Advertisement
8ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನದ ಅಧ್ಯಕ್ಷರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಸ್ಯೆ ಎಷ್ಟೇ ತೀವ್ರತೆಯಾಗಿದ್ದರೂ ಸಹ ಇತ್ಯರ್ಥ ಮಾಡಬಹುದು. ಅದಕ್ಕಾಗಿ ಸಂವಾದ ಬಹಳ ಮುಖ್ಯವಾಗಿರುತ್ತದೆ ಎಂದರು.
Related Articles
Advertisement
ಗಂಡಾಂತರ: ಕಾವೇರಿ ಕಣಿವೆಯಲ್ಲಿ ನೀರು ಇಲ್ಲದಿದ್ದರೆ ಬೆಂಗಳೂರಿನ ನಿವಾಸಿಗಳು ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣ ವಾಗಲಿದೆ. ಪರಿಸರ ನಾಶದಿಂದ ಆಗುತ್ತಿರುವದುಷ್ಪರಿಣಾಮಗಳ ಕುರಿತು ಈಗಾಗಲೇವಿಜ್ಞಾನಿಗಳು ಎಚ್ಚರಿಸಿದ್ದು, ಮುಂದಿನದಿನಗಳಲ್ಲಿ ಬೆಂಗಳೂರಿಗೆ ಗಂಡಾಂತರ ಕಾದಿದೆ ಎಂದು ಪುನರುಚ್ಚರಿಸಿದರು.
ಈ ಸಂದರ್ಭದಲ್ಲಿ ಶಾಂತ ವಿದ್ಯಾ ಸಂಸ್ಥೆಮುಖ್ಯ ಆಡಳಿತಾಧಿಕಾರಿ ಡಾ.ಕೋಡಿರಂಗಪ್ಪ, ಹಿರಿಯ ಸಾಹಿತಿ ಎನ್.ಸಂಜೀವಪ್ಪ, ಜಿಲ್ಲಾ ಕಸಪ ಅಧ್ಯಕ್ಷ ಡಾ.ಕೈವಾರ ಶ್ರೀನಿವಾಸ್ ಉಪಸ್ಥಿತರಿದ್ದರು.
ಸಮಸ್ಯೆ ಇತ್ಯರ್ಥಕ್ಕೆ ಸಕಾರಾತ್ಮಕ ಸ್ಪಂದನೆ ಅಗತ್ಯ :
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶಾಶ್ವತ ನೀರಾವರಿ ಯೋಜನೆಯಿಂದ ಜನವಂಚಿತರಾಗಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಗಂಭೀರವಾಗಿ ಪರಿಗಣಿಸಿ ಸಮಸ್ಯೆಯನ್ನು ಬಗೆಹರಿಸಲು ಸಕಾರಾತ್ಮಕವಾಗಿ ಸ್ಪಂದಿಸಬೇಕಾಗಿದೆ ಎಂದು ಸಮ್ಮೇಳನಾಧ್ಯಕ್ಷ ಕೆ. ಅಮರನಾರಾಯಣ ಅಭಿಪ್ರಾಯಪಟ್ಟರು. ಜಿಲ್ಲೆಯಲ್ಲಿ ಪ್ರತಿಯೊಬ್ಬರು ಗಿಡಮರಗಳನ್ನು ಬೆಳೆಸಿ ಕೋಟಿನಾಟಿ ಅಭಿಯಾನ ಯಶಸ್ವಿಗೊಳಿಸಿ ಕೋಟಿ ಗಿಡಗಳನ್ನು ನಾಟಿ ಮಾಡಿ ಪೋಷಣೆ ಮಾಡಿದರೆ ಮುಂದಿನ 10 ವರ್ಷಗಳಲ್ಲಿಜಿಲ್ಲೆ ಮಳೆನಾಡು ಪ್ರದೇಶವಾಗಲಿದ್ದು, ಈ ಭಾಗದಲ್ಲಿರುವ ನದಿಗಳು ಹರಿದುರೈತರು ಮತ್ತು ಜನಸಾಮಾನ್ಯರುಸಮೃದ್ಧವಾಗಿ ಜೀವನ ನಡೆಸುವುದರಲ್ಲಿ ಅನುಮಾನವಿಲ್ಲ ಎಂದರು.
ಕನ್ನಡ ಭಾಷೆ ವಿಷಯದಲ್ಲಿಮುಕ್ತ ಮನಸ್ಸಿನಿಂದ ಇರಬೇಕು.ಕೇವಲ ಆದೇಶ ದಿಂದ ಕನ್ನಡಭಾಷಾಭಿವೃದ್ಧಿ ಮಾಡುವ ಬದಲಿಗೆ ಇಚ್ಚಾಶಕ್ತಿ ಪ್ರದರ್ಶಿಸಬೇಕು. ಜಿಲ್ಲೆಯಗಡಿ ಪ್ರದೇಶಗಳಲ್ಲಿರುವ ಸರ್ಕಾರಿಶಾಲೆಗಳನ್ನು ಗಡಿ ಪ್ರದೇಶ ಅಭಿವೃದ್ಧಿಪ್ರಾಧಿಕಾರದಿಂದ ನೆರವು ಪಡೆದು ಅಭಿವೃದ್ಧಿಗೊಳಿಸಬೇಕು. –ಕೆ.ಅಮರನಾರಾಯಣ, ಸಮ್ಮೇಳನಾಧ್ಯಕ್ಷ