂ ಅನುಕೂಲತೆಯ ಬಗ್ಗೆ ಬಿಜೆಪಿ ಕಾರ್ಯಕರ್ತರು ರಾಜ್ಯದ ಜನತೆಯಲ್ಲಿ ಜಾಗೃತಿ ಮೂಡಿಸಬೇಕಾಗಿದೆ.

ಕಾಂಗ್ರೆಸ್‌ ಮುಕ್ತ ಭಾರತಕ್ಕೆ ಪಣತೊಟ್ಟ ಪ್ರಧಾನಿ ನರೇಂದ್ರ ಮೋದಿ ಅವರು, ಆ ನಿಟ್ಟಿನಲ್ಲಿ ಯಶಸ್ವಿ ಹೆಜ್ಜೆ ಇಟ್ಟಿರುವುದರಿಂದ ಕಾಂಗ್ರೆಸ್‌ಗೆ ನಡುಕ ಶುರುವಾಗಿದೆ ಎಂದರು. ಈಗಾಗಲೇ ಪ್ರಧಾನಮಂತ್ರಿಗಳು ಕೇಂದ್ರ ಸರ್ಕಾರದ 6000 ರೂ. ರಾಜ್ಯ ಸರ್ಕಾರದ 4000 ರೂ. ಸೇರಿದಂತೆ ಜಮೀನು ಪಹಣಿ ಇದ್ದ ಎಲ್ಲ ರೈತರಿಗೂ ಕೂಡಾ ತಲಾ 10 ಸಾವಿರ ರೂ.ಗಳನ್ನು ಬಿತ್ತನೆ ಸಂದರ್ಭದಲ್ಲಿ ಪಡೆದುಕೊಳ್ಳುತ್ತಿದ್ದಾರೆ.

ನೇರವಾಗಿ ರೈತರ ಖಾತೆಗೆ ಜಮಾ ಆಗುತ್ತಿರುವುದರಿಂದ ಅತ್ಯಂತ ಅನುಕೂಲವಾಗಿದೆ. ಈ ಯೋಜನೆಯ ಬಗ್ಗೆ ಪ್ರತಿಯೊಬ್ಬ ರೈತರೂ ಕೂಡಾ ಪ್ರಶಂಸೆ ವ್ಯಕ್ತ ಪಡಿಸುತ್ತಿದ್ದಾರೆ. ಆದರೆ ಸಾಲಮನ್ನಾದಂತಹ ಕಣ್ಣೊರೆಸುವ ತಂತ್ರದ ಯೋಜನೆಗಳಿಂದ ಜನರನ್ನು ದಾರಿತಪ್ಪಿಸುತ್ತಿದ್ದ ಕಾಂಗ್ರೆಸ್‌ ಮತ್ತು ಎಡಪಕ್ಷಗಳಿಗೆ ಭಯವುಂಟಾಗಿದೆ. ಪಿತೂರಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಬಸವರಾಜ, ಬಿಜೆಪಿ ಮಂಡಲ ಅಧ್ಯಕ್ಷ ಸಂಜೀವರೆಡ್ಡಿ, ಜ್ಯೋತಿ ಮಹೇಂದ್ರ, ಜಿಪಂ ಸದಸ್ಯೆ ಲಲಿತಾಬಾಯಿ ಸೋಮಿನಾಯ್ಕ, ಮುಖಂಡರಾದ ಎಚ್‌.ಪೂಜಪ್ಪ, ವಕ್ತಾರ ಲಕ್ಷ್ಮಣನಾಯ್ಕ ಮಾತನಾಡಿದರು.

ತಾಲೂಕು ಘಟಕದ ರೈತ ಮೋರ್ಚಾ ಅಧ್ಯಕ್ಷ ಶಿವನಗೌಡ, ಮುಖಂಡರಾದ ಎಸ್‌.ದೂದಾನಾಯ್ಕ, ತಾ.ಪಂ ಸದಸ್ಯ ಬಸವರಾಜ ನಾರಮ್ಮನವರ, ಈಟಿ ಲಿಂಗರಾಜ, ಸಂದೀಪ, ಬಸವನಗೌಡ, ಶಿರಾಜ್‌ ಬಾವಿಹಳ್ಳಿ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next