ಕೋಲಾರ: ನಗರದ ಎಸ್‌ಎನ್‌ಆರ್ ಆಸ್ಪತ್ರೆ ಅಪಘಾತ ತುರ್ತು ನಿಗಾ ಘಟಕವನ್ನು ಆಸ್ಪತ್ರೆಯ ಹಿಂಭಾಗಕ್ಕೆ ಸ್ಥಳಾಂತರಿಸಿ ಈಗಿರುವ 5 ಬೆಡ್ ಗಳಿಂದ 10 ಬೆಡ್ ಸಾಮರ್ಥ್ಯದ ಘಟಕವನ್ನಾಗಿ ಪರಿವರ್ತಿಸುವಂತೆ ಜಿಲ್ಲಾ ಧಿಕಾರಿ ಡಾ.ಆರ್. ಸೆಲ್ವಮಣಿ ಸೂಚನೆ ನೀಡಿದರು.
ನಗರದ ಎಸ್.ಎನ್.ಆರ್.ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಅವರು ಆಸ್ಪತ್ರೆಯ ವ್ಯವಸ್ಥೆ ಗಳನ್ನು ಪರಿಶೀಲಿಸಿದರು. ತುರ್ತು ನಿಗಾ ಘಟಕಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಅಪಘಾತ ಮತ್ತು ಇತರೆ ಸಮಸ್ಯೆಗಳಿಂದ ತುರ್ತು ನಿಗಾ ಘಟಕಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ.
ರಿಪೇರಿ ಮಾಡಿಸಿ: ಈಗ ಕೇವಲ 5 ಬೆಡ್ ವ್ಯವಸೆ § ಇದ್ದು, ಸಾಕಾಗುವುದಿಲ್ಲ. ಒಂದು ವಾರದೊಳಗೆ ಈ ಸಂಬಂಧ ಒಂದು ವರದಿ ಸಿದ್ಧಪಡಿಸಿ ಕಳಿಸಿ, ಆಸ್ಪತ್ರೆಯಲ್ಲಿಯೇ ಉತ್ತಮ ಕೊಠಡಿ ಗುರ್ತಿಸಿಕೊಳ್ಳಿ, ಅಗತ್ಯವಿದ್ದರೆ ಕಟ್ಟಡ ರಿಪೇರಿ ಮಾಡಿಸಿ ಸುಸಜ್ಜಿತ ಘಟಕ ತೆರೆಯುವಂತೆ ಜಿಲ್ಲಾ ಸರ್ಜನ್ ಡಾ.ನಾರಾಯಣಸ್ವಾಮಿ ಅವರಿಗೆ ಸೂಚನೆ ನೀಡಿದರು.
ಗುತ್ತಿಗೆದಾರರನ್ನು ಬದಲಿಸಿ: ಕೆಲವು ಭಾಗಗಳಲ್ಲಿ ಶುಚಿತ್ವ ಇಲ್ಲದೆ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ ಆಸ್ಪತ್ರೆಯಲ್ಲಿ ಶುಚಿತ್ವ ಕಾಯ್ದುಕೊಳ್ಳಬೇಕಾಗಿದೆ. ಸಾಧ್ಯವಾದರೆ ಗುತ್ತಿಗೆದಾರರನ್ನು ಬದಲಿಸುವಂತೆ ಸೂಚನೆ ನೀಡಿದರು. ಆಸ್ಪತ್ರೆಯಲ್ಲಿ ವೈದ್ಯರು ಮತ್ತು ನರ್ಸ್ ಗಳ ಕೊರತೆಯ ಬಗ್ಗೆ ಮಾಹಿತಿ ಪಡೆದ ಅವರು, ಕೂಡಲೇ ಸರ್ಕಾರಕ್ಕೆ ಪತ್ರ ಬರೆದು ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು. ಎನ್‌ಎಚ್‌ಎಂ ಯೋಜನೆಯಲ್ಲಿ ಲಭ್ಯವಿರುವ ಸೌಲಭ್ಯ ಪಡೆದುಕೊಂಡು ಆಸ್ಪತ್ರೆಯನ್ನು ಮತ್ತಷ್ಟು ಸುಸಜ್ಜಿತಗೊಳಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಇದುವರೆಗೂ 2 ಲಕ್ಷ ಕೋವಿಡ್ ಟೆಸ್ಟ್ ಮಾಡಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಜಿಲ್ಲಾ ಧಿಕಾರಿ, ಕೋವಿಡ್ ವಿಚಾರದಲ್ಲಿ ಇದೇ ರೀತಿ ಮುಂಜಾಗ್ರತೆಯಿಂದ ಇರಬೇಕು ಎಂದು ಸೂಚನೆ ನೀಡಿದರು.
ಇದು ನನ್ನ ಮೊದಲ ಭೇಟಿಯಾಗಿದ್ದು, ಇನ್ನು ಹತ್ತು ದಿವಸಗಳಲ್ಲಿ ಮತ್ತೆ ಇಲ್ಲಿಗೆ ಬರುತ್ತೇನೆ. ಆಸ್ಪತ್ರೆಯಲ್ಲಿ ತುರ್ತಾಗಿ ಆಗಬೇಕಾಗಿರುವ ಕೆಲಸ ಕಾರ್ಯಗಳ ಪಟ್ಟಿ ತಯಾರಿಸಿಕೊಳ್ಳಿ ಎಂದು ಡಾ.ನಾರಾಯಣಸ್ವಾಮಿ ಅವರಿಗೆ ಸೂಚನೆ ನೀಡಿದರು.
ರಕ್ತ ಪರೀಕ್ಷೆ, ಸಿಟಿ ಸ್ಕ್ಯಾನ್ ಮತು ಎಂಆರ್‌ಐ ಸ್ಕ್ಯಾನ್‌ಗಳಿಗೆ ಸ್ವಲ್ಪ ಮಟ್ಟಿನ ಶುಲ್ಕ ವಿಧಿ ಸುವುದರಿಂದ ಆಸ್ಪತ್ರೆಯ ಇತರೆ ಖರ್ಚು ವೆಚ್ಚ ಗಳಿಗೆ ಹಣ ಒದಗಿಸುವಂತಾಗುತ್ತದೆ. ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್‌ದಾರರನ್ನು ಪರಿಗಣಿಸಿ ಶುಲ್ಕ ವಿಧಿಸಲು ಅನುಮತಿ ನೀಡಬೇಕು ಎಂದು ಜಿಲ್ಲಾ ಸರ್ಜನ್ ಡಾ.ನಾರಾಯಣಸ್ವಾಮಿ ಕೋರಿದರು.