Advertisement

ಗಂಗಾವತಿ: ಜಿಲ್ಲಾ ಶೈಕ್ಷಣಿಕ ಸಮಾವೇಶ; ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕ, ಕೃಷಿಕ ಮತ್ತು ಸೈನಿಕರ ಪಾತ್ರ ಅಮೂಲ್ಯವಾದದು

03:30 PM Jan 22, 2023 | Team Udayavani |

ಗಂಗಾವತಿ: ದೇಶದ ಅಭಿವೃದ್ಧಿ ಶಿಕ್ಷಕ, ಕೃಷಿಕ ಮತ್ತು ಸೈನಿಕ ರಿಂದ ಸಾಧ್ಯವಾಗುತ್ತದೆ. ಆದ್ದರಿಂದ ಇವರ ಮಾರ್ಗದರ್ಶನ ಅವಶ್ಯ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

Advertisement

ಅವರು ಜಿಲ್ಲಾ ಪದವಿಪೂರ್ವ ಕಾಲೇಜುಗಳ ನೌಕರರ ಒಕ್ಕೂಟದ ವತಿಯಿಂದ ಅಮರ ಜ್ಯೋತಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಜಿಲ್ಲಾ ಶೈಕ್ಷಣಿಕ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು.

ಶೈಕ್ಷಣಿಕವಾಗಿ ಕೊಪ್ಪಳ ಜಿಲ್ಲೆಯ ಪ್ರಗತಿಗೆ ಉಪನ್ಯಾಸಕರು, ಶಿಕ್ಷಕರು ಕಾರಣರಾಗಿದ್ದಾರೆ. ಐಎಎಸ್,ಐಪಿಎಸ್, ಐಆರ್ ಎಸ್ ಐಎಎಫ್ ಮತ್ತು ಐಎಫ್ ಎಸ್ ಪರೀಕ್ಷೆಯಲ್ಲಿ ಸಾಧನೆ ಮಾಡಿ ಕೊಪ್ಪಳ ಜಿಲ್ಲೆಗೆ ಕೀರ್ತಿ ತಂದಿದ್ದು ಇದಕ್ಕೆ ಶಿಕ್ಷಕರು ಮತ್ತು ಉಪನ್ಯಾಸಕರು ಕಾರಣರಾಗಿದ್ದಾರೆ. ಶಿಕ್ಷಣ ಪಡೆದ ವ್ಯಕ್ತಿ ಸಮಾಜ ಸುಧಾರಣೆಗೆ ಕಾರಣರಾಗುತ್ತಾನೆ ಎಂದರು.

ಶೈಕ್ಷಣಿಕ ಕ್ಷೇತ್ರದ ಕುರಿತು ಸಮಾವೇಶದಲ್ಲಿ ಚಿಂತನೆ ನಡೆದು ಎನ್.ಇ.ಪಿ. ಅನುಷ್ಠಾನಕ್ಕೆ ನೆರವಾಗಬೇಕಿದೆ. ಸರಕಾರದ ಸೌಕರ್ಯ ಬಳಕೆ ಮಾಡಿಕೊಂಡು ಪ್ರತಿಯೊಬ್ಬರು ಮುಂದೆ ಬರುವಂತೆ ಕರೆ ನೀಡಿದರು.

ವಿಧಾನಪರಿಷತ್ ಸದಸ್ಯ ಶಶಿನಮೋಶಿ ಮಾತನಾಡಿ, ವಿದ್ಯಾರ್ಥಿಗಳ ಸಾಮಾರ್ಥ್ಯ ಹೆಚ್ಚಿಸುವ ಕಾರ್ಯ ಮಾಡಿ ಅವರ ಬದುಕನ್ನು ರೂಪಿಸುವ ಶಿಕ್ಷಕ ಉಪನ್ಯಾಸಕ ಮತ್ತು ಪ್ರಾಧ್ಯಾಪಕ ವೃತ್ತಿ ಅತ್ಯಂತ ಪವಿತ್ರವಾಗಿದೆ.  ಎನ್ ಇಪಿ ಅನುಷ್ಠಾನದ ಮೂಲಕ ದೇಶದ ಶೈಕ್ಷಣ ಕ ಕ್ಷೇತ್ರ ವಿಶ್ವ ಮಟ್ಟದಲ್ಲಿ ಉಪಯುಕ್ತವಾಗುತ್ತದೆ ಎಂದರು.

Advertisement

ಸಮಾವೇಶದಲ್ಲಿ ಎಂಎಲ್ಸಿ ಶಶಿಲ್ ನಮೋಶಿ, ಶಾಸಕ ಪರಣ್ಣ ಮುನವಳ್ಳಿ, ಶಿಕ್ಷಣ ಪ್ರೇಮಿ ನೆಕ್ಕಂಟಿ ಸೂರಿಬಾಬು, ಪ್ರಾಚಾರ್ಯರ ಸಂಘದ ಜಿಲ್ಲಾಧ್ಯಕ್ಷ ಅನೀಲಕುಮಾರ, ಪಿಯು ಇಲಾಖೆ ಉಪನಿರ್ದೇಶಕ ಮೃಣಾಲ್ ಸಾಹುಕಾರ, ಪ್ರಾಚಾರ್ಯರ ಸಂಘದ ರಾಜ್ಯಾಧ್ಯಕ್ಷ ಹಾಗೂ ಎಂಎಲ್‌ಸಿ ಶ್ರೀ ಕಂಠೇಗೌಡ, ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ನಿಂಗೇಗೌಡ, ಬಳ್ಳಾರಿ ವಿವಿ ವಿದ್ಯಾ ವಿಷಯಕ್ ಪರಿಷತ್ ಸದಸ್ಯ ಶಿವಾನಂದ ಮೇಟಿ, ಶಂಕ್ರಯ್ಯ ಅಜ್ಜಿಗೇರಿಮಠ, ಜಿಲ್ಲಾಧ್ಯಕ್ಷ ಸೋಮಶೇಖರ್ ಗೌಡ, ಉಪನ್ಯಾಸಕರ ಸಂಘದ ಈಶ್ವರ ಶೆಟ್ಟಿ, ಜಿ.ಎಂ. ಭೂಸನೂರುಮಠ, ಡಾ.ರವಿ ಚವ್ಹಾಣ, ಬಸಪ್ಪ ನಾಗೋಲಿ, ಎಚ್.ಬಿ.ಜಗ್ಗಲ್, ಸಂಜಯ್ ಬಡಿಗೇರ್, ಮಹೆಬೂಬ್ ಅಲಿ, ಮಹಾಬಲೇಶ್ವರ, ಪತ್ರೆಪ್ಪ ಚತ್ರಕಿ, ಫಕೀರಪ್ಪ ವಜ್ರಬಂಡಿ, ರಮೇಶ ಗಬ್ವೂರು, ರುದ್ರೇಶ ಇದ್ದರು.

ದ್ವಿತಿಯಾ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಮತ್ತು ನಿವೃತ್ತ ಉಪನ್ಯಾಸಕರನ್ನು ಸನ್ಮಾನಿಸಲಾಯಿತು.

ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು ಕಲ್ಯಾಣ ಕರ್ನಾಟಕ ಭಾಗದ 6 ಜಿಲ್ಲೆಗಳಿಗೆ ಸಂವಿಧಾನದ ಕಲಂ 371(ಜೆ) ಅನುಷ್ಠಾನ ಮಾಡಲಾಗಿದ್ದು ನೇಮಕಾತಿ, ಪ್ರವೇಶ ಮತ್ತು ಭಡ್ತಿ ಸೇರಿ ಸರಕಾರದ ಸೌಕರ್ಯ ಕಲ್ಪಿಸಲು ಕೆಲ ಅಧಿಕಾರಿಗಳು ದಾರಿ ತಪ್ಪಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್ ಹಾಗೂ ಭಕ್ತ ವಸ್ತಲ್ ಕಮೀಟಿ ಘೋಷಣೆಯಂತೆ ಕಲಂ 371(ಜೆ) ಅನುಷ್ಠಾನ ಎಸ್ಸಿ ಎಸ್ಟಿ ಮೀಸಲಾತಿ ಯಷ್ಟೆ ಮಹತ್ವವಿದೆ. ಅದನ್ನು ಎಚ್ಚರಿಕೆಯಿಂದ ಅನುಷ್ಠಾನ ಮಾಡಬೇಕು. ಕಲ್ಯಾಣ ಕರ್ನಾಟಕ ಭಾಗದವರು ಸಾಮಾನ್ಯ ಮೀಸಲಾತಿ ಯಲ್ಲಿ ಸಾಧನೆ ಮಾಡಿದರೆ ಮೊದಲು ಅದನ್ನು ಪರಿಗಣ ಸಬೇಕು. ಜತೆಗೆ ಭಡ್ತಿ ಸೇರಿ ಸರಕಾರದ ಸೌಲಭ್ಯಗಳನ್ನು ಪಡೆಯಲು ಕಲಂ 371(ಜೆ) ಅನ್ವಯಿಸಲು ಸಚಿವ ಬಿ. ಶ್ರೀರಾಮುಲು ನೇತೃತ್ವದ ಉಪ ಸಮಿತಿ ಸರಕಾರಕ್ಕೆ ಶಿಫಾರಸ್ಸು ಮಾಡಿದೆ. ಒಂದು ವಾರದಲ್ಲಿ ಸರ್ಕಾರದ ಆದೇಶ ಹೊರಬೀಳಲಿದೆ. –ಶಶಿ ಜಿ ನಮೋಶಿ ಎಂಎಲ್ಸಿ.

ನಗರದ ಅಮರಜ್ಯೋತಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಜಿಲ್ಲಾ ಪದವಿಪೂರ್ವ ಕಾಲೇಜು ಗಳ ನೌಕರರ ಒಕ್ಕೂಟದ ಜಿಲ್ಲಾ ಶೈಕ್ಷಣಿಕ ಸಮಾವೇಶದ ವೇದಿಕೆಯಲ್ಲಿ ಮಹಿಳಾ ಉಪನ್ಯಾಸಕರನ್ನು ಸಂಘಟಕರು ನಿರ್ಲಕ್ಷ್ಯ ಮಾಡಿದ್ದು, ಕಂಡು ಬಂದಿದೆ. ಸುಮಾರು 30 ಗಣ್ಯರು ವೇದಿಕೆಯಲ್ಲಿದ್ದರೂ ಇವರಲ್ಲಿ ಒಬ್ಬರು ಮಹಿಳಾ ಅತಿಥಿಗಳಿಲ್ಲದಿರುವುದು ಸರಿ ಎನ್ನಿಸುತ್ತಿಲ್ಲ. ಅಕ್ಷರದವ್ವ ಸಾವಿತ್ರಿ ಭಾಪುಲೆ ಭಾವಚಿತ್ರವಿಟ್ಟಿದ್ದು ಹೆಮ್ಮೆಯಾದರೂ ಕಾರ್ಯಕ್ರಮದ ಪಟ್ಟಿಯಲ್ಲಿ ಮಹಿಳಾ ಅತಿಥಿಗಳಿರದಿರುವುದು ನೋವು ತಂದಿದೆ.   -ಹೆಸರೇಳಲು ಇಚ್ಛಿಸದ ಮಹಿಳಾ ಉಪನ್ಯಾಸಕಿ.

Advertisement

Udayavani is now on Telegram. Click here to join our channel and stay updated with the latest news.

Next